ಬೆಂಗಳೂರು: “ನನ್ನ ಹೋರಾಟ ಬಿಜೆಪಿಯವರ ವಿರುದ್ಧ ಮಾತ್ರ. ಸಿದ್ದರಾಮಯ್ಯ, ದಿನೇಶ್ ವಿರುದ್ಧ ಹೋರಾಟ ಅಲ್ಲ,” ಎಂದು ಡಿಕೆ ಶಿವಕುಮಾರ್, ತಿಳಿಸಿದ್ದಾರೆ..
“ನಾನೇಕೆ ಸಿದ್ದರಾಮಯ್ಯ ವಿರುದ್ಧ ಮಾತನಾಡ್ಲಿ? ಗದ್ದುಗೆ ಏರೋಕೆ ನನಗೆ ಯಾವುದೇ ಆತುರ ಇಲ್ಲ. ನಾನು ಗಾಂಧಿ ಕುಟುಂಬಕ್ಕೆ ನಿಷ್ಠನಾಗಿದ್ದೇನೆ. ಅಧಿಕಾರ ಹುಡುಕಿಕೊಂಡು ಹೋಗುವ ಅಗತ್ಯ ಇಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಡಿಕೆಶಿ ಗೊತ್ತು. ಲಾಬಿ ಮಾಡಿ ಅಧಿಕಾರ ಪಡೆಯುವ ಅಗತ್ಯ ಇಲ್ಲ,” ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯತ್ನಿಸುತ್ತಿಲ್ಲ ಎಂಬುದನ್ನು ತಿಳಿಸಿದರು.
“ಹಣೆಬರಹದಲ್ಲಿ ಬರೆದಿದ್ರೆ ಬಂದೇ ಬರತ್ತೆ. ಲಕ್ಷ್ಮಣ ಸವದಿ ನೋಡಿ. ಶಾಸಕರಲ್ಲದೇ ಇದ್ದರೂ ಮಂತ್ರಿ ಆದರು. ಉಪಮುಖ್ಯಮಂತ್ರಿ ಕೂಡ ಆದರು. ಅವರ ಹಣೆಯಲ್ಲಿ ಬರೆದಿತ್ತು, ಅದಕ್ಕೆ ಆಗಿದ್ದಾರೆ,” ಎಂದರು.
“ಒಂದು ಕಾಲ ಇತ್ತು, ನಾವು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ನಮ್ಮ ಮಕ್ಕಳು, ಮೊಮ್ಮಕ್ಕಳು ಅನುಭವಿಸುತ್ತಿದ್ದರು. ಆದ್ರೆ ಈಗ ನಾವು ಮಾಡಿದ್ದು ನಾವೇ ಅನುಭವಿಸಬೇಕು. ಈಗ ಕಾಲ ಎಲ್ಲವೂ ಬದಲಾಗಿದೆ. ಅವರಿಗಾಗಿ ಮಂತ್ರಿ ಸ್ಥಾನವನ್ನ ಇಟ್ಟುಕೊಂಡಿದ್ದಾರೆ. ಆದಷ್ಟು ಬೇಗ ಅವರೆಲ್ಲ ಮಂತ್ರಿಯಾಗಲಿ,” ಎಂದರು.
ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಸರ್ಕಾರ ಅನುದಾನ ಕಡಿತ ಮಾಡಿದ್ರೆ 100 ಶಾಸಕರ ಪರವಾಗಿ ನಾನು ಹೋರಾಟ ಮಾಡ್ತೇನೆ,” ಎಂದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…