The Minister of State (Independent Charge) for Micro, Small & Medium Enterprises, Shri K.H. Muniyappa interacting with the Press, in New Delhi on April 02, 2013.
ಕೋಲಾರ: ನಾವು ಯುದ್ಧದಿಂದ ಸ್ವಾತಂತ್ರ್ಯ ಪಡೆದಿಲ್ಲ, ಶಾಂತಿಯಿಂದ ಯುದ್ಧ ಗೆದ್ದಿದ್ದು, ಹೀಗಾಗಿ ನಾವು ಶಾಂತಿಯಿಂದಲೇ ಸಾಧನೆ ಮಾಡಬೇಕು ಎಂದು ಆಹಾರ ಸಚಿವ ಕೆಹೆಚ್ ಮುನಿಯಪ್ಪ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ ಪಾಕ್ ಮತ್ತು ಭಾರತದ ನಡುವೆ ಕದನ ವಿರಾಮ ಘೋಷಣೆ ಮಾಡಿರುವುದರಲ್ಲಿ ಅಮೆರಿಕಕ್ಕೆ ಮಹತ್ವ ಸ್ಥಾನವಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ದೇಶದಲ್ಲಿ ಬ್ರಿಟಿಷರು 200 ವರ್ಷ ರಾಜ್ಯಭಾರ ಮಾಡಿದರು. ಆಗ ಅವರನ್ನು ನಾವು ಯುದ್ಧದಿಂದ ಗೆದ್ದಿಲ್ಲ, ಶಾಂತಿಯಿಂದ ಗೆದಿದ್ದು, ಗಾಂಧೀಜಿಯವರು ನಾವು ಶಾಂತಿಯಿಂದ ಸಾಧನೆ ಮಾಡಬೇಕೆಂದು ಹೇಳಿದ್ದಾರೆ. ಭಯೋತ್ಪಾದಕರು ವಿನಾಕಾರಣ ನಮ್ಮ ಜನರ ಮೇಲೆ ದಾಳಿ ಮಾಡಿದ್ದಕ್ಕೆ ಸಂಘರ್ಷ ಉಂಟಾಗುತ್ತಿದೆ. ನಾವು ಪಾಕಿಸ್ತಾನ ಮೇಲೆ ಯುದ್ಧ ಮಾಡಿಲ್ಲ, ನಾಗರಿಕರ ಮೇಲೆ ದಾಳಿ ಮಾಡಿಲ್ಲ, ಆದರೆ ಭಾರತೀಯ ಸೇನೆ ಭಯೋತ್ಪಾದಕರ ಮೇಲೆ ಪ್ರಹಾರ ಮಾಡಿದ್ದಾರೆ ಎಂದರು.
ವ್ಯಾಜ್ಯ ಆಗುವಾಗ ಹಿರಿಯರೊಬ್ಬರು ಬಂದು ಯುದ್ಧ ಬೇಡವೆಂದಾಗ ಅವರಿಗೆ ಗೌರವ ಕೊಡಬೇಕು, ಭಾರತದ ಪ್ರಧಾನಿಯವರು ಅಮೆರಿಕ ದೇಶಕ್ಕೆ ಗೌರವ ಕೊಟ್ಟಿದ್ದಾರೆ. ಭಾರತ ದೇಶ ನಾಗರಿಕರನ್ನು ಕಳೆದುಕೊಂಡಿದೆ, ಕಲಹದಿಂದ, ಯುದ್ಧದಿಂದ ಸಾಧನೆ ಮಾಡಲು ಸಾಧ್ಯವಿಲ್ಲ, ನಾವೆಲ್ಲರೂ ಮಾನವರು, ಮಾನವರಾಗಿ ಬಾಳೋಣ, ಅವರವರ ಧರ್ಮ ಅವರು ಪಾಲನೆ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…
ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…
ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…
ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…
ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…