ವಿಜಯಪುರ: ನಮ್ಮಂತಹ ಹೋರಾಟಗಾರರು, ಪ್ರಾಮಾಣಿಕರು, ಹಿಂದುತ್ವ ವಾದಿಗಳಿಗೆ ಇಂದಿನ ರಾಜಕೀಯ ಬಿಜೆಪಿಯಲ್ಲಿ ಪ್ರವೇಶ ಇಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ಬಾಗಿಲನ್ನು ಬಂದ್ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಚುನಾವಣೆ ಇಲ್ಲ. ನಮ್ಮಂತಹ ಹೋರಾಟಗಾರರಿಗೆ, ಪ್ರಾಮಾಣಿಕರಿಗೆ, ಹಿಂದುತ್ವ ವಾದಿಗಳಿಗೆ ಇಂದಿನ ರಾಜಕೀಯ ಬಿಜೆಪಿಯಲ್ಲಿ ಪ್ರವೇಶ ಇಲ್ಲ. ಎಲ್ಲ ಕಳ್ಳರು, ದರೋಡೆಕೋರರು, ಭ್ರಷ್ಟರಿಗೆ ಬಿಜೆಪಿ ಬಾಗಿಲು ತೆಗೆಯುತ್ತದೆ. ಹೀಗಾಗಿ ಚುನಾವಣೆಗೆ ಬಾಗಿಲನ್ನು ಮುಚ್ಚಿದ್ದೇನೆ ಎಂದು ತಿಳಿಸಿದರು.
ರಮೇಶ್‌ಕುಮಾರ್ ಹೇಳಿಕೆ ಕುರಿತು ಮಾತನಾಡಿ, ಅವರು ಏನು ಮಾಡಿದ್ದಾರೋ ಅದು ಸತ್ಯವಾಗಿ ಹೊರ ಬಂದಿದೆ. ಈ ವಿಚಾರ ಬೇರೆಯವರ ಬಾಯಲ್ಲಿ ಬರುತ್ತಿತ್ತು. ಆದರೆ ಈಗ ಯಾರು ಆಸ್ತಿ ಮಾಡಿದ್ದಾರೆ, ಅವರ ಬಾಯಿಂದಲೇ ಬಂತು. ಮೊಘಲರು, ಬ್ರಿಟಿಷರು, ನೆಹರೂ ಮನೆತನದಲ್ಲಿ ರಾಹುಲ್ ಗಾಂಧಿವರೆಗೆ ಲೂಟಿ ಮಾಡಿದರು. ಲೂಟಿ ಮಾಡೋದ್ರಲ್ಲೇ ನಮ್ಮ ದೇಶ ನಡೆಯುತ್ತಿದೆ. ಇದನ್ನು ತಡೆಯುವ ಶಕ್ತಿ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರಿಗೆ ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಹಿಂದೂ ಮಹಿಳೆಯರ ರಕ್ಷಣೆ ನಾವೇ ಮಾಡಬೇಕು. ಅದು ನಮ್ಮ ಕರ್ತವ್ಯ. ಮುಸ್ಲಿಂ ಕಿಡಿಗೇಡಿಗಳ ಪುಂಡಾಟಿಕೆ ಇನ್ನು ನಡೆಯೋದಿಲ್ಲ. ಮುಸ್ಲಿಮರ ಗೂಂಡಾಗಿರಿ ನಡೆಯಲ್ಲ. ಹಿಂದೂ ಸಮಾಜ ಜಾಗೃತಿಯಾಗಿದೆ. ಮುಸ್ಲಿಮರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಹುಷಾರಾಗಿರಿ, ನಿಮ್ಮ ಪಾಡಿಗೆ ನೀವಿರಿ ಎಂದು ಎಚ್ಚರಿಸಿದರು.
ಗಲಭೆ, ಕೊಲೆ, ಹಿಂದೂಗಳನ್ನು ಕೆಣಕೋದು ಇನ್ನು ನಡೆಯುವುದಿಲ್ಲ. ಇದಕ್ಕೆ ಹಿಂದೂ ಸಮಾಜ ಉತ್ತರ ಕೊಡುತ್ತೆ ಸಂವಿಧಾನದ ಆಧಾರದ ಮೇಲೆ ದೇಶ ನಡೆಯುತ್ತಿದೆ. ಡಾ.ಬಿ.ಆರ್.ಅಂಬೇಡ್ಕರರ ಸಂವಿಧಾನ ಇದೆ. ಏನೇ ಇದ್ದರೂ ಪ್ರಜಾಪ್ರಭುತ್ವ ಆಧಾರದ ಮೇಲೆ ಧರಣಿ ಮಾಡಿ, ದೂರು ಕೊಡಿ. ಅದನ್ನು ಬಿಟ್ಟು ಚಾಕು, ತಲವಾರ್ ಹಿಡಿದು ಬರೋದಕ್ಕೆ ಇದು ತಾಲಿಬಾನ್ ಅಲ್ಲ ಎಂದು ಸೂಚಿಸಿದರು.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…