ನವದೆಹಲಿ : ವಿಶ್ವವಿಖ್ಯಾತ ಆಗ್ರಾದ ತಾಜ್‌ಮಹಲ್‌ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆಯಬೇಕೆನ್ನುವ ಅರ್ಜಿಯೊಂದು ಅಲಹಾಬಾದ್ ನ್ಯಾಯಾಲಯದ ಮೆಟ್ಟಿಲೇರಿ ಸುದ್ದಿ ಮಾಡಿದ ಬೆನ್ನಲ್ಲೇ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಆ ಕೋಣೆಗಳ ಫೋಟೋಗಳನ್ನು ಬಿಡುಗಡೆ ಮಾಡಿದೆ.
ಮುಚ್ಚಿದ್ದ ಕೋಣೆಗಳಲ್ಲಿ ಈ ಹಿಂದೆ ಮಾಡಲಾದ ಕಾಮಗಾರಿಯ ಫೋಟೋಗಳನ್ನು ಜನವರಿ 2022 ರಲ್ಲಿ ಫೋಟೋಗಳು ಪ್ರಸಾರ ಮಾಡಲಾಗಿದ್ದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿವೆ ಎಂದು ಆಗ್ರಾ ಎಎಸ್‌ಐ ಮುಖ್ಯಸ್ಥ ಆರ್‌ಕೆ ಪಟೇಲ್ ತಿಳಿಸಿದ್ದಾರೆ. ಈ ಪೋಟೋಗಳಲ್ಲಿ ಅದರಲ್ಲಿ ಅಲ್ಲಿನ ಗೋಡೆಗಳು ಕಾಮಗಾರಿಗೂ ಮೊದಲು ಮತ್ತು ನಂತರ ಹೇಗೆ ಕಾಣಿಸುತ್ತಿದ್ದವು ಎನ್ನುವುದನ್ನು ವಿವರಿಸುವ ನಾಲ್ಕು ಫೋಟೋಗಳಿವೆ.
ಪ್ಲಾಸ್ಟರಿಂಗ್ ಮತ್ತು ಪೇಂಟಿಂಗ್ ಕೆಲಸ ಮಾಡಿರುವುದನ್ನು ಫೋಟೋಗಳಲ್ಲಿ ಗಮನಿಸಬಹುದು. ಈ ಕೊಠಡಿಗಳಲ್ಲಿ ಯಾವುದೇ ರಹಸ್ಯಗಳಿಲ್ಲ ಎಂದು ಈ ಹಿಂದೆಯೇ ಎಎಸ್‌ಐ ಅಧಿಕಾರಿಗಳು ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಸ್ಮಾರಕಗಳನ್ನು ಸಂರಕ್ಷಿಸುವುದು ಎಎಸ್‌ಐ ಯ ಪ್ರಮುಖ ಕರ್ತವ್ಯವಾಗಿದೆ.
ಅಯೋಧ್ಯೆಯ ಬಿಜೆಪಿ ನಾಯಕ ಡಾ.ರಜನೀಶ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ತಾಜ್ ಮಹಲ್‌ನಲ್ಲಿರುವ ಒಟ್ಟು 22 ಮುಚ್ಚಿದ ಕೊಠಡಿಗಳನ್ನು ಬಾಗಿಲುಗಳನ್ನು ತೆರೆಯುವಂತೆ ಒತ್ತಾಯಿಸಿ ರಿಟ್ ಅರ್ಜಿ ಸಲ್ಲಿಸಿದ್ದು ಕೋರ್ಟ್ ಈ ಮನವಿಯನ್ನು ತಳ್ಳಿಹಾಕಿದೆ.
ಬೆಂಗಳೂರು: ಏರ್‌ಪೋರ್ಟ್‌ನಲ್ಲಿ 1.37 ಕೋಟಿ ರೂ. ಮೌಲ್ಯದ ಚಿನ್ನ, ಮಾದಕ ವಸ್ತು ವಶಕ್ಕೆ ಬೆಂಗಳೂರು: ಇಲ್ಲಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1.37…
ಬಾರ್, ಪಬ್‍ಗಳಿಗೆ ವಿದ್ಯಾರ್ಥಿಗಳು: ದೂರು ಬಂದ ಕಾರಣ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ : ಪ್ರಿಯಾಂಕ್ ಖರ್ಗೆ ಬೆಂಗಳೂರು : ಬಾರ್,…
ಕಾಂಗ್ರೆಸ್ ಬಡವರ ಪಕ್ಷ , ಶಾಲು, ಹೂವು ಹಾಕುವ ಬದಲು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿ: ಕಾರ್ಯಕರ್ತರಿಗೆ ಬಿ.ಕೆ ಹರಿಪ್ರಸಾದ್…
ಸ್ವಯಂ ಉದ್ಯೋಗದ ಹೆಸರಲ್ಲಿ ಗೃಹಿಣಿಯರಿಗೆ ಪಂಗನಾಮ : 10 ಕೋಟಿ ವಂಚಿಸಿ ಪರಾರಿ ಹಾವೇರಿ : “ಮನೆಯಲ್ಲೇ ಕುಳಿತು ಕೈತುಂಬಾ…
ಉಡುಪಿ: ಜೂ.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಉಡುಪಿ: ರಾಜ್ಯದಲ್ಲಿ 0 ಇಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ…
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು ಮಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್…