Featured

ನಾನು ಸಾಯುವಾಗ ಬಿಜೆಪಿಯ ಬಾವುಟ ನನ್ನ ಮೇಲೆ ಬೀಳಬೇಕು : ರಘುಪತಿ ಭಟ್ – Vishwanews24

ನನ್ನ ಜೊತೆ ಜನ ಇದ್ದಾರೆ ಎಂದ ತಕ್ಷಣ ನಾನು ಪಕ್ಷೇತರನಾಗಿ ನಿಲ್ಲುವುದಿಲ್ಲ : ರಘುಪತಿ ಭಟ್

ಉಡುಪಿ: ಸತ್ತು ಮಲಗಿದ ನನ್ನ ಮೇಲೆ ಬಿಜೆಪಿಯ ಬಾವುಟ ಇರಬೇಕು ಎಂದು ಶಾಸಕ ರಘುಪತಿ ಭಟ್   ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿಯ ಪಕ್ಷಕ್ಕೆ ನಾನು ದೇವರಾಣೆಗೂ ಹೋಗುವುದಿಲ್ಲ. ನನ್ನ ಜೊತೆ ಜನ ಇದ್ದಾರೆ ಎಂದ ತಕ್ಷಣ ನಾನು ಪಕ್ಷೇತರನಾಗಿ ನಿಲ್ಲುವುದಿಲ್ಲ. ಬೇರೆ ಬೇರೆ ಪಕ್ಷಗಳಿಂದ ಕರೆ ಬಂದಿದೆ, ಆದರೆ ನಾನು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ರಘುಪತಿ ಭಟ್ರು ಬಿಜೆಪಿ. ನಾನು ಸಾಯುವಾಗ ಬಿಜೆಪಿಯ ಬಾವುಟ ನನ್ನ ಮೇಲೆ ಬೀಳಬೇಕು. ನಾನು ಪಕ್ಷೇತರ ನಿಲ್ಲುತ್ತೇನೆ, ನಿಲ್ಲುವುದಿಲ್ಲ ಎಂದು ಹೇಳಲು ನಾನಿನ್ನು ನಿರ್ಧಾರವೇ ಮಾಡಿಲ್ಲ. ನಾನು ಇನ್ನು ಶಾಕ್‌ನಿಂದ ಹೊರಗೆ ಬಂದಿಲ್ಲ ಎಂದು ಹೇಳಿದರು.

ಯಾವುದೇ ನಿರ್ಧಾರವಾದರೂ ನಾನೇ ಮಾಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯವನ್ನು ಮಾತ್ರ ಪಡೆಯುತ್ತೇನೆ. ನಾನು ಸಭೆ ಸೇರಿಸುತ್ತೇನೆ. ಪಕ್ಷೇತರ ನಿಲ್ಲುತ್ತೇನೆ ಎಂದು ಹೇಳಿಲ್ಲ ಹೇಳುವುದು ಇಲ್ಲ. ನನ್ನ ನಿರ್ಧಾರವನ್ನು ನಾನೇ ಮಾಡುತ್ತೇನೆ. ನಾನು ರಾಜಕೀಯದಿಂದ ದೂರ ಹೋಗುವ ವ್ಯಕ್ತಿಯ ಅಲ್ಲ. ಕಾರ್ಯಕರ್ತರ ಎಲ್ಲ ಕಷ್ಟಗಳಿಗೆ ಜೊತೆಯಾಗಿ ನಿಲ್ಲುತ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಪಕ್ಷದ ಹಿರಿಯ ಮುಖಂಡರ ಬಗ್ಗೆ ನನಗೆ ಅತೀವವಾದ ಗೌರವವಿದೆ. 15 ವರ್ಷ ಶಾಸಕನಾಗಿದ್ದು ನಾನು ಬೇಡದವನಾಗಿ ಹೋದ್ನಾ?. ನಾನು ಟಿವಿಯಲ್ಲಿ ವಿಚಾರವನ್ನು ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಬಂತು. ಒಂದು ಫೋನ್ ಕರೆ ಮಾಡಿ ಈ ಕಾರಣಕ್ಕೋಸ್ಕರ ನಿನಗೆ ಟಿಕೆಟ್ ಇಲ್ಲ ಎಂದು ಯಾರೂ ಹೇಳಿಲ್ಲ. ಮುನ್ಸೂಚನೆ ಕೊಟ್ಟಿದ್ರೆ ಈಶ್ವರಪ್ಪ ರೀತಿಯಲ್ಲಿ ರಾಜೀನಾಮೆ ನೀಡುತ್ತಿದ್ದೆ. ನಾನು ವಿಮರ್ಷೆ ಮಾಡಲ್ಲ, ನಿರ್ಧಾರ ಮಾಡಿದವರು ನನಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

Vishwa News 24

Recent Posts

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ -vishwanews24

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…

11 hours ago

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…

19 hours ago

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ – vishwanews24

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…

19 hours ago

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ – vishwanews24

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…

19 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…

19 hours ago

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ – vishwanews24

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ:  ದಕ್ಷಿಣ ಕನ್ನಡ (ದ.ಕ)…

20 hours ago