ನರಸತ್ತ ಕಾಪು ಪುರಸಭೆ ಪ್ರಖ್ಯಾತ ಹೋಟೆಲುಗಳ ತ್ಯಾಜ್ಯ ನೀರು ಒಳಚರಂಡಿ ಸೇರುತ್ತಿದೆ : vishwanews24
ಚರಂಡಿಯ ಇಕ್ಕೆಲದಲ್ಲಿ ಕಾಂಡೋಮ್ ತೇಲುತ್ತಿದೆ,ಮೀನುಮಾಂಸ ತ್ಯಾಜ್ಯ ಹೊರ ಬರುತ್ತಿದೆ,ಬೀದಿ ನಾಯಿ ಕಾಯುತ್ತಿದೆ!!
ಅಧಿಕಾರ ವರ್ಗ ಮಾತ್ರ ಬೆಚ್ಚಗೆ ಸೊಳ್ಳೆ ಪರದೆ ಹಾಕಿ ಮಲಗಿದೆ..!!!
ಕಾಪು : ಇಲ್ಲಿನ ಪುರಸಭೆಯ ಅಧಿಕಾರಿಗಳಿಗೆ ಯಾಕೋ ಹವಾನಿಯಂತ್ರಿತ ಕೊಠಡಿ ಬಿಟ್ಟು ಹೊರಗೆ ಬರಲು ಮನಸ್ಸಿಲ್ಲ ಕಾಣುತ್ತಿದೆ ಹಾಗಾಗಿ ಪ್ರಖ್ಯಾತ ಹೋಟೆಲ್ ಲಾಡ್ಜುಗಳ ತ್ಯಾಜ್ಯ ನೀರು ಹದಗೆಟ್ಟ ಒಳಚರಂಡಿಯಲ್ಲಿ ಹರಿದು ಶೈಕ್ಷಣಿಕ ಬೀಡು, ದೇಗುಲದ ನಾಡು,ಪ್ರವಾಸೋದ್ಯಮ ಕೇಂದ್ರವಾದ ಕಾಪು ನಗರ ಗಬ್ಬು ನಾರುತ್ತಿದೆ..
ಒಳಚರಂಡಿಯಲ್ಲಿನ ನೀರು ಹೊರಬಂದು ಕಾಂಡೋಮ್ ಗಳು ಮೀನಿನಂತೆ ತೇಲಾಡುತ್ತಿದೆ,ಮೂಳೆ ಮಾಂಸಗಳ ತ್ಯಾಜ್ಯ ಚರಂಡಿಯ ಇಕ್ಕೆಲಗಳಲ್ಲಿ ತಲೆ ಎತ್ತಿ ನಾನು ಹೊರಗೆ ಬರಲೇ ಅನ್ನುತ್ತಿದೆ ಇಷ್ಟೆಲ್ಲಾ ಆದರೂ ಮಾತ್ರ ಕಾಪು ಪುರಸಭೆಯ ಅಧಿಕಾರಿಗಳು ತಾವೂ ಕುಳಿತಿರುವ ಖುರ್ಚಿಗೆ ಕಾವು ನೀಡುತ್ತಿದ್ದಾರೆ.
ತ್ಯಾಜ್ಯ ನಿರ್ವಹಣೆಯೊಂದು ಬಿಟ್ಟರೆ ಕಾಪು ಪುರಸಭೆ ಏನು ಮಾಡುತ್ತಿದೆಂಬ ಪ್ರಶ್ನೆಗೆ ಉತ್ತರ ಇದುವರೆಗೂ ಸಿಕ್ಕಿಲ್ಲ,ಹೋಟೆಲುಗಳು ಅನಾಚರಕ್ಕೆ ಕೊನೆಯಿಲ್ಲ ,ಪುರಸಭೆಯದಂತೂ ಸುದ್ದಿಯೇ ಇಲ್ಲದಂತಾಗಿದೆ.
ಕತ್ತಲೆಯಾದರೇ ಸಾಕು ಇಡೀ ಕಾಪು ನಗರ,ವೇಗದೂತ ಬಸ್ಸು ನಿಲ್ದಾಣದ ಸುತ್ತಲೂ ಗಬ್ಬು ವಾಸನೆ ಮೂಗಿಗೆ ಬಡಿದು ವಾಸನೆ ಗ್ರಹಿಸುವ ನರವೇ ಸತ್ತು ಹೋಗಿದೆ,ಸೊಳ್ಳೆಗಳು ರಾಜರೋಷವಾಗಿ ರಕ್ತ ಹೀರುತ್ತಿದೆ,ಬೀದಿ ನಾಯಿಗಳು ಚರಂಡಿಯ ಇಕ್ಕೆಲದಲ್ಲಿ ಹೊರಬರುವ ಮೂಳೆ ಮಾಂಸಕ್ಕೆ ಕಾಯುತ್ತಿದ್ದೆ ಅಧಿಕಾರ ವರ್ಗ ಬೆಚ್ಚಗೆ ಮನೆಯಲ್ಲಿ ಮಲಗಿದ್ದಾರೆ.
ವಿಪರ್ಯಾಸವೆಂದರೆ ಕೋಟಿಗಟ್ಟಲೆ ಹಣ ಪುರಸಭೆಗೆ ತಂದು ಹಾಕಿದ್ದೇವೆ ಅನ್ನುತ್ತಿದ್ದಾರೆ ಕಾಂಗ್ರೆಸ್ ಬಿಜೆಪಿ ನಾಯಕರುಗಳು ಆ ಕೋಟಿಯಲ್ಲಿ ಈ ಲೆಕ್ಕಾಚಾರ ತಪ್ಪಿ ಹೋಗಿದೆಯೋ ಅಥವಾ ಗಬ್ಬು ನಾತದ ಲೆಕ್ಕಾಚಾರ ಗೊತ್ತಿದ್ದರೂ ಅಧಿಕಾರಿಗಳು “ಕುರುಡು ಕಾಂಚನಾ” ಕ್ಕೆ ಬಲಿಯಾಗುತ್ತಿದ್ದರೋ ಗೊತ್ತಿಲ್ಲ ಒಟ್ಟಾರೆ ಕಾಪು ನಗರ ವಾಸನೆಗೀಡಾಗಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…