ಇಸ್ಲಾಮಾಬಾದ್: ಕಾಶ್ಮೀರಿಗಳ ಪರವಾಗಿ ನಿಲ್ಲುವವರು ಜಿಹಾದ್ (ಪವಿತ್ರ ಯುದ್ಧ)ನಲ್ಲಿ ತೊಡಗಿರುವವರು. ಇಡೀ ವಿಶ್ವವೇ ಬೆಂಬಲ ನೀಡದಿದ್ದರೂ ಕೂಡ ಪಾಕಿಸ್ತಾನ ಮಾತ್ರ ಕಾಶ್ಮೀರಿಗಳ ಪರವಾಗಿ ನಿಲ್ಲುತ್ತದೆ ಎಂದು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ವಿಶ್ವಸಂಸ್ಥೆ ಪ್ರವಾಸದಿಂದ ಇಸ್ಲಾಮಾಬಾದಿಗೆ ಬಂದಿಳಿದ ಇಮ್ರಾನ್ ಖಾನ್ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಇಡೀ ವಿಶ್ವ ಕಾಶ್ಮೀರಿಗಳ ಪರವಾಗಿ ನಿಲ್ಲುತ್ತದೊ, ಬಿಡುತ್ತದೊ ಆದರೆ ನಾವು ಮಾತ್ರ ಅವರ ಪರವಾಗಿ ನಿಲ್ಲೋಣ ಎಂದರು.
ಕಾಶ್ಮೀರಿಗಳ ಪರವಾಗಿ ನಿಲ್ಲುವುದು ಜಿಹಾದ್ ಆಗಿದೆ. ಅಲ್ಹಾ ದೇವರಿಗೆ ಖುಷಿಯಾಗಬೇಕು ಹೀಗಾಗಿ ನಾವು ಕಾಶ್ಮೀರ ಜನತೆಯ ಪರವಾಗಿಯೇ ನಿಲ್ಲೋಣ ಎಂದರು. ಇದು ಹೋರಾಟವಾಗಿದ್ದು ಸಮಯ ಸರಿಯಿಲ್ಲದಿರುವ ಈ ಸಂದರ್ಭದಲ್ಲಿ ಆಶಾವಾದ ಕಳೆದುಕೊಳ್ಳಬೇಡಿ. ನಾವು ಅವರ ಜತೆಗಿದ್ದೇವೆ ಎಂದು ಕಾಶ್ಮೀರಿಗಳು ಬಯಸುತ್ತಿದ್ದಾರೆ, ಹೀಗಾಗಿ ನಾವು ನಿರಾಶೆಯಾಗುವುದು ಮತ್ತು ಅವರನ್ನು ನಿರಾಶೆಪಡಿಸುವುದು ಬೇಡ, ನಾವು ಕಾಶ್ಮೀರ ಜನತೆಯ ಪರವಾಗಿದ್ದರೆ ಅವರು ಈ ಹೋರಾಟದಲ್ಲಿ ಖಂಡಿತ ಗೆಲ್ಲುತ್ತಾರೆ ಎಂದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…