ಅಹಮದಾಬಾದ್: ಅಮರಿಕ ಭಾರತವನ್ನು ಪ್ರೀತಿಸುತ್ತದೆ. ಅಮೆರಿಕ ಭಾರತವನ್ನು ಗೌರವಿಸುತ್ತದೆ ಮತ್ತು ಅಮೆರಿಕ ಭಾರತ ಹಾಗೂ ಭಾರತದ ಜನರಿಗೆ ಯಾವಾಗಲೂ ನಂಬಿಕಸ್ಥ ಮತ್ತು ನಿಷ್ಠೆಯುಳ್ಳ ಸ್ನೇಹಿತನಾಗಿರುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.
ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಬಳಿಕ ಮಾತನಾಡಿ ಅವರು, ಭಾರತದ ಬಗ್ಗೆ ತಮಗೆ ಯಾವಾಗಲೂ ಪ್ರೀತಿಯಿದೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಭಾರತದೊಂದಿಗೆ 3 ಬಿಲಿಯನ್ ಯುಎಸ್ ಡಾಲರ್ಗಳಷ್ಟು(2,1545 ಲಕ್ಷ ಕೋಟಿ ರೂ.) ಮೊತ್ತದ ರಕ್ಷಣಾ ಒಪ್ಪಂದವನ್ನು ಘೋಷಿಸಿದರು. ನಾಳೆ ಈ ಅತಿದೊಡ್ಡ ಒಪ್ಪಂದಕ್ಕೆ ನಾವಿಬ್ಬರೂ ಸಹಿ ಹಾಕಲಿದ್ದೇವೆ ಎಂಬುದನ್ನು ಟ್ರಂಪ್ ಹೇಳಿದರು.
ಭಾರತದ ಈ ಆತಿಥ್ಯವನ್ನು ನಾವು ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಭಾರತಕ್ಕೆ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಇದೆ ಎಂದು ಹೇಳಿದ ಟ್ರಂಪ್ ನರೇಂದ್ರ ಮೋದಿಯವರನ್ನು ತುಂಬುಹೃದಯದಿಂದ ಹೊಗಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಚಹಾ ಮಾರಾಟ ಮಾಡುತ್ತಿದ್ದರು. ಅವರೊಬ್ಬ ಚಹಾ ವಾಲಾ ಎಂಬುದು ಎಲ್ಲರಿಗೂ ಗೊತ್ತು. ಅನೇಕಾನೇಕ ಜನರ ಪ್ರೀತಿಯನ್ನು ಅವರು ಗಳಿಸಿಕೊಂಡಿದ್ದಾರೆ. ಆದರೆ ಒಂದು ವಿಷಯ ಹೇಳುತ್ತೇನೆ. ನರೇಂದ್ರ ಮೋದಿಯವರು ಓರ್ವ ಕಠಿಣ ಪ್ರಧಾನಿ ಎಂದು ಹೇಳಿದರು.
ಪಿಎಂ ಮೋದಿ ಬರೀ ಗುಜರಾತ್ನ ಹೆಮ್ಮೆಯಲ್ಲ. ಕಠಿಣ ಪರಿಶ್ರಮ ಮತ್ತು ನಿಷ್ಠೆಗೆ ಮೋದಿಯವರು ಅದ್ಭುತ ಉದಾಹರಣೆ. ಭಾರತೀಯರು ಮನಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅವರು ಸಾಕ್ಷಿ ಎಂದು ಮೋದಿಯವರನ್ನು ಹೊಗಳಿದರು.
ರಕ್ಷಣಾ ಕ್ಷೇತ್ರದಲ್ಲಿ ಯುಎಸ್ ಮತ್ತು ಭಾರತದ ಪರಸ್ಪರ ಸಹಕಾರವನ್ನು ಬಲಗೊಳಿಸಿಕೊಳ್ಳುವುದು ನಮ್ಮ ಉದ್ದೇಶ. ಜಗತ್ತಿನಲ್ಲಿಯೇ ಅತ್ಯಂತ ಬಲಶಾಲಿಯಾದ, ಅತ್ಯುತ್ತಮವಾದ ರಕ್ಷಣಾ ಸಾಧನಗಳನ್ನು, ಮಿಲಿಟರಿ ಉಪಕರಣಗಳನ್ನು ಭಾರತಕ್ಕೆ ನೀಡುವ ಬಗ್ಗೆ ಯುಎಸ್ ಚಿಂತನೆ ನಡೆಸುತ್ತಿದೆ. ಭಾರತ ಮತ್ತು ಯುಎಸ್ ಜತೆಯಾಗಿ ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತೇವೆ ಎಂದು ಹೇಳಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…