ಮಂಗಳೂರು: ನಾಳೆ ಕಾರ್ಮಿಕ ಸಂಘಟನೆಗಳ ಭಾರತ್ ಬಂದ್ ಕರೆ ನೀಡಿದೆ.. ಆದ್ರೆ ದ.ಕ ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರ ಯಥಾಸ್ಥಿತಿ ಇರಲಿದೆ ಎಂದು ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವಾ ತಿಳಿಸಿದ್ದಾರೆ. ನಾಳೆ ಎಂದಿನಂತೆ ಖಾಸಗಿ ಬಸ್ಸುಗಳು ಸಂಚಾರ ನಡೆಸಲಿದ್ದು, ಖಾಸಗಿ ಬಸ್ಸು ಮಾಲಕರಿಂದ ಈ ಬಂದ್ ಗೆ ಯಾವುದೇ ಬೆಂಬಲ ಇರುವುದಿಲ್ಲ.
ಹಾಗೆಯೇ ನಾಳೆ ಜಿಲ್ಲೆಯಾದ್ಯಂತ ಕೆಎಸ್ ಆರ್ ಟಿಸಿ ಬಸ್ ಸಂಚಾರವೂ ಯಥಾಸ್ಥಿತಿ ಇರಲಿದೆ. ಉಳಿದಂತೆ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕ-ಮಾಲಕರಿಂದಲೂ ಬೆಂಬಲವಿಲ್ಲ. ಕೇವಲ ಕೆಲ ಎಡಪಂಥೀಯ ಸಂಘಟನೆಗಳಿಂದ ಬಂದ್ ಗೆ ಬೆಂಬಲ ದೊರತಿದೆ.
ಹಾಗಾಗಿ ನಾಳೆ ಮಂಗಳೂರು ಪುರಭವನದ ಮುಂಭಾಗ 8.30ಕ್ಕೆ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ. ಉಳಿದಂತೆ ಶಾಲಾ-ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸಲಿದೆ.