Featured

ನಾಳೆ ರಿಲೀಸ್​ ಆಗಲಿದೆ ಕೋಟಿಗೊಬ್ಬ 3 ಸಿನಿಮಾ : ಕ್ಷಮೆ ಯಾಚಿಸಿದ ಕಿಚ್ಚ ಸುದೀಪ್ – Vishwanews24

ನಾಳೆ ರಿಲೀಸ್​ ಆಗಲಿದೆ ಕೋಟಿಗೊಬ್ಬ 3 ಸಿನಿಮಾ : ಕ್ಷಮೆ ಯಾಚಿಸಿದ ಕಿಚ್ಚ ಸುದೀಪ್ – Vishwanews24

ತಾಂತ್ರಿಕ ಸಮಸ್ಯೆಯಿಂದಾಗಿ ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಇಂದು ತೆರೆ ಕಾಣಲಿಲ್ಲ. ಆಯುಧಪೂಜೆ ಪ್ರಯುಕ್ತ ಬೆಳ್ಳಿತೆರೆಗೆ ಗ್ರ್ಯಾಂಡ್​ ಎಂಟ್ರಿ ಕೊಡಲು ತಯಾರಿ ನಡೆಸಿಕೊಂಡಿದ್ದ ಕೋಟಿಗೊಬ್ಬ 3 ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಎಲ್ಲ ಸರಿಯಾಗಿ ಇದ್ದಿದ್ದರೆ ಇಂದು ಬೆಳಗಿನಿಂದ ಸುದೀಪ್​ ಅಭಿಮಾನಿಗಳು ಸಂಭ್ರಮದಿಂದ ಚಿತ್ರಮಂದಿರಗಳಲ್ಲಿ ಹಬ್ಬ ಆಚರಿಸಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಸಿನಿಮಾ ಇವತ್ತು ರಿಲೀಸ್ ಆಗಿಲ್ಲ. ಇನ್ನು ಬೆಳಗಿನಿಂದ ಚಿತ್ರಮಂದಿರಗಳ ಬಳಿ ಬಂದು ಸಿನಿಮಾ ನೋಡಲು ಕಾಯುತ್ತಿರುವ ಸಿನಿಪ್ರಿಯರು ಬೇಸದಿಂದ ಮನೆಯತ್ತ ಮರಳುತ್ತಿದ್ದಾರೆ.

ಕಾರಣಾಂತರದಿಂದಾಗಿ ‘ಕೋಟಿಗೊಬ್ಬ 3’ ಚಿತ್ರ ರಿಲೀಸ್​ ಆಗದೇ ಇರುವುದಕ್ಕೆ ನಟ ಕಿಚ್ಚ ಸುದೀಪ್​ ಕ್ಷಮೆ ಯಾಚಿಸಿದ್ದಾರೆ. ಟ್ವೀಟ್​ ಮಾಡುವ ಮೂಲಕ ಆಗಿರುವ ಸಮಸ್ಯೆಗೆ ಕ್ಷಮಿಸಿ ಎಂದು ಮನವಿ ಮಾಡಿದ್ದಾರೆ.

‘ಚಿತ್ರಮಂದಿರಗಳ ಬಳಿ ಕಾಯುತ್ತಿರುವ ಎಲ್ಲ ಸ್ನೇಹಿತರಿಗೆ ಈ ಬಗ್ಗೆ ತಿಳಿಸುವ ಜವಾಬ್ದಾರಿ ನನ್ನದು. ಕಾರಣಾಂತರಗಳಿಂದಾಗಿ ಸಿನಿಮಾ ಪ್ರದರ್ಶನದಲ್ಲಿ ವ್ಯತ್ಯಯವಾಗಿದೆ. ಇದಕ್ಕೂ ಚಿತ್ರಮಂದಿರದವರಿಗೂ ಯಾವುದೇ ಸಂಬಂಧವಿಲ್ಲ. ಅವರ ಬಳಿ ಕೆಟ್ಟದಾಗಿ ಅಥವಾ ಸಿಟ್ಟಿನಿಂದ ನಡೆದುಕೊಳ್ಳಬೇಡಿ’ ಎಂದು ಸುದೀಪ್ ಮನವಿ ಮಾಡಿದ್ದಾರೆ.

‘ನನಗೂ ಸಿನಿಮಾವನ್ನು ರಿಲೀಸ್ ಮಾಡಲು ಕಾತರನಾಗಿದ್ದೇನೆ. ಇಷ್ಟು ದೊಡ್ಡ ಗ್ಯಾಪ್​ ನಂತರ ಚಿತ್ರವನ್ನು ತೆರೆಗೆ ತರುವ ಸಂಭ್ರಮದಲ್ಲಿದ್ದೇವೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಕೊಂಚ ತಾಳ್ಮೆ ಇರಲಿ. ದಯವಿಟ್ಟು ಚಿತ್ರಮಂದಿರ ಹಾಗೂ ಬಂದಿರುವ ಪ್ರೇಕ್ಷಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ. ಸಿನಿಮಾ ರಿಲೀಸ್ ಹಾಗೂ ಪ್ರದರ್ಶನದ ಸಮಯ ಕುರಿತಂತೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ’ ಎಂದು ಟ್ವೀಟ್​ ಮಾಡಿದ್ದಾರೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago