Featured

ನವ ಮಂಗಳೂರು ಬಂದರಿಗೆ ಆಗಮಿಸಿದ  2 ನೇ ಬೃಹತ್ ಹಡಗು ‘ಸೆವೆನ್ ಸೀಸ್ ಎಕ್ಸ್‌ಪ್ಲೋರರ್ – Vishwanews24

ನವ ಮಂಗಳೂರು ಬಂದರಿಗೆ ಆಗಮಿಸಿದ  2 ನೇ ಬೃಹತ್ ಹಡಗು ‘ಸೆವೆನ್ ಸೀಸ್ ಎಕ್ಸ್‌ಪ್ಲೋರರ್

ಮಂಗಳೂರು: ಮಂಗಳೂರು ವಿದೇಶಿ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ, ಒಂದೇ ವಾರದಲ್ಲಿ ವಿದೇಶದ ಪ್ರವಾಸಿಗರನ್ನು ಹೊತ್ತ 2 ನೇ ಬೃಹತ್ ಹಡಗು ಕರ್ನಾಟಕ ಕರಾವಳಿಯ ವಾಣಿಜ್ಯ ಹೆಬ್ಬಾಗಿಲು ನವಮಗಳೂರು ಬಂದರಿಗೆ ಆಗಮಿಸಿದೆ.

ಪ್ರಸಕ್ತ ಋತುವಿನ ಎರಡನೇ ಕ್ರೂಸ್ ಹಡಗು ‘ಸೆವೆನ್ ಸೀಸ್ ಎಕ್ಸ್‌ಪ್ಲೋರರ್’ನ ಪ್ರವಾಸಿಗರನ್ನು ಮತ್ತು ಸಿಬಂದಿ ವರ್ಗವನ್ನು ಎನ್‌ಎಂಪಿಎ ಮತ್ತು ಎಂಪಿಎ ಅಧ್ಯಕ್ಷ ಡಾ. ಎ.ವಿ. ರಮಣ ಅವರು ಬಂದರಿಗೆ ಆತ್ಮೀಯವಾಗಿ ಸ್ವಾಗತಿಸಿದರು.

ಈ ಐಶರಾಮಿ ಹಡಗಿನಲ್ಲಿ 686 ಪ್ರಯಾಣಿಕರು ಮತ್ತು 552 ಸಿಬ್ಬಂದಿಗಳು ಇದ್ದಾರೆ.

ಪ್ರವಾಸಿಗರು ಮಂಗಳೂರು ಮತ್ತು ಸುತ್ತಮುತ್ತಲಿನ ವಿವಿಧ ಪ್ರವಾಸಿ ತಾಣಗಳಾದ ಸೇಂಟ್ ಅಲೋಶಿಯಸ್, ಕದ್ರಿ ದೇವಸ್ಥಾನ, ಕುದ್ರೋಳಿ ದೇವಸ್ಥಾನ, ಸ್ಥಳೀಯ ಮಾರುಕಟ್ಟೆ, ಗೋಡಂಬಿ ಕಾರ್ಖಾನೆ, ಕಾರ್ಕಳ ಗೋಮಟೇಶ್ವರ ಪ್ರತಿಮೆ, ಮೂಡಬಿದ್ರಿ ಸಾವಿರ ಕಂಬದ ಬಸದಿ, ಸೇಂಟ್ ಅಲೋಶಿಯಸ್ ಚಾಪೆಲ್ ಮತ್ತು ಫೋರಂ ಫಿಜಾ ಮಾಲ್ ಗೆ ಭೇಟಿ ನೀಡಿದರು.

ಪ್ರವಾಸಿಗರಿಗೆ ಕರಾವಳಿಯ ಯಕ್ಷಗಾನ ಮತ್ತು ಸಾಂಪ್ರದಾಯಿಕ ಡೋಲು (ಚಂಡೆ) ಮುಂತಾದ ಸಾಂಪ್ರದಾಯಿಕ ಜಾನಪದದ ಶೈಲಿಯಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.

ಕ್ರೂಸ್ ಪ್ರಯಾಣಿಕರ ಸೌಕರ್ಯ ಮತ್ತು ಉತ್ತಮ ಅನುಭವಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಪ್ರವಾಸಿಗರಿಗೆ ವೈದ್ಯಕೀಯ ತಪಾಸಣೆ, ಕ್ಷಿಪ್ರ ಸಂಚಾರಕ್ಕಾಗಿ ವಲಸೆ ಮತ್ತು ಕಸ್ಟಮ್ಸ್ ಕೌಂಟರ್‌ಗಳು, ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಅಂಗಡಿಗಳು, ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡುವ ಪ್ರವಾಸಿಗರಿಗೆ 02 ಶಟಲ್ ಬಸ್ ಸೇರಿದಂತೆ 25 ಕೋಚ್‌ಗಳು ಮತ್ತು ಟ್ಯಾಕ್ಸಿಗಳು, ಪ್ರವಾಸಿ ವ್ಯಾನ್‌ಗಳು, ಆಯುಷ್ ಇಲಾಖೆಯಿಂದ ಧ್ಯಾನ ಕೇಂದ್ರವನ್ನು ಸಿದ್ಧಪಡಿಸಲಾಗಿತ್ತು.

ಪ್ರವಾಸಿಗರಿಗೆ ಸ್ಥಳೀಯ ಜಾನಪದ ಮತ್ತು ಪ್ರದೇಶದ ಸಂಪ್ರದಾಯಗಳನ್ನು ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು.

ನೌಕಾಯಾನದ ಪ್ರವಾಸಿಗರು ತಮ್ಮ ಹಡಗಿಗೆ ಮರಳುತ್ತಿರುವಾಗ ಮಂಗಳೂರಿಗೆ ಭೇಟಿ ನೀಡಿದ ಸವಿನೆನಪಿಗಾಗಿ ಬಂದರಿನಿಂದ ಸ್ಮರಣಿಕೆಗಳನ್ನು ನೀಡಲಾಯಿತು.

ಹಡಗು ತನ್ನ ಮುಂದಿನ ತಾಣವಾದ ಮಾಲೆಗೆ ಸಂಜೆ ಆರು ಗಂಟೆ ಸುಮಾರಿಗೆ ಪ್ರಯಾಣ ಬೆಳೆಸಿತು.

ಈ ಐಶಾರಾಮಿ ಕ್ರೂಸ್ ಹಡಗು “ಸೆವೆನ್ ಸೀಸ್ ಎಕ್ಸ್‌ಪ್ಲೋರರ್” ನ ಒಟ್ಟಾರೆ ಉದ್ದ 223.74 ಮೀಟರ್ ಮತ್ತು 55,254 ಒಟ್ಟು ಟನ್ನೇಜ್ 7 ಮೀಟರ್ Draft ಸಾಮರ್ಥ್ಯವನ್ನು ಹೊಂದಿದೆ.

ಮಾಲ್ಡೀವ್ಸ್ ನ ಮಾಲೆಗೆ ಹೋಗುವ ಮಾರ್ಗದಲ್ಲಿ ಹಡಗು ಕತಾರ್ ಬಂದರಿನಿಂದ ಭಾರತಕ್ಕೆ ಬಂದು ಗೋವಾದ ಮರ್ಮುಗೋವಾ ಬಂದರಿನಲ್ಲಿ ನಿಂತು ಅಲ್ಲಿಂದ ಮಂಗಳೂರಿಗೆ ಆಗಮಿಸಿತ್ತು.

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

14 hours ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

15 hours ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

15 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

15 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

15 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

15 hours ago