Featured

ನನ್ನ ಮಗಳು ಪಿಯುಸಿಯಲ್ಲಿ ಅನುತೀರ್ಣ ವಾಗಲು ಕಾಂಗ್ರೆಸ್ ಕಾರಣ : ಉಮೇಶ್ ಜಾಧವ್ -Vishwanews24

ಕಲಬುರ್ಗಿ, : ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರಿದ್ದ ಚಿಂಚೋಳಿ ಕ್ಷೇತ್ರದ ಮಾಜಿ ಶಾಸಕ ಉಮೇಶ್ ಜಾಧವ್ ತನ್ನ ಮಗಳು ಪಿಯುಸಿಯಲ್ಲಿ ಅನುತೀರ್ಣ ಆಗಲು ಕಾಂಗ್ರೆಸ್​ ನಾಯಕರು ಸುಖಾಸುಮ್ಮನೆ ಆರೋಪಿಸಿ ನೀಡಿದ ಮಾನಸಿಕ ಹಿಂಸೆಯೇ ಕಾರಣ ಎಂದು ಆರೋಪಿಸಿದ್ದಾರೆ.

ನನ್ನ ಪುತ್ರಿ ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ಅಲ್ಲಿನ ಶಿಕ್ಷಕರೊಬ್ಬರು, ಇವರ ಅಪ್ಪ ಮಾರಾಟವಾಗಿದ್ದಾನೆ ಎಂದು ಹೇಳಿ ಮಾನಸಿಕ ಹಿಂಸೆ ನೀಡಿದ್ದಾರೆ. ಇದರಿಂದ ನೊಂದುಕೊಂಡ ಮಗಳು ಪರೀಕ್ಷೆ ಬರೆಯದೇ ಅಳುತ್ತಾಲೇ ಮನೆಗೆ ಹಿಂತಿರುಗಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೂ ಮುಂದಾಗಿದ್ದಳು. ಇದನ್ನು ಗಮನಿಸಿದ ನನ್ನ ಪತ್ನಿ ಆಕೆಯನ್ನು ಜೀವಂತ ಉಳಿಯುವಂತೆ ನೋಡಿಕೊಂಡಿದ್ದಾಳೆ ಎಂದಿದ್ದಾರೆ.

ಈ ಹಿಂದೆಯೇ ಪ್ರಿಯಾಂಕ್ ಖರ್ಗೆ ಅವರು ನನ್ನನು ಕಾಂಗ್ರೆಸ್ ಪಕ್ಷದಿಂದ ಹೊರಗಟ್ಟಬೇಕು ಎಂದು ತಂತ್ರ ಮಾಡಿಕೊಂಡಿದ್ದರು. ನನ್ನ ಮಗನ ವಿವಾಹದ ಸಂದರ್ಭ ಕೂಡಾ ಪ್ರಿಯಾಂಕ್ ಖರ್ಗೆಯ ಆಪ್ತರು ಮನೆಗೆ ಬಂದು ಗಲಾಟೆ ಎಬ್ಬಿಸಿದ್ದರು. ಇದನ್ನು ಕಂಡು ನಮ್ಮ ಮನೆಯಲ್ಲಿದ್ದ ಬೀಗರು, ಅತಿಥಿಗಳು ಅಂದೇ ಅವರ ಊರಿಗೆ ಹಿಂತಿರುಗಿದ್ದರು ಎಂದು ಆರೋಪಿಸಿದರು.

ನನ್ನ ಪುತ್ರಿ ಈ ಹಿಂದೆ ಪ್ರತಿ ಸಾರಿ ಉನ್ನತ ಶ್ರೇಣಿಯಲ್ಲಿ ಪರೀಕ್ಷೆಯಲ್ಲಿ ಪಾಸು ಆಗುತ್ತಿದ್ದಳು. ಆದರೆ, ಕಾಂಗ್ರೆಸ್​ ನಾಯಕರು ನಮಗೆ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದರು. ಇದರಿಂದ ನಮ್ಮ ಕುಟುಂಬ ಸಾಕಷ್ಟು ನೋವನ್ನು ಅನುಭವಿಸಿತ್ತು. ನಾನು ದುಡ್ಡಿಗಾಗಿ ಬಿಜೆಪಿಗೆ ಮಾರಾಟವಾಗಿದ್ದೇನೆ ಎಂದು ಕಾಂಗ್ರೆಸ್​ ನಾಯಕರು ಮಾಡಿದ ಆರೋಪವೇ ಕಾರಣ ಎಂದಿದ್ದಾರೆ.

 

Vishwa News 24

Recent Posts

ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು – vishwanews24

ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು ಉಡುಪಿ: ಕಾರ್ಕಳದಲ್ಲಿ 2027ರಲ್ಲಿ ನಡೆಯಲಿರುವ…

10 hours ago

ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ – vishwanews24

ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ…

11 hours ago

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ – vishwanews24

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದೋ? ಅಥವಾ ಕೆಟ್ಟದೋ? ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? ಇದು ನಿಮ್ಮ…

11 hours ago

ಕಾಪು: ತಮಿಳುನಾಡು ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಬಿದ್ದು ಮೀನುಗಾರ ನಾಪತ್ತೆ – vishwanews24

ಕಾಪು: ತಮಿಳುನಾಡು ಮೂಲದ ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಮೀನುಗಾರ ನಾಪತ್ತೆ  ಕಾಪು: ಕಾಪು ಕಡಲ ಕಿನಾರೆಯಲ್ಲಿ…

11 hours ago

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು – vishwanews24

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…

14 hours ago

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು – vishwanews24

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…

14 hours ago