Featured

ನಾವು ಬೆಂಕಿ ಇದ್ದಂತೆ, ನಮ್ಮನ್ನ ಕೆಣಕ್ಕಿದ್ರೆ ನೀವು ಸುಟ್ಟು ಹೋಗ್ತೀರಿ : ಬಿಜೆಪಿಗೆ ಖರ್ಗೆ ಎಚ್ಚರಿಕೆ  – vishwanews24

ಕಾಂಗ್ರೆಸ್‌ ಯಾವತ್ತಿಗೂ ಬಡವರ ಪರ ಇರುತ್ತದೆ..

ಸಂವಿಧಾನವನ್ನ ಮುಗಿಸೋರು ಬಿಜೆಪಿಯವರಾದ್ರೆ ಕಾಪಾಡುವವರು  ಎಂದಿಗೂ ಕಾಂಗ್ರೆಸ್‌ನವರು

ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಹೋರಾಡುವ ಶಕ್ತಿ ಇರುವ ಹೆಣ್ಣು ಪ್ರಿಯಾಂಕಾ ಗಾಂಧಿ..

ಮೋದಿ ಪೂಜೆ ಮಾಡೋದು ಗಾಂಧಿಗೆ ಗುಂಡು ಹಾರಿಸಿದ ಗೋಡ್ಸೆಯನ್ನೇ : ಖರ್ಗೆ ತೀವ್ರ ವಾಗ್ದಾಳಿ

ಬೆಳಗಾವಿ: ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಹೋರಾಡುವ ಶಕ್ತಿ ಇರುವ ಹೆಣ್ಣು ಪ್ರಿಯಾಂಕಾ ಗಾಂಧಿ. ಅವರು ನೋಡಲು ಮೆತ್ತಗೆ ಕಾಣಬಹುದು, ಸ್ವಲ್ಪ ಮುಟ್ಟಿ ನೋಡಿದ್ರೆ ಗೊತ್ತಾಗುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಅವರು ಕಾಂಗ್ರೆಸ್‌ ಸಂಸದೆಯ ಗುಣಗಾನ ಮಾಡಿದರು.

1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಬೆಳಗಾವಿ ಸಾಕ್ಷಿಯಾಗಿತ್ತು. ಈಗ ಅಧಿವೇಶನದ ಶತಮಾನೋತ್ಸವದ ಭಾಗವಾಗಿ ಸಮಾವೇಶ ನಡೆಯುತ್ತಿದ್ದು, ಇದರ ವೇದಿಕೆ ಕಾರ್ಯಕ್ರಮದಲ್ಲಿ ಖರ್ಗೆ ಅವರು ಮಾತನಾಡಿದರು.

ಬಿಜೆಪಿ, ಆರ್‌ಎಸ್ಎಸ್ ವಿರುದ್ಧ ಹೋರಾಡುವ ಶಕ್ತಿ ಇರುವ ಹೆಣ್ಣು ಪ್ರಿಯಾಂಕಾ ಗಾಂಧಿ  ಅವರು ನೋಡಲು ಮೆತ್ತಗೆ ಕಾಣಬಹುದು, ಸ್ವಲ್ಪ ಮುಟ್ಟಿನೋಡಿದ್ರೆ ಗೊತ್ತಾಗುತ್ತೆ. ತಂದೆ ಕಳೆದುಕೊಂಡು ಬೆಳೆದು ಬಂದವರು ಪ್ರಿಯಾಂಕಾ, ಎಂದಿಗೂ ತಮ್ಮ ಕೊರತೆ ತೋರಿಸಲಿಲ್ಲ. ಆದ್ರೆ ಮೋದಿ ಅಮಿತ್‌ ಶಾ ಅವರ ಚಮಚಾಗಳು ಪ್ರಿಯಾಂಕಾಗೆ ಬೈತಾರೆ. ಹಾಗೆ ಮಾತನಾಡೋದಕ್ಕೆ ಮುಂಚೆ, ನಾವು ಮಾಡಿದ್ದನ್ನು ಅವರು ಮಾಡಿತೋರಿಸಲಿ ಎಂದು ಸವಾಲು ಹಾಕಿದರು.

ಹೊಸ ವರ್ಷದ ʻಜೈ ಬಾಪು, ಜೈ ಭೀಮ್, ಜೈ ಸಂವಿಧಾನʼ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯುತ್ತಿದೆ. ವಿರೋಧಿ ಬಣದವರು ಕಾಂಗ್ರೆಸ್ ವಿರುದ್ಧ ಟೀಕೆ ಮಾಡ್ತಿದ್ದಾರೆ. 2004 ರಲ್ಲಿ ಸೋನಿಯಾ ಗಾಂಧಿ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ ಅವರು ಅಧಿಕಾರ ಸ್ವೀಕರಿಸಿದೇ ಮನಮೋಹನ್ ಸಿಂಗ್‌ಗೆ ತ್ಯಾಗ ಮಾಡಿದರು. ಸೋನಿಯಾ ಗಾಂಧಿ ಅವರ ಕೃಪೆಯಿಂದ ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಈಗ ನಾವು ಅಂತಹ ತ್ಯಾಗ ಮಾಡಲು ಸಿದ್ಧರಿದ್ದೀವಾ? ಅಂತ ಪ್ರಶ್ನೆ ಮಾಡಿದರು.

ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ದೇಶಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ್ದಾರೆ. ಆದ್ರೂ ಬಿಜೆಪಿ ನಾವು ಕೊಟ್ಟ ಕಾರ್ಯಕ್ರಮಗಳನ್ನ ಟೀಕೆ ಮಾಡಿ, ನಮನ್ನ ಹೀಯಾಳಿಸಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಅಧಿಕಾರದಲ್ಲೇ ಇದ್ದರೂ ಸುಮ್ಮನೆ ಮಾತನಾಡುತ್ತಾರೆ ಹೊರತು ಯಾರಿಗೆ ಏನೂ ಮಾಡಿಲ್ಲ. ಏಕೆಂದರೆ ಈ ದೇಶದ ಬಡವರ ಬಗ್ಗೆ ಬಿಜೆಪಿ ಅವರಿಗೆ ಚಿಂತೆ ಇಲ್ಲ, ರೈತರ ಬಗ್ಗೆ ಚಿಂತೆ ಇಲ್ಲ. ಮೋದಿ ಈ ಬಗ್ಗೆ ಎಂದಿಗೂ ಗಮನ ಕೊಟ್ಟಿಲ್ಲ, ಕೋಡೋದೂ ಇಲ್ಲ. ಬಿಜೆಪಿ, ಆರ್‌ಎಸ್‌ಎಸ್‌, ಹಿಂದೂಮಹಾಸಭಾ ಯಾವಾಗಲೂ ದಲಿತ ವಿರೋಧಿಗಳು. ಆದ್ರೆ ಕಾಂಗ್ರೆಸ್‌ ಯಾವತ್ತಿಗೂ ಬಡವರ ಪರ ಇರುತ್ತದೆ ಎಂದು ನುಡಿದರು.

ಮಹಾತ್ಮ ಗಾಂಧೀಜಿಗೆ ಗುಂಡು ಹಾರಿಸಿ ಕೊಂದದ್ದು ಯಾರು? ಆ ಗೋಡ್ಸೆ ಸಾರ್ವಕರ್‌ ಶಿಷ್ಯ. ಗಾಂಧಿ ಗುಜರಾತ್‌ನವರೇ ಆದರೂ ಮೋದಿಗೆ ಗೌರವ ಇಲ್ಲ. ಏಕೆಂದರೆ ಮೋದಿ ಪೂಜೆ ಮಾಡೋದು ಗಾಂಧಿಗೆ ಗುಂಡು ಹಾರಿಸಿದ ಗೋಡ್ಸೆಯನ್ನೇ ಎಂದು ಕುಟುಕಿದರು.

ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಿದ್ದು ಕಾಂಗ್ರೆಸ್, ಆದ್ರೆ ಸಂವಿಧಾನ ಸುಟ್ಟವರು, ಅಂಬೇಡ್ಕರ್ ಪೋಟೋ ಸುಟ್ಟವರು ಬಿಜೆಪಿಯವರು. ನಮ್ಮನ್ನ ಕೆಣಕಲು ಹೋಗಬೇಡಿ, ನಾವು ಬೆಂಕಿ ಇದ್ದಂತೆ, ನಮ್ಮನ್ನ ಕೆಣಕ್ಕಿದ್ರೆ ನೀವು ಸುಟ್ಟು ಹೋಗ್ತೀರಿ ಎಂದು ಎಚ್ಚರಿಕೆ ಕೊಟ್ಟ ಖರ್ಗೆ ಅವರು, ಈ ದೇಶದ ತಿರಂಗಾ ಆರ್‌ಎಸ್‌ಎಸ್‌ ಕಚೇರಿ ಮೇಲೆ ಇಂದಿಗೂ ಹಾರಿಸಿಲ್ಲ. ಈಗ ಸಂವಿಧಾನ ಅಂತಾರೆ. ಸಂವಿಧಾನ ಸುಟ್ಟೋರು, ಮುಗಿಸೋರು ಬಿಜೆಪಿಯವರಾದ್ರೆ, ಸಂವಿಧಾನವನ್ನ ಎಂದಿಗೂ ಕಾಪಾಡುವವರು ಕಾಂಗ್ರೆಸ್‌ನವರು ಎಂದು ಹೇಳಿದರು.

 

Vishwa News 24

Recent Posts

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

9 hours ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

10 hours ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

10 hours ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

13 hours ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

13 hours ago

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ – vishwanews24

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…

13 hours ago