ಉಡುಪಿ : “ನಮ್ಮ ಉಡುಪಿಯಲ್ಲಿ ಒಮ್ಮೆ ಬಿಡುವು ಮಾಡಿ ಸಂಚಾರ ಮಾಡಿ ನೋಡಿ ಮಾಜಿ ಸಚಿವ ಪ್ರಮೋದ್ ರವರ ವಿಶೇಷ ಪ್ರಯತ್ನದಿಂದ ಜಾರಿಗೆ ಬಂದ ಜನೋಪಯೋಗಿ ನರ್ಮ್ ಸರಕಾರಿ ಬಸ್ಸುಗಳು ಬಹುತೇಕ ಮಾಯ ಆಗಿವೆ ,ಖಾಸಗಿ ಬಸ್ಸುಗಳ ದರ ಗಗನಕ್ಕೇರಿವೆ”
ಉಡುಪಿ ಮಣಿಪಾಲ ರಸ್ತೆಯಲ್ಲಿ ಬೀದಿದೀಪಗಳೇ ಇಲ್ಲ, ಮಣಿಪಾಲದ ಮುಖ್ಯ ರಸ್ತೆ ಕೂಡ ರಾತ್ರಿ ನಂತರ ಕತ್ತಲು, ಮಹಿಳೆಯರ ಸುರಕ್ಷತೆ ಸವಾಲಿನ ವಿಷಯವಾಗಿದೆ.
ಚತುಷ್ಪಥ ಕಾಮಗಾರಿ ತಾವು ಮಾಡಿಸಿ ದಶಕ ಕಳೆದರೂ ಇಂದ್ರಾಳಿ ರೇಲ್ವೆ ಮೇಲಸೇತುವೆ ಅರ್ಧಂಬರ್ಧ ಆಗಿ ಹಾಗೇನೇ ಉಳಿದು ವಾಹನ ಸವಾರರಿಗೆ ಮೃತ್ಯು ಕೂಪವಾಗಿದೆ
ಪರ್ಕಳ ಮೂಲಕ ಹಾದು ಹೋಗುವ ರಸ್ತೆ ಬದಿ ಕಟ್ಟಡಗಳನ್ನು ಕೆಡವಿ ಹಾಕಲಾಗಿದೆ ಆದರೆ ಪರಿಹಾರವೂ ಅವರಿಗೆ ಸಿಕ್ಕಿಲ್ಲ ಸುಸಜ್ಜಿತ ರಸ್ತೆಯೂ ಸಿಕ್ಕಿಲ್ಲ ,
ನಿತ್ಯ ನಿರಂತರವಾಗಿ ಅವ್ಯಾಹತವಾಗಿ ಪರವಾನಿಗೆ ಇಲ್ಲದ ,ಜಿಪಿಎಸ್ ಅಳವಡಿಸದ ಮರಳು ಸಾಗಾಟ ವಾಹನಗಳು ಓಡಾಡುತ್ತಿವೆ ಅಕ್ರಮವಾಗಿ ಮರಳನ್ನು ಮಾರುತ್ತಾ ಇದ್ದಾರೆ, ಪರವಾನಿಗೆ ಪಡೆದ ಲಾರಿಗಳು ವ್ಯಾಪಾರ ಇಲ್ಲದೇ ಬದಿಗೆ ಸರಿದಿವೆ
ಹದಿನೈದು ವರ್ಷಗಳಿಂದ ನಿವೇಶನ ಅಧಿಕೃತವಾಗಿ ಕ್ರಯಕ್ಕೆ ಪಡೆದು ತಮ್ಮ ಹೆಸರಿನಲ್ಲಿ ಆರ್ ಟಿಸಿ ಆದರೂ ಏಕನಿವೇಶನ ಮಂಜೂರಾತಿ ಇಲ್ಲ ಎಂಬ ನೆಪವೊಡ್ಡಿ ಅವರ ನಿವೇಶನಗಳು ಪಾಳುಬಿದ್ದಿವೆ,
ತಾವೂ ಈ ಎಲ್ಲಾ ವಿಚಾರಗಳಿಗೆ ವಿಶೇಷ ಗಮನ ನೀಡಿ ಉಡುಪಿಯ ಜನತೆಯನ್ನು ಈ ಸಮಸ್ಯೆಗಳಿಂದ ಪಾರು ಮಾಡಬೇಕು” ಎಂದು ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಉಡುಪಿ ಶಾಸಕ ಭಟ್ ರವರಲ್ಲಿ ವಿಶೇಷ ಮನವಿ ಮಾಡಿದ್ದಾರೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…