ದುಬೈ: ‘ನನ್ನ ಸ್ವಂತ ಇಚ್ಛೆಯಿಂದ ಅಬುಧಾಬಿಗೆ ಹೋಗಿದ್ದೇನೆ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ’ ಎಂದು ಕೇರಳದ 19 ವರ್ಷದ ಕ್ರೈಸ್ತ ಹುಡುಗಿ ಸಿಯಾನಿ ಬೆನ್ನಿ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ವಾಸವಾಗಿರುವ ಸಿಯಾನಿ ಬೆನ್ನಿಯ ಪೋಷಕರು ಮೂಲತಃ ಕೇರಳದ ಕೋಝಿಕೋಡ್ ನವರಾಗಿದ್ದು ಮಗಳು ಕಣ್ಮರೆಯ ಬೆನ್ನಲ್ಲೇ, ಸಿಯಾನಿ ಬೆನ್ನಿಯ ಪೋಷಕರು ನವದೆಹಲಿಯ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮಾತ್ರವಲ್ಲದೇ ಆಕೆಯ ಕಾಲೇಜು ಸಹಪಾಠಿಗಳು, ” ವಿಶ್ವದಾದ್ಯಂತ ಹಾನಿ ಉಂಟುಮಾಡುವ ಶಕ್ತಿಯೊಂದು ಭಾರತೀಯ ಪ್ರಜೆಯನ್ನು ಅಪಹರಿಸಿದೆ ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಸಿಯಾನಿ ಬೆನ್ನಿ ಕಿಡ್ನಾಪ್ ಮಾಡಿ ಭಯೋತ್ಪಾದಕ ತಂಡದಲ್ಲಿ ಸೇರಲು ಒತ್ತಾಯಿಸಲಾಗಿದೆ ಎಂದು ವರದಿ ಪ್ರಸಾರವಾಗಿತ್ತು.
ಈ ಎಲ್ಲಾ ಬೆಳವಣಿಗೆಯ ಬಳಿಕ ಭಾನುವಾರ ಗಲ್ಫ್ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಸಿಯಾನಿ ಬೆನ್ನಿ, “ಇದು ನಿಜವಲ್ಲ. ನಾನು ನನ್ನ ಸ್ವಇಚ್ಚೆಯಿಂದ ಅಬುಧಾಬಿಗೆ ಬಂದಿದ್ದೇನೆ. ನನ್ನ ಮೇಲೆ ಯಾವುದೇ ಬಾಹ್ಯ ಒತ್ತಡವಿಲ್ಲ, ನಾನು ಭಾರತದ ವಯಸ್ಕ ಪ್ರಜೆಯಾಗಿದ್ದು, ನನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ” ಎಂದು ಹೇಳಿದ್ದಾರೆ.
ನವದೆಹಲಿಯ ಮೇರಿ ಆಂಡ್ ಜೀಸಸ್ ಕಾಲೇಜಿನಲ್ಲಿ ಸಿಯಾನಿ ಅಂತಿಮ ಪದವಿ ವಿದ್ಯಾರ್ಥಿನಿಯಾಗಿದ್ದು, ನಾಪತ್ತೆಯಾಗುವ ಸೆಪ್ಟೆಂಬರ್ 18 ರಂದು ಬೆಳಿಗ್ಗೆ 11 ಗಂಟೆಯವರೆಗೆ ತರಗತಿಗೆ ಹಾಜರಾಗಿದ್ದರು. ಆದರೆ ಆ ಬಳಿಕ ಅದೇ ದಿನ ಮಧ್ಯಾಹ್ನ, 2.45ರ ವೇಳೆಗೆ ಗೋ-ಏರ್ ವಿಮಾನವನ್ನೇರಿ ಅಬುಧಾಬಿಗೆ ಪ್ರಯಾಣಿಸಿದ್ದರು.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…