ಮಂಡ್ಯ: “ಇನ್ನು ಮುಂದೆ ನಾನು ಕಣ್ಣೀರು ಹಾಕುವುದಿಲ್ಲ” ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಶಪಥ ಹಾಕಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇನ್ನು ಮುಂದೆ ನಾನು ಕಣ್ಣೀರು ಹಾಕುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. ಹಾಗೆಂದು ನಾನು ಕಟುಕ ಹೃದಯದವನು ಎಂದು ಭಾವಿಸಬೇಡಿ. ಜನರ ಕಷ್ಟವನ್ನು ನೋಡಿದಾಗ ನನ್ನ ಹೃದಯ ಮಿಡಿಯುತ್ತದೆ” ಎಂದಿದ್ದಾರೆ.
“ನಾನು ಸಿಎಂ ಆಗಿದ್ದ ಸಂದರ್ಭ ಕನಗನಮರಡಿ ಬಸ್ ದುರಂತ ಸಂಭವಿಸಿತ್ತು. ಆಗ ಅನೇಕರು ಮೃತಪಟ್ಟಿದ್ದರು. ಆ ದೃಶ್ಯವನ್ನು ಕಂಡು ನೋವಿನಿಂದ ಕಣ್ಣೀರಿಟ್ಟಿದ್ದೆ. ಆದರೆ, ಕೆಲವರು ಅದನ್ನೇ ಟವೆಲ್‌ನಲ್ಲಿ ಗ್ಲಿಸರಿನ್ ಹಚ್ಚಿ ಅಳುತ್ತಿದ್ದಾರೆ ಎಂದು ಹೇಳಿದ್ದರು” ಎಂದು ತಿಳಿಸಿದ್ದಾರೆ.
“ನಾನು ಗ್ಲಿಸರಿನ್ ಹಚ್ಚಿ ಅಥವಾ ಯಾವುದೇ ನಾಟಕೀಯವಾಗಿ ಕಣ್ಣೀರು ಹಾಕಿಲ್ಲ. ಜನರ ಸಂಕಷ್ಟವನ್ನು ಭಾವನಾತ್ಮಕವಾಗಿ ನೋಡಿದಾಗ ಕಣ್ಣೀರು ಬರುತ್ತದೆ” ಎಂದಿದ್ದಾರೆ.
ಅರಿಶಿಣಪುಡಿ, ಮಸಾಲೆ ಪುಡಿಗಳಲ್ಲಿ ಸೀಸದ ಅಂಶ ಪತ್ತೆ: ಅಧಿಕೃತ ಪರೀಕ್ಷೆಗೆ ಸರ್ಕಾರ ಆದೇಶ ಬೆಂಗಳೂರು: ದಿನನಿತ್ಯ ಬಳಸುವ ಅರಿಶಿಣಪುಡಿ ಹಾಗೂ…
ಸಿಎಂ ಅಧಿಕಾರದಲ್ಲಿ ಮುಂದುವರಿಯಲು ಸಿದ್ಧ, ಪದತ್ಯಾಗಕ್ಕೂ ಸಿದ್ಧ: ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ ಬೆಂಗಳೂರು: ಮೇ 15ರ ಒಳಗಡೆ ಕಾಂಗ್ರೆಸ್…
ಉಡುಪಿ ಪೊಲೀಸರ ವಿಶೇಷ ಕಾರ್ಯಾಚರಣೆ: ಜಿಲ್ಲೆಯಲ್ಲಿ ಒಟ್ಟು 32 ಅಕ್ರಮ ಹೋಂ ಸ್ಟೇಗಳು ಪತ್ತೆ ಉಡುಪಿ: ಕೊಡಗು ಜಿಲ್ಲೆಯ ಹೋಂಸ್ಟೇಯೊಂದರಲ್ಲಿ…
ಬೆಂಗಳೂರು: ರಸ್ತೆಯಲ್ಲಿ ನಿಂತು ವೇಶ್ಯವಾಟಿಕೆಗೆ ಪ್ರಚೋದನೆ : 6 ವಿದೇಶಿ ಮಹಿಳೆಯರ ಬಂಧನ ಬೆಂಗಳೂರು: ನಗರದ ಕೋರಮಂಗಲ ಚೆಕ್‌ಪೋಸ್ಟ್ ಬಳಿ …
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊಲ್ಲೂರು:…
ಕಾಂಗ್ರೆಸ್ ಯಾವತ್ತೂ ಮಹಿಳಾ ವಿರೋಧಿ ಅಲ್ಲ, ಬಿಜೆಪಿಯದ್ದು ರಾಜಕೀಯ ಆಟ :ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ : ಕಾಂಗ್ರೆಸ್ ಯಾವತ್ತೂ…