ಉಡುಪಿ: ಕಳೆದ ಚುನಾವಣೆಯಲ್ಲಿ ನನ್ನ ಬಗ್ಗೆ ಬಹಳಷ್ಟು ಅಪ ಪ್ರಚಾರ ಮಾಡಿ ಚುನಾವಣೆಯಲ್ಲಿ ಸೋಲಾಯ್ತು .ಈ ಚುನಾವಣೆಯಲ್ಲಿ ಕೂಡಾ ನನ್ನ ಬಗ್ಗೆ ಅಪ ಪ್ರಚಾರ ಮತ್ತೆ ಶುರುವಾಗಿದೆ.ನನ್ನ ಬಗ್ಗೆ ಮತದಾರರು ತಿಳಿದುಕೊಂಡಿದ್ದಾರೆ ಅನ್ನೋ ನಂಬಿಕೆ ನನಗಿದೆ. ಅಪಪ್ರಚಾರ ಮಾಡುವವರಿಗೆ ಈ ಬಾರಿಯ ಚುನಾವಣೆಯಲ್ಲಿ ಜನ ಸರಿಯಾದ ಪಾಠ ಕಲಿಸ್ತಾರೆ ಅಂತಾ ಕಾಪು ಚುನಾವಣಾ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಮುದ್ರಾಡಿ ಬಿಲ್ಲವ ಸಮಾಜದ ಸಮಾಜಸೇವಾ ಸಂಘಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ನನ್ನ ಜೀವನ ತೆರೆದ ಪುಸ್ತಕ.. ನಿಮಗೆಲ್ಲ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ.ಕೋಟಿ ಚೆನ್ನಯ್ಯ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಗಳು ನಮ್ಮ ಸಮಾಜದ ಮಹಾನ್ ಶಕ್ತಿ..ಇತರ ಎಲ್ಲಾ ಸಮುದಾಯದಕ್ಕೆ ಆದರ್ಶಪ್ರಾಯವಾದ ಚಿಂತನೆಯನ್ನು ಬಿತ್ತಿದವರು ನಾರಾಯಣ ಗುರುಗಳು..ಈ ಭಾಗದ ಅಭಿವ್ರದ್ಧಿಗಾಗಿ ಸಾಕಷ್ಟು ಅನುದಾನವನ್ನು ಶಾಸಕನಾಗಿದ್ದ ಅವಧಿಯಲ್ಲಿ ಒದಗಿಸಿಕೊಟ್ಟ ತ್ರಪ್ತಿ ನನಗಿದೆ. ಇನ್ನಷ್ಟು ಕೆಲಸವನ್ನು ಮಾಡಲು ಶಕ್ತಿಯನ್ನು ನೀವು ಮನ್ ತುಂಬಬೇಕಿದೆ ಅಂತಾ ಸೊರಕೆ ಹೇಳಿದ್ದಾರೆ.
ಬಿಲ್ಲವ ಮುಖಂಡರಾದ ಸುರೇಶ ಸುವರ್ಣ,ನವೀನ್ ಚಂದ್ರ ಸುವರ್ಣ,ಶಿವಾಜಿ ಸುವರ್ಣ,ಆನಂದ ಪೂಜಾರಿ, ಸುಧೀರ್,ಶೇಖರ ಶಾಂತಿ, ರೋಹನ್ ಕುಮಾರ್, ಕ್ರಷ್ಣ ಪೂಜಾರಿ, ಗುಣಕರ ಪೂಜಾರಿ,, ರವಿರಾಜ್, ಡೇವಿಡ್, ಅಜಿತ್ ಪೂಜಾರಿ, ಸುಜಾತ ಸುವರ್ಣ, ಜಯಶ್ರೀ ಉಪಸ್ಥಿತರಿದ್ದರು.
ಬಾಕ್ಸ್ ಐಟಮ್: ನಾನು ವ್ಯಾಪಾರಸ್ಥನಲ್ಲ. ಸುಮಾರು 40 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಮಾಡ್ತಾ ಬಂದಿದೀನಿ..ಜನಸೇವೆಗಾಗಿ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಕಾಪು ಕ್ಷೇತ್ರದಲ್ಲಿ ಇತಿಹಾಸ ಕಂಡು ಕೇಳರಿಯದ ಅಭಿವೃದ್ಧಿ ಯನ್ನು ಮಾಡಿದೀನಿ ಅನ್ನೋ ಖುಷಿ
ಇದೆ. ಈ ಬಾರಿ ಇನ್ನೊಮ್ಮೆ ಅವಕಾಶ ಕೊಟ್ಟರೆ ಕಾಪು ಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ನಿಸ್ಸಂದೇಹವಾಗಿ ಮಾಡ್ತಿನಿ ಅನ್ನೋ ವಾಗ್ದಾನ ಮಾಡ್ತಿನಿ ಅಂತಾ ಸೊರಕೆ ಹೇಳಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…