Featured

ನನ್ನ ಹೇಳಿಕೆಯಿಂದ ಸಿದ್ದರಾಮಯ್ಯ ಅವರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ , ಬಿಜೆಪಿ ಗೆಲ್ಲಿಸಬೇಕು ಅನ್ನೋದಷ್ಟೇ ನನ್ನ ಮಾತಿನ ಉದ್ದೇಶ : ಅಶ್ವತ್ಥನಾರಾಯಣ – Vishwanews24

ಟಿಪ್ಪು ಹೊಡೆದಂತೆ ಸಿದ್ದರಾಮಯ್ಯಅವರನ್ನು ಹೊಡೆಯಬೇಕು ಎಂಬ ಹೇಳಿಕೆಗೆ ಸಚಿವ ಅಶ್ವತ್ಥನಾರಾಯಣ ಕ್ಷಮೆಯಾಚನೆ

ಬಿಜೆಪಿ ಗೆಲ್ಲಿಸಬೇಕು ಅನ್ನೋದಷ್ಟೇ ನನ್ನ ಮಾತಿನ ಉದ್ದೇಶ

ಬೆಂಗಳೂರು: ನನ್ನ ಹೇಳಿಕೆಯಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಬೆಂಗಳೂರು: ಟಿಪ್ಪು ಹೊಡೆದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕು ಎಂಬ ಹೇಳಿಕೆಗೆ ಸಚಿವ ಅಶ್ವತ್ಥ ನಾರಾಯಣ ವಿಷಾದ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಈ ಹೇಳಿಕೆಯಿಂದ ಸಿದ್ದರಾಮಯ್ಯ ಅವರಿಗೆ ವೈಯಕ್ತಿಕವಾಗಿ ನೋವಾಗಿದ್ರೆ ವಿಷಾಧ ವ್ಯಕ್ತಪಡಿಸ್ತೇನೆ ಎಂದರು.

ಟಿಪ್ಪು ರೀತಿ ಸಿದ್ದರಾಮಯ್ಯ ಹತ್ಯೆ ಮಾಡಬೇಕು ಅನ್ನೋ ಬಗ್ಗೆ ಸ್ಪಷ್ಟನೆ ನೀಡಿದ ಅಶ್ವತ್ಥ್ ನಾರಾಯಣ್, ಮಂಡ್ಯದಲ್ಲಿ ಕಸಬಾ ಮಹಾಶಕ್ತಿ ಕೇಂದ್ರದ ಕಾರ್ಯರ್ತರ ಉದ್ದೇಶಿಸಿ ಮಾತನಾಡುವಾಗ ಮಾತನಾಡಿದೆ. ಟಿಪ್ಪು ಹೆಸರು ಉಲ್ಲೇಖ ಮಾಡಿದ್ದೆ.ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ಮಾಡ್ತಿದೆ. ಅದನ್ನು ಖಂಡಿಸಬೇಕಿದೆ. ಈ ಬಗ್ಗೆ ಜನರಿಗೆ ನಾನು ಸ್ಪಷ್ಟವಾಗಿ ಹೇಳಿದ್ದೆ ಎಂದರು.

ಬರುವ ಚುನಾವಣೆಯಲ್ಲಿ ಜನರ ಬೆಂಬಲ ನಮ್ಮ ಪರವಾಗಿ ಪಡೆದುಕೊಳ್ಳಬೇಕು. ನಾವು ಪ್ರಜಾಪ್ರಭುತ್ವ ದಲ್ಲಿ ಇದ್ದೇವೆ, ಯುದ್ಧದ ಕಾಲದಲ್ಲಿ ಇಲ್ಲ. ಪ್ರಜಾಪ್ರಭುತ್ವದಲ್ಲಿ ನಾವು ಗೆಲ್ಲಬೇಕಿದೆ. ಆ ವಿಚಾರವಾಗಿ ಹೇಳಿದ್ದೇನೆ ಹೊರತು ಬೇರೆಯ ರೀತಿ ಅಲ್ಲ ಎಂದು ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ವಿರೋಧ ಮಾಡ್ತಿದ್ದೇನೆ ವಿನಹ ವೈಯಕ್ತಿಕವಾಗಿ ಅಲ್ಲ. ಗೆಲುವು ಸೋಲು ಚುನಾವಣೆಯಲ್ಲಿ ಇದೆ. ಓಲೈಕೆ ಮಾಡುವ ಪಕ್ಷವನ್ನು ಸೋಲಿಸಬೇಕು. ಬಿಜೆಪಿ ಗೆಲ್ಲಿಸಬೇಕು ಅನ್ನೋದಷ್ಟೇ ನನ್ನ ಮಾತಿನ ಉದ್ದೇಶವಾಗಿತ್ತು ಎಂದರು‌.

ಆದರೂ, ತನ್ನ ಹೇಳಿಕೆಯಿಂದ‌ ಸಿದ್ದರಾಮಯ್ಯ ಅವರಿಗೆ ವಯಕ್ತಿಕ ವಾಗಿ ನೋವಾಗಿದ್ರೆ ವಿಷಾದ ವ್ಯಕ್ತಪಡಿಸ್ತೇನೆ. ಇವರ ಹಾಗೆ ಸಿಎಂಗೆ ನಾಯಿ, ಪ್ರಧಾನಿಗೆ ನರಹಂತಕ ಎಂದು ಸಂಬೋಧಿಸಿ ಜಾತಿ, ಧರ್ಮ ಆಧಾರಿತವಾಗಿ ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಇವರ ಹಾಗೆ ವೈಯಕ್ತಿಕವಾಗಿ ವಿರೋಧ ಮಾಡಿಲ್ಲ. ಚುನಾವಣೆಯಲ್ಲಿ ಗೆಲ್ಲಬೇಕೇ ವಿನಹ ಮತ್ತೆ ಬೇರೇನೂ ಅಲ್ಲ ಎಂದರು.

Vishwa News 24

Recent Posts

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ – vishwanews24

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ  ಸಮುದ್ರಪಾಲಾದ ಘಟನೆ ಉತ್ತರ…

4 hours ago

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – vishwanews24

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…

4 hours ago

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ – vishwanews24

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…

4 hours ago

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ – vishwanews24

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…

5 hours ago

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ – vishwanews24

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…

5 hours ago

ಹಿಂದಿ ಕಿರುತೆರೆ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…

5 hours ago