ನರೇಂದ್ರಮೋದಿ ಕಠಿಣ ಪರಿಶ್ರಮಿ ಅವರ ಎದುರು ರಾಹುಲ್ ಗಾಂಧಿಗೆ ಅವಕಾಶವಿಲ್ಲ : ಇತಿಹಾಸಕಾರ ರಾಮಚಂದ್ರ ಗುಹಾ -Vishwanews24

ಕೋಯಿಕ್ಕೋಡ್: ವಂಶ ರಾಜಕಾರಣದ ಐದನೇ ತಲೆಮಾರಿನ ನಾಯಕ ರಾಹುಲ್ ಗಾಂಧಿಗೆ ಕಠಿಣ ಪರಿಶ್ರಮಿ ನರೇಂದ್ರ ಮೋದಿ ಎದುರು ರಾಜಕಾರಣದಲ್ಲಿ ಅವಕಾಶವಿಲ್ಲ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ. ರಾಹುಲ್ ಅವರನ್ನು ಸಂಸತ್‌ಗೆ ಆಯ್ಕೆ ಮಾಡುವ ಮೂಲಕ ಕೇರಳವು ಹಾನಿಕಾರಕ ಕೆಲಸ ಮಾಡಿದೆ ಎಂದೂ ಅವರು ಹೇಳಿದ್ದಾರೆ.

ಕೇರಳ ಸಾಹಿತ್ಯ ಉತ್ಸವದ ಎರಡನೇ ದಿನವಾದ ಶುಕ್ರವಾರ ‘ದೇಶಪ್ರೇಮ ಮತ್ತು ತೀವ್ರಗಾಮಿ ದೇಶಭಕ್ತಿ’ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಅದ್ಭುತ ಪಕ್ಷವಾಗಿದ್ದ ಕಾಂಗ್ರೆಸ್ ಈಗ ಒಂದು ಕುಟುಂಬ ಸಂಸ್ಥೆಯಾಗಿರುವುದು ಹಿಂದುತ್ವದ ಮತ್ತು ತೀವ್ರಗಾಮಿ ದೇಶಭಕ್ತಿಯ ಆರೋಹಣಕ್ಕೆ ಕಾರಣವಾಗಿದೆ’ ಎಂದು ಹೇಳಿದ್ದಾರೆ.

ಮೋದಿ ಕಠಿಣ ಪರಿಶ್ರಮಿ: ‘ನರೇಂದ್ರ ಮೋದಿ ಅವರಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಅವರು ರಾಹುಲ್ ಗಾಂಧಿಯಂತಲ್ಲ. ಅವರು ಸ್ವಯಂ ವರ್ಚಸ್ಸು ಬೆಳೆಸಿಕೊಂಡವರು. 15 ವರ್ಷ ರಾಜ್ಯದ ಆಡಳಿತ ನಡೆಸಿದ ಅನುಭವ ಉಳ್ಳವರು. ಅವರು ಕಠಿಣ ಪರಿಶ್ರಮಿ ಮಾತ್ರವಲ್ಲದೆ ರಜೆ ಪಡೆದು ಯುರೋಪ್‌ಗೆ ಹೋಗುವವರಲ್ಲ. ನನ್ನನ್ನು ನಂಬಿ. ಇದಾವುದನ್ನೂ ನಾನು ತಮಾಷೆಗೆ ಹೇಳುತ್ತಿಲ್ಲ’ ಎಂದೂ ಗುಹಾ ಹೇಳಿದ್ದಾರೆ.

‘ವೈಯಕ್ತಿಕವಾಗಿ ನನಗೆ ರಾಹುಲ್ ಗಾಂಧಿ ಬಗ್ಗೆ ಯಾವುದೇ ವಿರೋಧವಿಲ್ಲ. ಅವರೊಬ್ಬ ಯೋಗ್ಯ ಮತ್ತು ಉತ್ತಮ ನಡತೆಯ ವ್ಯಕ್ತಿ. ಆದರೆ, ವಂಶ ರಾಜಕಾರಣದ ಐದನೇ ತಲೆಮಾರಿನ ನಾಯಕನನ್ನು ಯುವ ಭಾರತವು ಒಪ್ಪುತ್ತಿಲ್ಲ. ನೀವು ಮಲಯಾಳಿಗರು ರಾಹುಲ್ ಗಾಂಧಿಯನ್ನು ಸಂಸತ್‌ಗೆ ಆಯ್ಕೆ ಮಾಡುವ ತಪ್ಪನ್ನು 2024ರಲ್ಲಿಯೂ ಮಾಡಿದ್ದೇ ಆದಲ್ಲಿ ನರೇಂದ್ರ ಮೋದಿಯವರಿಗೆ ಅನುಕೂಲ ಮಾಡಿಕೊಟ್ಟಂತಾಗಲಿದೆ’ ಎಂದು ಗುಹಾ ಹೇಳಿದ್ದಾರೆ.‘ಕೇರಳಿಗರಾದ ನೀವು ಅನೇಕ ಅದ್ಭುತ ಕೆಲಸಗಳನ್ನು ಮಾಡಿದ್ದೀರಿ. ಆದರೆ ರಾಹುಲ್ ಗಾಂಧಿ ಅವರನ್ನು ಸಂಸತ್‌ಗೆ ಆರಿಸಿ ಕಳುಹಿಸುವ ಮೂಲಕ ಹಾನಿಕಾರಕ ಕೆಲಸ ಮಾಡಿದ್ದೀರಿ’ ಎಂದು ಅವರು ಹೇಳಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago