ಮುಂಬೈ: ಧರ್ಮದ ಕುರಿತಂತೆ ಬಾಲಿವುಡ್ ನಟ ಶಾರೂಖ್ ಖಾನ್ ನೀಡಿರುವ ಅಭಿಪ್ರಾಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಿವಿ ಶೋ ವೊಂದರಲ್ಲಿ ಧರ್ಮದ ಕುರಿತಂತೆ ಮಾತನಾಡಿದ ಶಾರೂಖ್ ಖಾನ್, ಹಿಂದೂ ಮುಸ್ಲಿಂ ಬಗ್ಗೆ ಚರ್ಚೆ ಮಾಡುವುದಿಲ್ಲ. ನನ್ನ ಹೆಂಡತಿ ಹಿಂದೂ, ನಾನು ಮುಸ್ಲಿಂ, ನನ್ನ ಮಕ್ಕಳು ಹಿಂದೂಸ್ತಾನ್. ಶಾಲಾ ನಮೂನೆಯಲ್ಲಿ ಧರ್ಮದ ಕುರಿತಂತೆ ನನ್ನ ಮಗಳು ಕೇಳಿದಾಗ , ನಾವೆಲ್ಲಾ ಭಾರತೀಯರು, ನಮಗೆ ಯಾವುದೇ ಧರ್ಮ ಇಲ್ಲ ಎಂದು ಹೇಳಿರುವುದಾಗಿ ಅವರು ತಿಳಿಸಿದರು.
ತನ್ನ ಧರ್ಮದ ಬಗ್ಗೆ ಪ್ರತಿಕ್ರಿಯಿಸಿರುವ ಶಾರೂಖ್ ಖಾನ್, ಪ್ರತಿದಿನ ಐದು ಬಾರಿ ನಮಾಜ್ ಮಾಡುವುದಿಲ್ಲ, ಆದರೆ, ನಾನೊಬ್ಬ ಮುಸ್ಲಿಂ. ಇಸ್ಲಾಂ ನಂಬಿಕೆಗಳಲ್ಲಿ ವಿಶ್ವಾಸವಿದೆ. ಅದೊಂದು ಉತ್ತಮ ಧರ್ಮ ಹಾಗೂ ಶಿಸ್ತು ಎಂಬುದನ್ನು ನಂಬುತ್ತೇನೆ ಎನ್ನುತ್ತಾರೆ.