ಉಡುಪಿ

ನರಸತ್ತ ಕಾಪು ಪುರಸಭೆ ಪ್ರಖ್ಯಾತ ಹೋಟೆಲುಗಳ ತ್ಯಾಜ್ಯ ನೀರು ಒಳಚರಂಡಿ ಸೇರುತ್ತಿದೆ : vishwanews24

ನರಸತ್ತ ಕಾಪು ಪುರಸಭೆ ಪ್ರಖ್ಯಾತ ಹೋಟೆಲುಗಳ ತ್ಯಾಜ್ಯ ನೀರು ಒಳಚರಂಡಿ ಸೇರುತ್ತಿದೆ : vishwanews24

ಚರಂಡಿಯ ಇಕ್ಕೆಲದಲ್ಲಿ ಕಾಂಡೋಮ್ ತೇಲುತ್ತಿದೆ,ಮೀನುಮಾಂಸ ತ್ಯಾಜ್ಯ ಹೊರ ಬರುತ್ತಿದೆ,ಬೀದಿ ನಾಯಿ ಕಾಯುತ್ತಿದೆ!!

ಅಧಿಕಾರ ವರ್ಗ ಮಾತ್ರ ಬೆಚ್ಚಗೆ ಸೊಳ್ಳೆ ಪರದೆ ಹಾಕಿ ಮಲಗಿದೆ..!!!

ಕಾಪು : ಇಲ್ಲಿನ ಪುರಸಭೆಯ ಅಧಿಕಾರಿಗಳಿಗೆ ಯಾಕೋ‌ ಹವಾನಿಯಂತ್ರಿತ ಕೊಠಡಿ ಬಿಟ್ಟು ಹೊರಗೆ ಬರಲು ಮನಸ್ಸಿಲ್ಲ ಕಾಣುತ್ತಿದೆ ಹಾಗಾಗಿ ಪ್ರಖ್ಯಾತ ಹೋಟೆಲ್‌ ಲಾಡ್ಜುಗಳ ತ್ಯಾಜ್ಯ ನೀರು ಹದಗೆಟ್ಟ ಒಳಚರಂಡಿಯಲ್ಲಿ ಹರಿದು ಶೈಕ್ಷಣಿಕ ಬೀಡು, ದೇಗುಲದ ನಾಡು,ಪ್ರವಾಸೋದ್ಯಮ ಕೇಂದ್ರವಾದ ಕಾಪು ನಗರ ಗಬ್ಬು ನಾರುತ್ತಿದೆ..

ಒಳಚರಂಡಿಯಲ್ಲಿನ ನೀರು ಹೊರಬಂದು ಕಾಂಡೋಮ್ ಗಳು ಮೀನಿನಂತೆ ತೇಲಾಡುತ್ತಿದೆ,ಮೂಳೆ ಮಾಂಸಗಳ ತ್ಯಾಜ್ಯ ಚರಂಡಿಯ ಇಕ್ಕೆಲಗಳಲ್ಲಿ ತಲೆ ಎತ್ತಿ ನಾನು ಹೊರಗೆ ಬರಲೇ ಅನ್ನುತ್ತಿದೆ ಇಷ್ಟೆಲ್ಲಾ ಆದರೂ ಮಾತ್ರ ಕಾಪು ಪುರಸಭೆಯ ಅಧಿಕಾರಿಗಳು ತಾವೂ ಕುಳಿತಿರುವ ಖುರ್ಚಿಗೆ ಕಾವು ನೀಡುತ್ತಿದ್ದಾರೆ.

ತ್ಯಾಜ್ಯ ನಿರ್ವಹಣೆಯೊಂದು ಬಿಟ್ಟರೆ ಕಾಪು ಪುರಸಭೆ ಏನು ಮಾಡುತ್ತಿದೆಂಬ ಪ್ರಶ್ನೆಗೆ ಉತ್ತರ ಇದುವರೆಗೂ ಸಿಕ್ಕಿಲ್ಲ,ಹೋಟೆಲುಗಳು ಅನಾಚರಕ್ಕೆ ಕೊನೆಯಿಲ್ಲ ,ಪುರಸಭೆಯದಂತೂ ಸುದ್ದಿಯೇ ಇಲ್ಲದಂತಾಗಿದೆ.

ಕತ್ತಲೆಯಾದರೇ ಸಾಕು ಇಡೀ ಕಾಪು ನಗರ,ವೇಗದೂತ ಬಸ್ಸು ನಿಲ್ದಾಣದ ಸುತ್ತಲೂ ಗಬ್ಬು ವಾಸನೆ ಮೂಗಿಗೆ ಬಡಿದು ವಾಸನೆ ಗ್ರಹಿಸುವ ನರವೇ ಸತ್ತು ಹೋಗಿದೆ,ಸೊಳ್ಳೆಗಳು ರಾಜರೋಷವಾಗಿ ರಕ್ತ ಹೀರುತ್ತಿದೆ,ಬೀದಿ ನಾಯಿಗಳು ಚರಂಡಿಯ ಇಕ್ಕೆಲದಲ್ಲಿ ಹೊರಬರುವ ಮೂಳೆ ಮಾಂಸಕ್ಕೆ ಕಾಯುತ್ತಿದ್ದೆ ಅಧಿಕಾರ ವರ್ಗ ಬೆಚ್ಚಗೆ ಮನೆಯಲ್ಲಿ ಮಲಗಿದ್ದಾರೆ.

ವಿಪರ್ಯಾಸವೆಂದರೆ ಕೋಟಿಗಟ್ಟಲೆ ಹಣ ಪುರಸಭೆಗೆ ತಂದು ಹಾಕಿದ್ದೇವೆ ಅನ್ನುತ್ತಿದ್ದಾರೆ ಕಾಂಗ್ರೆಸ್ ಬಿಜೆಪಿ ನಾಯಕರುಗಳು ಆ‌ ಕೋಟಿಯಲ್ಲಿ ಈ ಲೆಕ್ಕಾಚಾರ ತಪ್ಪಿ ಹೋಗಿದೆಯೋ ಅಥವಾ ಗಬ್ಬು ನಾತದ ಲೆಕ್ಕಾಚಾರ ಗೊತ್ತಿದ್ದರೂ ಅಧಿಕಾರಿಗಳು “ಕುರುಡು ಕಾಂಚನಾ” ಕ್ಕೆ ಬಲಿಯಾಗುತ್ತಿದ್ದರೋ ಗೊತ್ತಿಲ್ಲ ಒಟ್ಟಾರೆ ಕಾಪು ನಗರ ವಾಸನೆಗೀಡಾಗಿದೆ.

ಬ್ಯುರೋ ರಿಪೋರ್ಟ್ : ವಿಶ್ವನ್ಯೂಸ್24

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago