ಉಡುಪಿ

ನಾನು ವ್ಯವಹಾರ ಕ್ಷೇತ್ರಕ್ಕೆ ಬಂದು ನಲ್ವತ್ತು ವರ್ಷಗಳು ಕಳೆದು ಹೋಗಿದೆ – ರಾಜಕಾರಣ ನನ್ನ ಗಂಜಿ ಕೇಂದ್ರ ಅಲ್ಲ : ಸೊರಕೆಗೆ ತಿರುಗೇಟು ನೀಡಿದ ಶಾಸಕ ಗುರ್ಮೆ : vishwanews24

ನಾನು ವ್ಯವಹಾರ ಕ್ಷೇತ್ರಕ್ಕೆ ಬಂದು ನಲ್ವತ್ತು ವರ್ಷಗಳು ಕಳೆದು ಹೋಗಿದೆ – ರಾಜಕಾರಣ ನನ್ನ ಗಂಜಿ ಕೇಂದ್ರ ಅಲ್ಲ : ಸೊರಕೆಗೆ ತಿರುಗೇಟು ನೀಡಿದ ಶಾಸಕ ಗುರ್ಮೆ : vishwanews24

ಕಾಪು:   ಕಾಪು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಕಳೆದ ಹದಿನಾಲ್ಕು ತಿಂಗಳಲ್ಲಿ 2023-24, 2024-25ರ ಅವಧಿಯಲ್ಲಿ ಈವರೆಗೆ ನದಿದಂಡೆ ಸಂರಕ್ಷಣೆ, ಗ್ರಾಮೀಣ ರಸ್ತೆ, ಕಡಲ್ಕೊರೆತ, ಅಲ್ಪಸಂಖ್ಯಾತರ ಕಾಲನಿ ರಸ್ತೆ, ಲೋಕೋಪಯೋಗಿ, ಪ.ಜಾತಿ ಸಮುದಾಯ ರಸ್ತೆ, ಪ. ಪಂ. ಕಾಲೊನಿ ರಸ್ತೆ, ಪ್ರಾರ್ಥನಾ‌ ಮಂದಿರ, ಕೆರೆಗಳ ಅಭಿವೃದ್ಧಿ, ಮೀನುಗಾರಿಕಾ ಕೊಂಡಿ ರಸ್ತೆ, ನದಿಕೊರೆತ, ಕಿಂಡಿ ಅಣೆಕಟ್ಟು, ನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಹಿತ ಸಚಿವರುಗಳಿಗೆ 288.82 ಕೋಟಿ ರೂ.‌ವೆಚ್ಚದ ಪ್ರಸ್ತಾವನೆ ಸಲ್ಲಿಸಿದ್ದೇನೆ. ಸರಕಾರ ಈವರೆಗೆ 18.22 ಕೋಟಿ ರೂ. ಅನುದಾನವನ್ನು ಮಾತ್ರ ನೀಡಿದೆ ಎಂದು ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಕಾಪುವಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಉದ್ದೇಶಪೂರ್ವಕವಾಗಿ ಸಚಿವರುಗಳಿಗೆ ಒತ್ತಡ ಹೇರಿ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗದಂತೆ ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಬಾರಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ವಿನಯ್ ಕುಮಾರ್ ಸೊರಕೆ ಇವರು 2 ಕಾಂಗ್ರೇಸ್ ನಿಂದ ಸ್ಪರ್ಧಿಸಿದ್ದು, ಜನಾದೇಶ ಇವರ ಪರವಾಗಿ ಇಲ್ಲದೇ ಇದ್ದು, 2 ಬಾರಿ ಸೋತು ಈ ಹತಾಶೆಯಿಂದ ಪ್ರಸ್ತುತ ಶಾಸಕನಾದ ನನ್ನ ಮೇಲೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗಳು ಆಗುತ್ತಿಲ್ಲವೆಂದು ಸುಳ್ಳು ಆಪಾದನೆಯನ್ನು ಹೊರಿಸಿರುತ್ತಾರೆ.

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಇವರು ಪತ್ರಿಕಾಗೋಷ್ಟಿಯಲ್ಲಿ ಶಾಸಕನಾದ ನನ್ನ ಮೇಲೆ ವ್ಯವಹಾರಿಕರಣದ ಉದ್ದೇಶದಿಂದ ಕೆಲಸ ಮಾಡುತ್ತಿರುವರೆಂದು ಅಪಾದನೆಯನ್ನು ಮಾಡಿರುತ್ತಾರೆ. ಆದರೆ ನಾನು ಕಳೆದ 40 ವರ್ಷಗಳಿಂದ ನ್ಯಾಯೋಚಿತವಾಗಿ ವಿವಿಧ ಕಡೆಗಳಲ್ಲಿ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದು, ಬಂದ ಆದಾಯದ ಸ್ವಲ್ಪ ಭಾಗವನ್ನು ಶಾಸಕನಾಗುವ ಪೂರ್ವದಿಂದಲೂ ಇಂದಿನವರೆಗೆ ಸಮಾಜದ ಕಟ್ಟಕಡೆಯ ನೊಂದ ವ್ಯಕ್ತಿಗಳ ಕಣ್ಣಿರು ಒರೆಸುವ ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿರುವುದು ಸಾರ್ವಜನಿಕ ವೇದ್ಯವಾಗಿರುತ್ತದೆ. ಆದರೆ ಯಾವುದೇ ಆದಾಯ ಮೂಲಗಳಿಲ್ಲದೆ ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ಸಂಪಾದಿಸಿರುವುದು ಯಾವ ವ್ಯವಹಾರದಿಂದ ಎಂಬುದು ಸೊರಕೆ ಅವರು ಸ್ಪಷ್ಟಪಡಿಸಬೇಕಿರುತ್ತದೆ?

ಸೊರಕೆ ಇವರು ಈ ಹಿಂದೆ ಪುರಸಭಾ ವ್ಯಾಪ್ತಿಯ 500 ನಗರಾಭಿವೃದ್ಧಿ ವಸತಿ ರಹಿತ ನೀಡಿದ್ದು ಅದು ಶ್ರೀ. ವಿನಯ ಕುಮಾರ್ ಸಚಿವರಾಗಿದ್ದ ಸಂದರ್ಭದಲ್ಲಿ ಸಂದರ್ಭದಲ್ಲಿ ಕಾಪು ಕುಟುಂಬಗಳಿಗೆ ವಸತಿ ಸಮುಚ್ಚಯದ ಸೌಲಭ್ಯವನ್ನು ಒದಗಿಸುವುದಾಗಿ ಹಾಗೂ 100 ಕೋಟಿ ವಿಶೇಷ ಅನುದಾನವನ್ನು ಪುರಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಒದಗಿಸಿರುವುದಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಸುಳ್ಳು ಭರವಸೆಯನ್ನು ಇನ್ನು ಕಾರ್ಯಗತವಾಗದೇ ಇರುವುದಕ್ಕೆ ಕಾರಣವೇನು ಎಂಬುದೆ ಬಗ್ಗೆ ಸೊರಕೆಯವರು ಉತ್ತರಿಸಬೇಕು? ಕಾಪು ಪುರಸಭಾ ರಚನಾ ಸಂದರ್ಭದಲ್ಲಿ ಪೂರ್ವ ಯೋಜನೆ ಇಲ್ಲದೆ ಪುರಸಭೆಯನ್ನಾಗಿ ಘೋಷಿಸಿದ್ದರಿಂದ ಕಾಪು ಪುರ ಸಭಾ ವ್ಯಾಪ್ತಿಯ 5 ಕೀಮೀ ಒಳಗಿನ ಗ್ರಾಮಂತರ ಪ್ರದೇಶವನ್ನು ಯಾವುದೇ ಮಾಸ್ಟರ್ ಪ್ಲಾನ್ ಇಲ್ಲದೆ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಿದ್ದರಿಂದ ಸಾರ್ವಜನಿಕರು ಅನುಭವಿಸುವ ಸಂಕಷ್ಟಗಳಿಗೆ ಸೊರಕೆಯವರು ನೇರ ಕಾರಣಿಭೂತರಾಗಿರುತ್ತಾರೆ.

ಎಲ್ಲೂರು ಐ.ಟಿ.ಐ ಕಾಲೇಜಿಗೆ ನಿವೇಶನವನ್ನು ಕಾಲೇಜಿನ ಹೆಸರಿಗೆ ಮಂಜೂರು ಮಾಡದೇ 5 ಕೋಟಿ ಅನುದಾನವನ್ನು ಸೊರಕೆಯವರು ಬಿಡುಗಡೆಗೊಳಿಸಿರುವುದು ಯಾವ ಉದ್ದೇಶಕ್ಕೆ ? ಆದ್ದರಿಂದ ಈಗಿನ ಎಲ್ಲೂರು ಐ.ಟಿ.ಐ ಕಾಲೇಜಿನ ಪರಿಸ್ಥಿತಿಗೆ ಸೊರಕೆ ಇವರರ ನೇರ ಕಾರಣರಾಗಿರುತ್ತಾರೆ.

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿನಯ ಕುಮಾರ್ ಸೊರಕೆ ಇವರು ಪೂರ್ಣಗೊಳಿಸಿದ ಕಡಲೊರೆತ ಭಾಧಿತ ಪ್ರದೇಶಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಹಣ ಮಂಜೂರು ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಸುಳ್ಳು ಭರವಸೆಯನ್ನು ನೀಡಿ ಅಲ್ಲದೇ ಗುತ್ತಿಗೆದಾರರಿಗೆ ಶಿಫಾರಸ್ಸು ಪತ್ರವನ್ನು ನೀಡಿ ರಾಜ್ಯದಲ್ಲಿ ತಮ್ಮದೇ ಸರಕಾರವಿದ್ದರೂ ಇಲ್ಲಿಯವರೆಗೆ ಕಡಲೊರೆತ ತಡೆಗೋಡೆಗೆ ಹಣ ಮಂಜೂರು ಮಾಡಿರುವುದಿಲ್ಲ. ಅಲ್ಲದೇ ಹಿಂದಿನ ಸರ್ಕಾರದ ಕಡಲಕೊರೆತ ತಡೆ ಸಂರಕ್ಷಣೆಗೆ ಕಾಮಗಾರಿಯ ಅವಧಿಯಲ್ಲಿ ಗುತ್ತಿಗೆದಾರಿಗೆ ಸರಕಾರ ಅನುದಾನ ಬಿಡುಗಡೆ ಮಾಡಿರುವದೇ ಹೊರತು ಇದರಲ್ಲಿ ನನ್ನ ವ್ಯವಹಾರದ ಉದ್ದೇಶವಿರುವುದಿಲ್ಲ ಎಂಬವುದು ಸೊರಕೆಯವರ ಗಮನಕ್ಕೆ ಬಾರದಿರುವುದು ವಿಷಾದನೀಯ. ಇತ್ತೀಚೆಗೆ ನಡಿಪಟ್ಟದಲ್ಲಿ ಕಡಲಕೊರೆತ ತೀವ್ರವಾಗಿದ್ದು ಈ ಬಗ್ಗೆ ಮೀನುಗಾರಿಕಾ ಸಚಿವರಾದ ಶ್ರೀ, ಮಾಂಕಾಳ್ ವೈದ್ಯರಲ್ಲಿ ಖುದ್ದು ಭೇಟಿ ಮಾಡಿ ಪ್ರಸ್ತಾಪಿಸಿದ ನೀಡಿದ್ದು, ತುರ್ತು ಮೇರೆಗೆ ನಡಿಪಟ್ಟ ಕಡಲಕೊರೆತ ಪ್ರದೇಶಕ್ಕೆ ಬೇಟಿ ಸಂರಕ್ಷಣಾ ಕಾಮಗಾರಿಗೆ 1 ಕೋಟಿ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿರುತ್ತಾರೆ. ಸೊರಕೆ ಇವರು ಮೇಲ್ನೋಟದಲ್ಲಿ ಅಭಿವೃದ್ಧಿಯ ಕಡೆಗೆ ಶ್ರಮಿಸುತ್ತೇನೆಂದು ಸಾರ್ವಜನಿಕರಲ್ಲಿ ಬಿಂಬಿಸುತ್ತಾರೆ ಹೊರತು ಉದ್ದೇಶ ಪೂರ್ವಕವಾಗಿ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಒಂದು ವ್ಯವಸ್ಥಿತ ಷಡ್ಯಂತರವಾಗಿರುತ್ತದೆ. ತೀರಾ ಕಡಲಕೊರತ

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ಶಾಸಕರ ಹಕ್ಕು ಭಾದ್ಯತೆಗಳಿಗೆ ತಡೆಯೊಡ್ಡಿ, ತಮ್ಮ ಸರಕಾರವಿದೆಯೆಂದು ಅಧಿಕಾರಿಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವ ಬೀರಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ತೊಂದರೆ ಉಂಟು ಮಾಡಿರುತ್ತಾರೆ. ಅಲ್ಲದೇ ಸರಕಾರಿ ನೌಕರರ ಹಾಗೂ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯಲ್ಲಿ ತನ್ನ ಶಿಫಾರಸ್ಸು ಪತ್ರವನ್ನು ಶಾಸಕನಾದ ನನ್ನ ಹಕ್ಕು ಭಾದ್ಯತೆಗೆ ವ್ಯತಿರಿಕ್ತವಾಗಿ ವರ್ಗಾವಣೆ ದಂಧೆಯನ್ನು ನಡೆಸಿರುತ್ತಾರೆ.

ಕಾಪು ಕ್ಷೇತ್ರದ ಜನಪ್ರತಿನಿಧಿಯಾಗಿ ರಸ್ತೆಗಳ ಅಭಿವೃದ್ಧಿ, ಕಡಲೊರೆತ ಭಾಧಿತ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ರಚನೆ, ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ, ನದಿದಂಡೆ ಸಂರಕ್ಷಣೆ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಲೊಕೋಪಯೋಗಿ ರಸ್ತೆಗಳ ಕಾಲನಿಗಳಿಗೆ ಮತ್ತು ಪ.ಪಂಗಡಗಳ ಅಭಿವೃದ್ಧಿ, ಪ.ಜಾತಿ ಮೂಲಭೂತ ಸೌಕರ್ಯ ಮುಂತಾದವುಗಳ ಬಗ್ಗೆ ಸಂಬಂಧಪಟ್ಟ ಇಲಾಖಾ ಸಚಿವರಲ್ಲಿ ಖುದ್ದು, ಭೇಟಿಯಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಉದ್ದೇಶ ಪೂರ್ವಕವಾಗಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮಂಜೂರು ಮಾಡದೇ ಇದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಬಾರದೆಂದು ಕಾಂಗ್ರೆಸ್ ನ ಸೋತ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆ ಅವರ ತಡೆ ಒಡ್ಡುತ್ತಿದ್ದಾರೆ.

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿನಯ ಕುಮಾರ್ ಸೊರಕೆ ಇವರು ಪೂರ್ಣಗೊಳಿಸಿದ ಕಡಲೊರೆತ ಭಾಧಿತ ಪ್ರದೇಶಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಹಣ ಮಂಜೂರು ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಸುಳ್ಳು ಭರವಸೆಯನ್ನು ನೀಡಿ ಅಲ್ಲದೇ ಗುತ್ತಿಗೆದಾರರಿಗೆ ಶಿಫಾರಸ್ಸು ಪತ್ರವನ್ನು ನೀಡಿ ರಾಜ್ಯದಲ್ಲಿ ತಮ್ಮದೇ ಸರಕಾರವಿದ್ದರೂ ಇಲ್ಲಿಯವರೆಗೆ ಕಡಲೊರೆತ ತಡೆಗೋಡೆಗೆ ಹಣ ಮಂಜೂರು ಮಾಡಿರುವುದಿಲ್ಲ. ಅಲ್ಲದೇ ಹಿಂದಿನ ಸರ್ಕಾರದ ಕಡಲಕೊರೆತ ತಡೆ ಸಂರಕ್ಷಣೆಗೆ ಕಾಮಗಾರಿಯ ಅವಧಿಯಲ್ಲಿ ಗುತ್ತಿಗೆದಾರಿಗೆ ಸರಕಾರ ಅನುದಾನ ಬಿಡುಗಡೆ ಮಾಡಿರುವದೇ ಹೊರತು ಇದರಲ್ಲಿ ನನ್ನ ವ್ಯವಹಾರದ ಉದ್ದೇಶವಿರುವುದಿಲ್ಲ ಎಂಬವುದು ಸೊರಕೆಯವರ ಗಮನಕ್ಕೆ ಬಾರದಿರುವುದು ವಿಷಾದನೀಯ. ಇತ್ತೀಚೆಗೆ ನಡಿಪಟ್ಟದಲ್ಲಿ ಕಡಲಕೊರೆತ ತೀವ್ರವಾಗಿದ್ದು ಈ ಬಗ್ಗೆ ಮೀನುಗಾರಿಕಾ ಸಚಿವರಾದ ಶ್ರೀ, ಮಾಂಕಾಳ್ ವೈದ್ಯರಲ್ಲಿ ಖುದ್ದು ಭೇಟಿ ಮಾಡಿ ಪ್ರಸ್ತಾಪಿಸಿದ ನೀಡಿದ್ದು, ತುರ್ತು ಮೇರೆಗೆ ನಡಿಪಟ್ಟ ಕಡಲಕೊರೆತ ಪ್ರದೇಶಕ್ಕೆ ಬೇಟಿ ಸಂರಕ್ಷಣಾ ಕಾಮಗಾರಿಗೆ 1 ಕೋಟಿ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿರುತ್ತಾರೆ. ಸೊರಕೆ ಇವರು ಮೇಲ್ನೋಟದಲ್ಲಿ ಅಭಿವೃದ್ಧಿಯ ಕಡೆಗೆ ಶ್ರಮಿಸುತ್ತೇನೆಂದು ಸಾರ್ವಜನಿಕರಲ್ಲಿ ಬಿಂಬಿಸುತ್ತಾರೆ ಹೊರತು ಉದ್ದೇಶ ಪೂರ್ವಕವಾಗಿ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಒಂದು ವ್ಯವಸ್ಥಿತ ಷಡ್ಯಂತರವಾಗಿರುತ್ತದೆ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ಶಾಸಕರ ಹಕ್ಕು ಭಾದ್ಯತೆಗಳಿಗೆ ತಡೆಯೊಡ್ಡಿ, ತಮ್ಮ ಸರಕಾರವಿದೆಯೆಂದು ಅಧಿಕಾರಿಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವ ಬೀರಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ತೊಂದರೆ ಉಂಟು ಮಾಡಿರುತ್ತಾರೆ. ಅಲ್ಲದೇ ಸರಕಾರಿ ನೌಕರರ ಹಾಗೂ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯಲ್ಲಿ ತನ್ನ ಶಿಫಾರಸ್ಸು ಪತ್ರವನ್ನು ಶಾಸಕನಾದ ನನ್ನ ಹಕ್ಕು ಭಾದ್ಯತೆಗೆ ವ್ಯತಿರಿಕ್ತವಾಗಿ ವರ್ಗಾವಣೆ ದಂಧೆಯನ್ನು ನಡೆಸಿರುತ್ತಾರೆ.

ಕಾಪು ಕ್ಷೇತ್ರದ ಜನಪ್ರತಿನಿಧಿಯಾಗಿ ರಸ್ತೆಗಳ ಅಭಿವೃದ್ಧಿ, ಕಡಲೊರೆತ ಭಾಧಿತ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ರಚನೆ, ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ, ನದಿದಂಡೆ ಸಂರಕ್ಷಣೆ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಲೊಕೋಪಯೋಗಿ ರಸ್ತೆಗಳ ಕಾಲನಿಗಳಿಗೆ ಮತ್ತು ಪ.ಪಂಗಡಗಳ ಅಭಿವೃದ್ಧಿ, ಪ.ಜಾತಿ ಮೂಲಭೂತ ಸೌಕರ್ಯ ಮುಂತಾದವುಗಳ ಬಗ್ಗೆ ಸಂಬಂಧಪಟ್ಟ ಇಲಾಖಾ ಸಚಿವರಲ್ಲಿ ಖುದ್ದು, ಭೇಟಿಯಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಉದ್ದೇಶ ಪೂರ್ವಕವಾಗಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮಂಜೂರು ಮಾಡದೇ ಇದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಬಾರದೆಂದು ಕಾಂಗ್ರೆಸ್ ನ ಸೋತ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆ ಅವರ ತಡೆ ಒಡ್ಡುತ್ತಿದ್ದಾರೆ.
ಕೆಲವೊಂದು ಅಭಿವೃದ್ಧಿ ಕಾಮಗಾರಿಗಳಿ ಹಿಂದಿನ ಬಾರಿ ಅನುದಾನ ಮಂಜೂರಾಗಿದ್ದರೂ ಪ್ರಸ್ತುತ ಬಿ.ಜೆ.ಪಿ ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸುವ ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಅನುದಾನವನ್ನು ಬಜೆಟ್ ಕೊರತೆಯ ನೆಪವೊಡ್ಡಿ ತಡೆಹಿಡಿದಿರುವುದು ಅಭಿವೃದ್ಧಿಯ ಕೆಲಸಕ್ಕೆ ಹಿನ್ನಡೆ ಉಂಟಾಗಿರುತ್ತದೆ.

ಸೊರಕ ಇವರು ಅಭಿವೃದ್ಧಿಯ ವಿಚಾರದಲ್ಲಿ ಇಚ್ಛಾಶಕ್ತಿಯ ಕೊರತೆ ಇರುವ ಬಗ್ಗೆ ಆಪಾದನೆ ಮಾಡಿರುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು ಬಿ,ಜೆ.ಪಿ ಶಾಸಕರು ಇರುವ ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಅಭಿವೃದ್ಧಿ ಚಟುವಟಿಕೆಗೆ ಅನುದಾನ ಬಿಡುಗಡೆ ಮಾಡದೇ ಇರುವುದು ವಿಷಾದನೀಯ ಸಂಗತಿ, ಹಿಂದಿನ ವರುಷದಲ್ಲಿ ಬಾರತ ಸರಕಾರದ ಕೇಲೋ ಇಂಡಿಯಾ ಯೋಜನೆಯಡಿಯಲ್ಲಿ ನನ್ನ ವಿಶೇಷ ಪ್ರಯತ್ನದಿಂದಾಗಿ ಕಾಮು ತಾಲೂಕು ಕ್ರೀಡಾಂಗಣದಲ್ಲಿ ಸಮಗ್ರ ಕ್ರೀಡಾ ಚಟುವಟಿಕೆಗಳಾದ ಪುಟ್ ಬಾಲ್ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ಹಾಲ್, ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಬಗ್ಗೆ ರೂ.25.20 ಕೋಟಿ ಮಂಜೂರಾಗಿರುತ್ತದೆ. ಅಲ್ಲದೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಕ್ಷೇತ್ರದಲ್ಲಿ ತರುವ ಸದಾ ಪ್ರಯತ್ನದಲ್ಲಿರುವುದು ನನ್ನ ಶಕ್ತಿಯಿಂದಲೇ ಎನ್ನುವುದು ಸೊರಕೆಯವರು ಅರಿಯುವಂತಾಗಲೀ. ಅಲ್ಲದೆ ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ನಿವೇಶನವನ್ನು ಗುರುತಿಸಿ ಹಂಚಿಕೆ ಮಾಡುವ ಹಾಗೂ ಸಂಬಂದಿಸಿದ ಜಿಲ್ಲಾಧಿಕಾರಿಯವರಿಗೆ ತಾಲೂಕು ವ್ಯಾಪ್ತಿಯ ತಹಶೀಲ್ದರಾರಿಗೆ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸೂಚಿಸಿದ್ದು, ಅಲ್ಲದೆ ಕಂದಾಯ ಈ ಬಗ್ಗೆ ನಿವೇದಿಸಿಕೊಂಡಿದ್ದು ಕಂದಾಯ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸರ್ವೆ ಕಾರ್ಯ ಪ್ರಗತಿಯಲ್ಲಿರುವುದಾಗಿ ತಿಳಿಸಿರುದರಿಂದ ನಿವೇಶನ ಹಂಚಿಕೆ ವಿಳಂಬಕ್ಕೆ ಸರ್ಕಾರವೇ ನೇರ ಹೊಣೆಯಾಗಿರುತ್ತದೆ.

ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳಿಗೆ ಬಿ.ಜೆ.ಪಿ ಸರಕಾರ ಇದ್ದ ಸಂದರ್ಭದಲ್ಲಿ ಎ.ಬಿ.ಸಿ ಕೆಟಗರಿ ವಾರು ತಲಾ 5 ಲಕ್ಷ, 3 ಲಕ್ಷ 0.50 ಲಕ್ಷದಂತೆ ಅನುದಾನ ನೀಡುತ್ತಿದ್ದು, ಪ್ರಸ್ತುತ ತಡೆಹಿಡಿದು, ಸಂಪೂರ್ಣ ಹಾನಿಯಾದ ಮನೆಗಳಿಗೆ ಕೇವಲ 1.20 ಲಕ್ಷ ಭಾಗಶಃ ಹಾನಿಯಾದ ಮನೆಗಳಿಗೆ 6,500 ದಂತೆ ನೀಡುತ್ತಿದ್ದು, ಇದರಿಂದ ನೊಂದ ಕುಟುಂಬಗಳ ಸಮಸ್ಯೆ ಸೊರಕೆಯವರ ಗಮನಕ್ಕೆ ಬಂದಿಲ್ಲವೇ..?

ಮತ ಪಡೆಯಲು ಇದು ನನ್ನ ಕೊನೆಯ ಚುನಾವಣೆ ಎಂದು ಪ್ರತಿ ಬಾರಿ ಹೇಳುತ್ತಾ ಜನರನ್ನು ಭಾವನಾತ್ಮಕವಾಗಿ ವಂಚಿಸುತ್ತಾ ವಿಫಲ ಪ್ರಯತ್ನ ಮಾಡಿ ಇನ್ನೂ ರಾಜಕೀಯದಲ್ಲಿ ಇರುವುದು ಸೊರಕೆಯವರ ಸುಳ್ಳಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮಾಜಿ ಶಾಸಕ ಲಾಲಾಜಿ‌ ಆರ್. ಮೆಂಡನ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಪಕ್ಷದ ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಸುವರ್ಣ, ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು, ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

13 hours ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

14 hours ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

14 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…

15 hours ago

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

16 hours ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

16 hours ago