ಬೆಂಗಳೂರು: ನಾನು ನಂದಿ ಅಲ್ಲ, ನಾನು ಜಗದೀಶ್. ನಾನು ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ. ಯಾರಾದ್ರೂ ನನ್ನನ್ನು ರೌಡಿಶೀಟರ್ ಅಂದ್ರೆ ಅವರ ವಿರುದ್ಧ ಕೇಸ್ ದಾಖಲು ಮಾಡ್ತೀನಿ ಎಂದು ರಮೇಶ್ ಜಾರಕಿಹೊಳಿ ಸಿಡಿ ಕೇಸ್ನ ಯುವತಿ ಪರ ವಕೀಲ ಜಗದೀಶ್ ಎಚ್ಚರಿಸಿದ್ದಾರೆ.
ಬುಧವಾರ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಜಗದೀಶ್, ನನ್ನ ವಿರುದ್ಧದ ಎಲ್ಲ ಕೇಸ್ಗಳು ಖುಲಾಸೆ ಆಗಿವೆ. ನಾವು ಕ್ಲೀನ್ಹ್ಯಾಂಡ್, ನಮ್ಮ ಚಾರಿತ್ರ್ಯವಧೆ ಮಾಡೋದು ಸರಿಯಲ್ಲ. ನಾನು ಕೆಂಪೇಗೌಡ ವಂಶಸ್ಥ. ಯಾರಾದ್ರೂ ನನ್ನನ್ನ ರೌಡಿಶೀಟರ್ ಅಂದ್ರೆ ಅವರ ವಿರುದ್ಧ ಕೇಸ್ ದಾಖಲು ಮಾಡ್ತೀನಿ ಎಂದ ಜಗದೀಶ್, ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ ಹಿಂದೆ ಆರ್ಎಸ್ಎಸ್ ಮತ್ತು ಭಜರಂಗದಳ ಇದೆ ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ : ಹುಬ್ಬಳ್ಳಿ, ಹೈದರಾಬಾದ್ ನಡುವಿನ ವಿಮಾನಯಾನಕ್ಕೆ ಚಾಲನೆ -Vishwanews24
ಸಿಡಿ ಪೊಲೀಸರು ಆರೋಪಿ(ರಮೇಶ್ ಜಾರಕಿಹೊಳಿ)ಗೆ ಸಹಕರಿಸುತ್ತಿರೋ ಬಗ್ಗೆ ದಾಖಲೆಯಿದೆ. ನಿನ್ನೆಯಿಂದ ದಾಖಲೆಯನ್ನ ಕಲೆ ಹಾಕಿದ್ದೇನೆ. ಇದಕ್ಕೆ ಎಸ್ಐಟಿ ಉತ್ತರ ಕೊಡುತ್ತಾ? ಎಸ್ಐಟಿ ಕುರಿತಾದ ಸಾಕ್ಷ್ಯಗಳು ನಮ್ಮ ಬಳಿ ಇದೆ. ನಿನ್ನೆ 164 ಹೇಳಿಕೆಯ ಸಂದರ್ಭದಲ್ಲಿ 150ಕ್ಕೂ ಹೆಚ್ಚು ವಕೀಲರು ಹಾಜರಿದ್ದರು. ನಾವು ಯಾರಿಗೂ ಬನ್ನಿ ಎಂದಿರಲಿಲ್ಲ. ಯುವತಿ ಪರವಾಗಿ ಅವರು ವಿಚಾರಣೆ ವೇಳೆ ಹಾಜರಿದ್ದಾರೆ. ವಿಚಾರಣೆ ಮುಗಿಸಿ ಹೊರ ಬಂದಾಗ ಯುವತಿಯ ವಿಡಿಯೋವನ್ನು ಪೊಲೀಸರೇ ಮಾಡಿ ಮಾಧ್ಯಮಕ್ಕೆ ಹಂಚಿದ್ದಾರೆ ಎಂದು ವಕೀಲ ಜಗದೀಶ್ ಅಸಮಾಧಾನ ಹೊರಹಾಕಿದರು.
ಕೆಪಿಸಿಸಿಯ ಸೂರ್ಯ ಮುಕುಂದರಾಜ್ ಬಂದ ಪೊಟೋವನ್ನು ಪೊಲೀಸರೇ ವೈರಲ್ ಮಾಡಿದ್ದಾರೆ. ಸೂರ್ಯ ಮುಕುಂದರಾಜ್ ವಕೀಲರಾಗಿ ಹಾಜರಿದ್ದರು. ಫೋಟೋ ವೈರಲ್ ಮಾಡಿದ ಎಸ್ಐಟಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ. ನಗರ ಪೊಲೀಸ್ ಆಯುಕ್ತ ಸೇರಿದಂತೆ ಹಲವರ ವಿರುದ್ಧ ದೂರು ನೀಡುತ್ತೇನೆ ಎಂದು ಜಗದೀಶ್ ಕಿಡಿಕಾರಿದರು
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…