ಮೈಸೂರು, : “ನಾನು ರೆಬಲ್ ಅಲ್ಲ, ಲಾಯಲ್. ನಿಯಮ ಪಾಲನೆಗಾಗಿ ಈ ರೀತಿಯ ಪತ್ರ ಬರೆದಿದ್ದೇನೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಸಿಎಂ ಬಿ.ಎಸ್.ವೈ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಿಯಮಗಳ ಅನುಸಾರ ಅನುದಾನ ಬಿಡುಗಡೆ ಮಾಡಿದ್ದರೆ ನಾನು ಆಕ್ಷೇಪ ಮಾಡುತ್ತಿರಲಿಲ್ಲ. ಬಜೆಟ್‌ನಲ್ಲಿ ಘೋಷಣೆಯಾದ ಹಣವನ್ನು ಆರ್ಥಿಕ ಇಲಾಖೆ ಆಯಾ ಇಲಾಖೆಗೆ ಬಿಡುಗಡೆ ಮಾಡಲಿದೆ. ಆದರೆ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಿಯಮ ಮೀರಿ ಮಧ್ಯಪ್ರವೇಶ ಮಾಡಿದ್ದು, ಕಾನೂನು ಉಲ್ಲಂಘನೆ ಮಾಡಿ ಅನುದಾನ ಬಿಡುಗಡೆಗೆ ಪತ್ರದ ಮೂಲಕ ತಿಳಿಸಿದ್ದಾರೆ. ನಾನು ಇದಕ್ಕೆ ಆಕ್ಷೇಪಿಸಿದ್ದೇನೆ” ಎಂದಿದ್ದಾರೆ.
ರಾಜ್ಯದಲ್ಲಿ ಕೊರೊನಾ ಅಬ್ಬರ : ಇಂದು ಹೊಸ ಮಾರ್ಗಸೂಚಿ ಬಿಡುಗಡೆ : ಸಚಿವ ಸುಧಾಕರ್-Vishwanews24
“ಸಿಎಂ ಯಡಿಯೂರಪ್ಪ ಅವರು ನನ್ನ ಇಲಾಖೆಯ ಪ್ರಿನ್ಸ್‌ಪಲ್ ಸೆಕ್ರೇಟರಿಗೆ 65 ಕೋಟಿ ಅನುದಾನ ಬಿಡುಗಡೆ ಬಗ್ಗೆ ತಡೆ ಹಿಡಿಯಲಾಗಿದ್ದಂತ ಅನುದಾನವನ್ನು ಬಿಡುಗಡೆ ಮಾಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದರು. ನಮ್ಮ ಸೆಕ್ರೇಟರಿ ನನ್ನ ಬಳಿ ಕೇಳಿದಾಗ ನಿಯಮದ ಪ್ರಕಾರ ಏನು ಕ್ರಮ ಕೈಗೊಳ್ಳುತ್ತೀರೋ ಕೈಗೊಳ್ಳಿ ಎಂದು ಹೇಳಿದ್ದೆ. ಈ ಬಗ್ಗೆ ನಾನು ವಿವಿಧ ಅಧಿಕಾರಿಗಳ ಬಳಿ ಇದು ಸರಿನಾ ಎಂದು ಚರ್ಚೆ ನಡೆಸಿದಾಗ ಇದು ನಿಯಮಾನುಸಾರ ತಪ್ಪು ಎಂದು ತಿಳಿಯಿತು” ಎಂದು ಹೇಳಿದ್ದಾರೆ.
“ಇಲಾಖೆಯ ಹಣವನ್ನು ಸಂಬಂಧಿಸಿದ ಸಚಿವರ ಗಮನಕ್ಕೆ ಬಾರದಂತೆ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮರಿಸ್ವಾಮಿಗೆ ನಿಯಮಬಾಹಿರವಾಗಿ ಬಿಡುಗಡೆಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದರೆ ಇದು ಎಷ್ಟು ಸರಿ. ಈ ಕಾರಣಕ್ಕಾಗಿ ನಾನು ಸಿಎಂ ಅವರ ನಡೆಯ ಬಗ್ಗೆ ರಾಜ್ಯಪಾಲರಿಗೆ ಹಾಗೂ ಉಸ್ತುವಾರಿ ಸಚಿವ ಅರುಣ್ ಸಿಂಗ್ ಅವರಿಗೆ ಪತ್ರ ಬರೆದಿದ್ದೆ” ಎಂದು ತಿಳಿಸಿದ್ದಾರೆ,
ದ. ಕ.ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಸ್.ಆರ್.ಭಗವಾನ್ ಅಧಿಕಾರ ಸ್ವೀಕಾರ -Vishwanews24
ಮಂಗಳೂರು : ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿ ರೆಮೋನಾ ಎವೆಟ್ ಪೆರೇರಾ ಆಯ್ಕೆ ಮಂಗಳೂರು : ಮಂಗಳೂರಿನ ಸಂತ ಅಲೋಸಿಯೆಸ್ ಪರಿಗಣಿತ…
ಮಣಿಪಾಲ: ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಢಿಕ್ಕಿ : ಪೋಷಕರ ವಿರುದ್ಧ ಪ್ರಕರಣ ದಾಖಲು ಮಣಿಪಾಲ: ಪರ್ಕಳ ನೇತಾಜಿ…
ಶಿಮ್ಲಾ: ಕಂದಕಕ್ಕೆ ಉರುಳಿ ಬಿದ್ದ ಬೊಲೆರೊ ; ಏಳು ಮಂದಿ ಸಾವು ಶಿಮ್ಲಾ: ಶಿಮ್ಲಾದ ಮಸ್ರುಂದ್-ಹಮಲ್ ರಸ್ತೆಯಲ್ಲಿ ವಾಹನವೊಂದು ಕಂದಕಕ್ಕೆ…
ಪುತ್ತೂರು: ಅಕ್ರಮ ಜಾನುವಾರು ಸಾಗಾಟ ಆರೋಪ ; ಇಬ್ಬರ ಬಂಧನ ಉಪ್ಪಿನಂಗಡಿ: ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಈಚರ್ ಲಾರಿಯಲ್ಲಿ ಜಾನುವಾರು…
ತಾತನಿಂದ ಬಂದ ಆಸ್ತಿ ತಂದೆಯ ವೈಯಕ್ತಿಕ ಆಸ್ತಿ ; ಮೊಮ್ಮಕ್ಕಳಿಗೆ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು ಬೆಂಗಳೂರು: ಅಜ್ಜ ತನ್ನ…
RSS ನೋಂದಣಿ ಬಗ್ಗೆ ಪ್ರಶ್ನಿಸುವ ಪ್ರಿಯಾಂಕ್ ಖರ್ಗೆಗೆ ಇಸ್ಲಾಮಿಕ್ ಮತೀಯ ಸಂಘಟನೆಗಳನ್ನು ಕೇಳುವ ಧೈರ್ಯವಿದೆಯೇ : ಯಶ್ ಪಾಲ್ ಸುವರ್ಣ…