Featured

ನಮ್ಮ ಉಡುಪಿಯಲ್ಲಿ ಒಮ್ಮೆ ಬಿಡುವು ಮಾಡಿ‌‌ ಸಂಚಾರ ಮಾಡಿ‌ ನೋಡಿ : ರಘುಪತಿ‌ ಭಟ್ ರವರಲ್ಲಿ ವಿಶೇಷ ಮನವಿ ಮಾಡಿದ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ – Vishwanews24

ನಮ್ಮ ಉಡುಪಿಯಲ್ಲಿ ಒಮ್ಮೆ ಬಿಡುವು ಮಾಡಿ‌‌ ಸಂಚಾರ ಮಾಡಿ‌ ನೋಡಿ : ರಘುಪತಿ‌ ಭಟ್ ರವರಲ್ಲಿ ವಿಶೇಷ ಮನವಿ ಮಾಡಿದ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ – Vishwanews24

ಉಡುಪಿ : “ನಮ್ಮ ಉಡುಪಿಯಲ್ಲಿ ಒಮ್ಮೆ ಬಿಡುವು ಮಾಡಿ‌‌ ಸಂಚಾರ ಮಾಡಿ‌ ನೋಡಿ ಮಾಜಿ ಸಚಿವ‌ ಪ್ರಮೋದ್ ರವರ ವಿಶೇಷ ಪ್ರಯತ್ನದಿಂದ ಜಾರಿಗೆ ಬಂದ ಜನೋಪಯೋಗಿ ನರ್ಮ್ ಸರಕಾರಿ ಬಸ್ಸುಗಳು ಬಹುತೇಕ ಮಾಯ ಆಗಿವೆ ,ಖಾಸಗಿ ಬಸ್ಸುಗಳ ದರ‌ ಗಗನಕ್ಕೇರಿವೆ”

ಉಡುಪಿ ಮಣಿಪಾಲ ರಸ್ತೆಯಲ್ಲಿ ಬೀದಿದೀಪಗಳೇ ಇಲ್ಲ‌, ಮಣಿಪಾಲದ‌ ಮುಖ್ಯ ರಸ್ತೆ ಕೂಡ‌ ರಾತ್ರಿ ನಂತರ ಕತ್ತಲು, ಮಹಿಳೆಯರ ಸುರಕ್ಷತೆ ಸವಾಲಿನ‌ ವಿಷಯವಾಗಿದೆ.

ಚತುಷ್ಪಥ ಕಾಮಗಾರಿ ತಾವು ಮಾಡಿಸಿ ದಶಕ ಕಳೆದರೂ ಇಂದ್ರಾಳಿ ರೇಲ್ವೆ ಮೇಲಸೇತುವೆ ಅರ್ಧಂಬರ್ಧ ಆಗಿ ಹಾಗೇನೇ ಉಳಿದು ವಾಹನ ಸವಾರರಿಗೆ ಮೃತ್ಯು ಕೂಪವಾಗಿದೆ

ಪರ್ಕಳ ಮೂಲಕ‌ ಹಾದು ಹೋಗುವ ರಸ್ತೆ ಬದಿ ಕಟ್ಟಡಗಳನ್ನು ಕೆಡವಿ ಹಾಕಲಾಗಿದೆ ಆದರೆ ಪರಿಹಾರವೂ ಅವರಿಗೆ ‌ಸಿಕ್ಕಿಲ್ಲ ಸುಸಜ್ಜಿತ ರಸ್ತೆಯೂ ಸಿಕ್ಕಿಲ್ಲ ,

ನಿತ್ಯ ನಿರಂತರವಾಗಿ ಅವ್ಯಾಹತವಾಗಿ ಪರವಾನಿಗೆ ಇಲ್ಲದ ,ಜಿಪಿಎಸ್ ಅಳವಡಿಸದ ಮರಳು ಸಾಗಾಟ ವಾಹನಗಳು ಓಡಾಡುತ್ತಿವೆ ಅಕ್ರಮವಾಗಿ ಮರಳನ್ನು ಮಾರುತ್ತಾ ಇದ್ದಾರೆ, ಪರವಾನಿಗೆ ಪಡೆದ ಲಾರಿಗಳು ವ್ಯಾಪಾರ ಇಲ್ಲದೇ ಬದಿಗೆ ಸರಿದಿವೆ

ಹದಿನೈದು ವರ್ಷಗಳಿಂದ ನಿವೇಶನ ಅಧಿಕೃತವಾಗಿ ಕ್ರಯಕ್ಕೆ ಪಡೆದು ತಮ್ಮ ಹೆಸರಿನಲ್ಲಿ ಆರ್ ಟಿಸಿ ಆದರೂ ಏಕನಿವೇಶನ ಮಂಜೂರಾತಿ ಇಲ್ಲ ಎಂಬ ನೆಪವೊಡ್ಡಿ ಅವರ ನಿವೇಶನಗಳು ಪಾಳು‌ಬಿದ್ದಿವೆ,

ತಾವೂ ಈ ಎಲ್ಲಾ ವಿಚಾರಗಳಿಗೆ ವಿಶೇಷ ಗಮನ ನೀಡಿ ಉಡುಪಿಯ ಜನತೆಯನ್ನು ಈ ಸಮಸ್ಯೆಗಳಿಂದ ಪಾರು ಮಾಡಬೇಕು” ಎಂದು ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಉಡುಪಿ ಶಾಸಕ ಭಟ್ ರವರಲ್ಲಿ ವಿಶೇಷ ಮನವಿ ಮಾಡಿದ್ದಾರೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

2 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago