ಉಡುಪಿ

ನಮ್ಮೂರ ಗಣಪಣ ಅಂದ ಹೆಚ್ಚಿಸುವ , ಕಾಪು ಸಂಜೀವ ಅಂಚನ್ ಕೈಯಲ್ಲಿ ಮೂಡಿ ಬರುವ ಮುತ್ತು ಪೋಣಿಸಿದಂತೆ ಕಾಣುವ ಈ ಮಾಲೆ ಯಾವುದರದ್ದು ಗೊತ್ತಾ..?ಓದಿ ಈ ವರದಿ “ತೆರೆಮರೆ ಪ್ರತಿಭೆ”

ನಮ್ಮೂರ ಗಣಪಣ ಅಂದ ಹೆಚ್ಚಿಸುವ , ಕಾಪು ಸಂಜೀವ ಅಂಚನ್ ಕೈಯಲ್ಲಿ ಮೂಡಿ ಬರುವ ಮುತ್ತು ಪೋಣಿಸಿದಂತೆ ಕಾಣುವ ಈ ಮಾಲೆ ಯಾವುದರದ್ದು ಗೊತ್ತಾ..?ಓದಿ ಈ ವರದಿ “ತೆರೆಮರೆ ಪ್ರತಿಭೆ”

ಕಾಪು: ನಮ್ಮೊಳಗೆ ಅದೇಷ್ಟೋ ಪ್ರತಿಭೆಗಳು ಕಾಣ ಸಿಗುತ್ತೆ ಅದರಲ್ಲಿ ಕೆಲವರು ಪ್ರಚಾರಕ್ಕೆ ಬಂದರೆ ಇನ್ನು ಕೆಲವರು ತೆರೆಮರೆಯಲ್ಲಿಯೇ ತಮ್ಮ ಕಾಯಕವನ್ನ ಮಾಡುವವರೇ ಜಾಸ್ತಿ ಅಂತಹದೆ ಒಂದು ಹಿರಿಯ ಪ್ರತಿಭೆ ಕರ್ನಾಟಕದ ಕಾಪು ತಾಲೂಕಿನ ಪಡುಗ್ರಾಮದಲ್ಲಿದ್ದಾರೆ.

ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೆ ಬೆರೆಯುತ್ತಿರುವ ಇವರು ಮುತ್ತುಗಳನ್ನ ಪೋಣಿಸಿದಂತೆ ಕಾಣುವ ಈ ಮಾಲೆ ಸಿದ್ದ ಪಡಿಸುವ ಕಾರ್ಯದಲ್ಲಿ ಮಾತ್ರ ನಿಸ್ಸಿಮರು.ವ್ಯವಹಾರಿಕ ಮತ್ತು ಸಮಾಜಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಳ್ಳುತ್ತಿರುವ ಸಂಜೀವ ಡಿ ಅಂಚನ್ ಮೂಲತಹ ಕಾಪುವಿನವರು.

ಗಣೇಶನ ಹಬ್ಬ ಬಂತೆಂದರೆ ಸಾಕು ಈ ವ್ಯಕ್ತಿ ಫುಲ್ ಬ್ಯೂಸಿ, ಒಂದು ತಿಂಗಳ ಹಿಂದೆಯೇ ಈ ಮಾಲೆ ಮಾಡುವ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ ಹಾಗಾದರೇ ಆ ಮಾಲೇ ಯಾವುದು , ಹೇಗೆ ಮಾಡುತ್ತಾರೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ನಾವು ಸಾಮಾನ್ಯವಾಗಿ ಜಾತ್ರೆ ಸಮಾರಂಭಗಳಲ್ಲಿ ಕಾಣ ಬಹುದಾದ ಒಂದು ಅಂಗಡಿ ಚರುಮುರಿ ಅಥವಾ ಬೇಲ್ ಪುರಿ. ಸಣ್ಣ ದೀಪದ ಕೆಳಗೆ ಕೂತು ಸ್ಟೀಲ್ ಪಾತ್ರೆಗೆ ಒಂದು ಚಮಚ ಬಡಿಯುತ್ತಾ ಗ್ರಾಹಕರನ್ನ ತನ್ನ ಕಡೆ ಸೆಳೆದು ಉಪ್ಪು ಖಾರಿ,ಖಾರ ಹುಳಿ ಬೆರೆಸಿ ಬಾಯಿಗೆ ರುಚಿ ತರುವ ಮಂಡಕ್ಕಿಯ ಖಾಧ್ಯವನ್ನ ಸಿದ್ದ ಪಡಿಸಿ ಕೈಗಿಟ್ಟರೆ ಸಾಕು ಕ್ಷಣಾರ್ದದಲ್ಲಿ ತಿಂದು ಮುಗಿಸಿ ಬಿಡುತ್ತೆವೆ ಆದರೇ ಅದೇ ಮಂಡಕ್ಕಿಯಲ್ಲಿ ಅಂದ ಚೆಂದದ ಮಾಲೆ ತಯಾರಿಸಲು ಸಾಧ್ಯ ಎಂಬುದನ್ನ ತೋರಿಸಿಕೊಟ್ಟವರೇ ಇವರು.

ಹೌದು ಕಳೆದ ಹದಿಮೂರು ವರ್ಷದಿಂದ ಬಿಳಿ ಮಂಡಕ್ಕಿಯನ್ನ ಉಪಯೋಗಿಸಿಕೊಂಡು ನಮ್ಮೂರ ಗಣಪನಿಗೆ ಅಂದ ಚೆಂದ ಮಾಲೆಯನ್ನ ಸಿದ್ಧ ಪಡಿಸಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರತಿಷ್ಠಪಿಸಿದ ವಿಘ್ನೇಶ್ವರನಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕಾಪು,ಕಾರ್ಕಳ,ಮಟ್ಟು,ಪಡುಬಿದ್ರಿ ಹೀಗೆ ನಾನಾ ಕಡೆ ಈ ಮಾಲೆಯನ್ನ ಸಮರ್ಪಿಸುತ್ತಾರೆ.

ಅರೇ ಮಂಡಾಕ್ಕಿಯಿಂದ ಮಾಲೆ ತಯಾರಿಸಲು ಸಾಧ್ಯನ ಅಂತಾ ನೀವೂ ಅಲೋಚಿಸಬಹುದು ಹೌದು ಮಂಡಾಕ್ಕಿಯಿಂದಲೇ ಸುಮಾರು ೨೦೦ ಮೀಟರ್ ಉದ್ದದ ಈ ಮಾಲೆಯನ್ನ ಸಿದ್ದ ಪಡಿಸುತ್ತಾರೆ, ಗಣೇಶ ಚತುರ್ಥಿ ಒಂದು ತಿಂಗಳ ಹಿಂದೆ ಈ ಕೆಲಸಕ್ಕೆ ಮೂಹುರ್ತ ಫಿಕ್ಸ್ ಮಾಡಿ ಶೃದ್ಧಾ ಭಕ್ತಿಯಿಂದ,ತಾಳ್ಮೆ ಸಂಯಮ ವಹಿಸಿ ಈ ಕಾಯಕವನ್ನ ಮಾಡುವುದು ಇವರ ವಿಶೇಷತೆ.

                          ಅರ್ಪನೆಗೆ ಸಿದ್ಧವಾದ ಮಂಡಕ್ಕಿ ಮಾಲೆ

ಹೇಗೆ ತಯಾರಿಸಬಹುದು…?

ನಗರಭಾಗದಲ್ಲಿ ಸಿಗುವ ಈ ಬಿಳಿ ಮಂಡಕ್ಕಿಯನ್ನ ತಂದು ಚೆನ್ನಾಗಿ ಆರಿಸಿ ಅದರಿಂದ ಒಂದೇ ಅಳತೆಯ ಮಂಡಕ್ಕಿಯನ್ನ ಆರಿಸಿ ಸ್ವಲ್ಪ ಹೊತ್ತು ಗಾಳಿಯಲ್ಲಿಟ್ಟು ತದನಂತರ ಒಂದೊಂದೆ ಮಂಡಕ್ಕಿಯನ್ನ ಸೂಜಿನೂಲಿ ಸಹಾಯದೊಂದಿಗೆ ಮುತ್ತುಗಳನ್ನ ಪೋಣಿಸಿದ ಹಾಗೆ ಪೋಣಿಸುತ್ತಾರೆ,ತದನಂತರ ಸುಮಾರು ೧೦ ಅಡಿ ಉದ್ದದ ಒಂದೊಂದೆ ಮಾಲೆಯನ್ನ ಜೋಡಿಸಿಕೊಂಡು ಉಂಡೆ ಮಾಡಿ ಪ್ಲಾಸ್ಟೀಕ್ ಬ್ಯಾಗ್ ನಲ್ಲಿ ಕಟ್ಟಿ ದಾಸ್ತಾನು ಮಾಡಬೇಕಾಗುತ್ತೆ ಆಮೇಲೆ ಆ ಮಾಲೆಯನ್ನ ಚೆಂದವಾಗಿ ತಯಾರುಮಾಡಬೇಕಾಗುತ್ತೆ.ಪೋಣಿಸಿದ ನಂತೆ ಅದನ್ನ ಅತ್ಯಂತ ನಾಜೂಕಿನಲ್ಲಿ ದಾಸ್ತನು ಮಾಡಬೇಕು ಇಲ್ಲವಾದಲ್ಲಿ ಗಾಳಿಗೆ ಅದು ಚಿರಿಟಿ ಹೋಗುವ ಸಾಧ್ಯತೆ ಹೆಚ್ಚು ಹಾಗಾಗಿ ಅತ್ಯಂತ ತಾಳ್ಮೆ ಹಾಗೂ ಜಾಗೃತೆಯಿಂದ ತಯಾರಿಸಬೇಕಾಗುತ್ತೆ, ಈ ಮಾಲೆಯನ್ನ ಸಿದ್ದ ಪಡಿಸಲು ಸುಮಾರು ೪ ರಿಂದ ೫ ಕೇಜಿ ಬಿಳಿ ಮಂಡಕ್ಕಿ ಬೇಕಾಗುತ್ತೆ ಹಾಗೇ ಪೋಣಿಸಿದ ಮಾಲೆಗೆ ಕೆಂಪು ಗುಲಾಬಿಹೂವಿನ ಎಸಲುಗಳನ್ನ ನೈದು ಮಾಲೆಯ ಮದ್ಯಭಾಗಕ್ಕೆ ಕಟ್ಟಿ ಮತ್ತಷ್ಟು ಅಂದ ಹೆಚ್ಚಿಸುವ ಕೆಲಸ ಮಾಡಿ ವಿಸರ್ಜನಾ ಮೆರವಣಿಗೆಯ ದಿನ ತಲುಪಿಸಬೇಕಾದ ಜಾಗಕ್ಕೆ ತಲುಪಿಸಿ ಗಣೇಶನಿಗೆ ಸಮರ್ಪಿಸುತ್ತಾರೆ.ಇದರ ಜತೆಗೆ ಕಪ್ಪು ಮತ್ತು ಬಿಳಿ ಕಡ್ಲೆಯ ಮಾಲೆಯನ್ನ ತಯಾರಿಸುವುದು ಕೂಡ ವಿಶೇಷತೆ.

ಮುತ್ತಿನಂತೆ ಮಂಡಕ್ಕಿ ಸೂಜಿನೂಲಿನ ಸಹಾಯದೊಂದಿಗೆ ಪೋಣಿಕೆ

ಬಾಳಿಕೆ ಕೇವಲ ಕೆಲವೇ ಗಂಟೆ

ಈ ಮಂಡಕ್ಕಿಯ ಮಾಲೆ ತಯಾರಿಸಲು ನೂರಾರು ಗಂಟೆ ಸಮಯ ಆದರೇ ಸಮರ್ಪಿಸಿದ ನಂತರ ಅದರ ಬಾಳಿಕೆ ಕೇವಲ ಒಂದು ದಿನ ಮಾತ್ರ ಯಾಕೆಂದರೆ ಗಾಳಿಗೆ ಮೈಯೊಡ್ಡುವುದರಿಂದ ಅತ್ಯಂತ ಬೇಗನೆ ಅದು ಚಿರಿಟಿ ಹೋಗುತ್ತೆ.

ಈ ಮಾಲೆ ನಾವೂ ತಯಾರಿಸಬಹುದೆಂದು ಜಂಬಕೊಚ್ಚಿಕೊಂಡವರು ಒಂದು ಅಡಿ ಉದ್ದದ ಮಾಲೆ ತಯಾರಿಸಿ ಕೈಗಳಿಗೆ ಸೂಚಿ ಚುಚ್ಚಿಸಿಕೊಂಡು ಸಾಕಪ್ಪ ಇದರ ಸಹವಾಸ ಅಂತಾ ಕೈಬಿಟ್ಟವರೇ ಹೆಚ್ಚು. ಸುಮಾರು ಹದಿಮೂರು ವರ್ಷದಿಂದ ಈ ಕಾಯಕದಲ್ಲಿ ಮಗ್ನರಾಗಿರುವ ಇವರು ಹೀಗೆನ್ನುತ್ತಾರೆ” ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಕಾರ್ಯ ಮಾಡುತ್ತಿದ್ದೆನೆ ,ತುಂಬಾ ಸಮಯದ ಅವಶ್ಯಕತೆ ಮತ್ತು ತಾಳ್ಮೆಯಿಂದ ನಿರ್ವಹಿಸಬೇಕಾಗುತ್ತೆ,ಒಂದು ವೇಳೆ ಬೇಜಬ್ದಾರಿತನ ವರ್ತಿಸಿದಲ್ಲಿ ಇಡಿ ಮಾಲೇ ಹಾಳಾಗುವುದರಿಂದ ಅತ್ಯಂತ ನಾಜೂಕಾಗಿ ಮಾಡಬೇಕಾಗುತ್ತೆ,ಮೊದಲ ಸಲ ಮಾಡುವಾಗ ಕಷ್ಟವಾದರೂ ನಂತರದ ದಿನದಲ್ಲಿ ಸಲೀಸಾಗಿ ಮಾಡುತ್ತ ಬರುತ್ತಿದ್ದೆನೆ. ಇದರ ಜತೆಗೆ ಬಿಳಿ ಮತ್ತು ಕಪ್ಪು ಕಡ್ಲೆಯ ಮಾಲೆಯನ್ನ ಸಿದ್ಧ ಪಡಿಸುತ್ತ ಗಣಪನಿಗೆ ಸಮರ್ಪಿಸುತ್ತಿದ್ದನೆ ಎಲ್ಲವೂ ವಿಘ್ಣನಿವಾರಕನ ಇಚ್ಚೆಯಂತೆ ಅನ್ನುತ್ತಾರೆ.”

                                                                                                            ಮಾಲೆ ಜೋಡನೆಯಲ್ಲಿ ನಿರತ ಅಂಚನ್

ಕಾಪು ಮತ್ತು ಪೊಲಿಪುವಿನಲ್ಲಿ ಸಮರ್ಪಿಸಿದ ಮಾಲೆ

ಒಟ್ಟಾರೆಯಾಗಿ ನಮ್ಮೂರಿನಲ್ಲೂ ಇಂತಕ ಹಲವಾರು ಪ್ರತಿಭೆಗಳು ಇದೆ ಆದರೆ ಪ್ರಚಾರಕ್ಕೆ ಬರುವುದು ಕಡಿಮೆ,ಅದರಲ್ಲೂ ಇಂತಹ ಕಾರ್ಯ ಮಾಡುವವರು ತುಂಬಾ ವಿರಳ.ಮನಸ್ಸಿದ್ದರೆ ಯಾವ ಪ್ರಾಯದಲ್ಲೂ ಸಾಧಿಸಬಹುದೆಂಬುದನ್ನ ಇವರನ್ನ ನೋಡಿ ಕಲಿಯಬೇಕು. ಇವರ ಈ ಕಾರ್ಯ ನಿರಂತರವಾಗಿ ನಡೆಯಲಿ ಎಂಬುದೇ ನಮ್ಮ ಹಾರೈಕೆ.

ಬ್ಯುರೋ ರಿಪೋರ್ಟ್

ವಿಶ್ವನ್ಯೂಸ್24,ಕಾಪು

 

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago