ಮೈಸೂರು: ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ನಾನೇ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಧಿಕಾರ ಹಂಚಿಕೆ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಿಮಗೆ ಯಾಕೆ ಅನುಮಾನ? ಯಾಕೆ ಮತ್ತೆ ಮತ್ತೆ ಅದನ್ನ ಕೇಳುತ್ತೀರಾ? ಹೈಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ಯಾ? ನಾಯಕತ್ವ ಬದಲಾವಣೆ ಸಂಪುಟ ಪುನಾರಚನೆ ಎಲ್ಲದನ್ನ ತೀರ್ಮಾನ ಮಾಡುವುದು ಹೈಕಮಾಂಡ್. ಈ ಬಗ್ಗೆ ಹೈಕಮಾಂಡ್ ಇಲ್ಲಿಯವರೆಗೆ ಏನಾದರು ಮಾತನಾಡಿದ್ಯಾ? ಇಲ್ಲ ತಾನೇ, ಹಾಗಾದ್ರೆ ಮತೆ ಯಾಕೆ ಆ ಪ್ರಶ್ನೆ. ಹೈಕಮಾಂಡ್ ಹೇಳುವುದನ್ನ ನಾನು, ಶಾಸಕರು ಪಾಲಿಸಬೇಕು” ಎಂದರು.
“ದೆಹಲಿಗೆ ಹೋಗಿರುವ ಚೆಲುವರಾಯಸ್ವಾಮಿ ಜೊತೆ ನಾನೇ ಮಾತಾಡಿದ್ದೇನೆ. ಇಲಾಖೆ ಕೆಲಸದ ಹಿನ್ನೆಲೆಯಲ್ಲಿ ಹೋಗಿದ್ದೇನೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ. ಶಾಸಕರು, ಸಚಿವರು ದೆಹಲಿಗೆ ಹೋಗಬಾರದಾ? ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮತ್ತೆ ನಾನು ಯಾಕೆ ಈ ಬಗ್ಗೆ ವಿವರಣೆ ಕೊಡಲಿ. ನಾಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡ್ತೀನಿ” ಎಂದು ಹೇಳಿದರು.
ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…
ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು…
ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ - 2026 ಕಟಪಾಡಿಯ SVS ಕ್ರೀಡಾಂಗಣದಲ್ಲಿ ಮೇ 22 ರಿಂದ…
ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ ಕೊಳ್ನಾಡು: ಪಂಜರಕೋಡಿ ಎಂಬಲ್ಲಿ ಪಿಕಪ್…
ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಎ ಸುವರ್ಣ ಉಡುಪಿ:…
ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ ಉಡುಪಿ : ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯು ಉಡುಪಿ ಸ್ವಾಗತ…