ಮಂಗಳೂರು: ಮಧುವೆ ಎಂದರೆ ಅಲ್ಲಿ ನಾದಸ್ವರ, ತಾಳ ಮೇಳಗಳು, ಮಂಗಲ ವಾದ್ಯಗಳು, ಮಂತ್ರ ಘೋಷಗಳು ಮೊಳಗುತ್ತಿದ್ದಂತೆ ವರ ವಧುವಿನ ಕೊರಳಿಗೆ ಮಾಂಗಲ್ಯವನ್ನು ಕಟ್ಟುವುದು ಸಹಜ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಆಲಿಸುತ್ತಾ ವರ ವಧುವಿಗೆ ತಾಳಿ ಕಟ್ಟಿ ಹಸೆಮಣೆ ಏರಿದ ವಿಶೇಷ ಮಧುವೆ ಸುಳ್ಯದಲ್ಲಿ ನಡೆದಿದೆ.
ಬಿಜೆಪಿ ಕಾರ್ಯಕರ್ತ ಹಾಗೂ ಮೋದಿಯ ಅಭಿಮಾನಿ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಗುಡ್ಡಪ್ಪಗೌಡ-ಲಕ್ಷ್ಮಿ ದಂಪತಿಗಳ ಪುತ್ರ ಪಿ.ಜಿ.ಜಯರಾಮ ಮತ್ತು ಮರ್ಕಂಜ ಗ್ರಾಮದ ಕುದ್ಕುಳಿ ಚೀಮಾಡ್ ಕೇಪಣ್ಣ ಗೌಡ-ಕಮಲ ದಂಪತಿಗಳ ಪುತ್ರಿ ದಮಯಂತಿಯ ವಿವಾಹ ಸುಳ್ಯದ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದಲ್ಲಿ ಭಾನುವಾರ ನಡೆಯಿತು. 11.25ಕ್ಕೆ ವಿವಾಹ ಮುಹೂರ್ತ ಫಿಕ್ಸ್ ಆಗಿತ್ತು. ಇದೇ ಸಂದರ್ಭದಲ್ಲಿ ಆಕಾಶವಾಣಿಯ ಮೂಲಕ ಮೋದಿಯವರ 53ನೇ ಮನ್ ಕಿ ಬಾತ್ ಪ್ರಸಾರವಾಗುತ್ತಿತ್ತು. ಆದುದರಿಂದಲೇ ಮದುವೆಗೆ ಮಂತ್ರ ಘೋಷಗಳ ಬದಲು ಮೋದಿಯವರ ಮನದ ಮಾತು ಮದುವೆಗೆ ಹಿನ್ನೆಲೆಯಾಯಿತು.
ಇವರು ಮೋದಿ ಮನದ ಮಾತನ್ನು ಆಲಿಸುತ್ತಲೇ ಸಪ್ತಪದಿ ತುಳಿದರು. ಮೋದಿಯ ಭಾವಪೂರ್ಣ ಮನದ ಮಾತು ಆಲಿಸುತ್ತಲೇ ನೆರೆದ ಬಂಧು ಮಿತ್ರರು ಮದುವೆಗೆ ಸಾಕ್ಷಿಗಳಾದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…