ಬೆಂಗಳೂರು: ನಮ್ಮ ಮನೆಯ ಬೋರ್‌ವೆಲ್‌ನಲ್ಲೂ ನೀರಿಲ್ಲ. ಬೇರೆ ಕಡೆಯಿಂದ ನೀರು ತರಿಸುವ ಪ್ರಯತ್ನ ಮಾಡ್ತಾ ಇದ್ದೀವಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ವಿಪಕ್ಷದವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೆನೂ ಇಲ್ಲ. ಸಲಹೆ ಕೊಟ್ಟರೆ ನಾವು ಸ್ವೀಕಾರ ಮಾಡ್ತೀವಿ. ಬೆಂಗಳೂರಿನ ಚರಿತ್ರೆಯಲ್ಲೇ ಟ್ಯಾಂಕರ್ ಕಂಟ್ರೋಲ್ ಮಾಡಿರೋದು ನಾವು. ಈ ದಂಧೆಗೆ ಕಡಿವಾಣ ಹಾಕಿರೋದು ನಾವು. ಅವರಿಗೆ ಒಂದು ದರ ಫಿಕ್ಸ್ ಕುರಿತು ಅಧಿಕಾರಿಗಳು ಚರ್ಚೆ ಮಾಡಿದ್ದಾರೆ. ಕಾವೇರಿ ನೀರು ಹೆಚ್ಚಾಗಿ ಬರ್ತಾ ಇದೆ. ಆದರೆ, ಹಾಹಾಕಾರ ಇಲ್ಲ ಅಂತ ನಾವು ಹೇಳ್ತಾ ಇಲ್ಲ ಎಂದರು.
ಇನ್ನು ನಮ್ಮ ಮನೆಯಲ್ಲೂ ಬೋರ್ ವೆಲ್ ನಲ್ಲಿ ನೀರು ಇಲ್ಲ. ಬೇರೆ ಕಡೆಯಿಂದ ನೀರು ತರಿಸುವ ಪ್ರಯತ್ನ ಮಾಡ್ತಾ ಇದ್ದೀವಿ. ಕಾರು ತೊಳೆಯಲು, ದನ ಕರು ತೊಳೆಯಲು ಬಳಸಬೇಡಿ ಅಂತ ಹೇಳಿದ್ದೇವೆ. ಆರ್‌ಓ ವಾಟರ್ ಎಲ್ಲೆಲ್ಲಿ ಕೆಟ್ಟೋಗಿತ್ತೋ ಅದನ್ನ ಸರಿ ಮಾಡ್ತಾ ಇದ್ದೀವಿ ಎಂದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…