ಬೆಂಗಳೂರು: ಕರ್ನಾಟಕ ಉಪಮುಖ್ಯಮಂತ್ರಿ ಡಿಕೆಶಿ ಅವರು ನಗರದ ವಿಧಾನಸೌಧದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ಮತ್ತು ಸಿಎಂ ಸಿದ್ದರಾಮಯ್ಯರ ನಡುವೆ ಯಾವುದೇ ಗುಂಪಿನ ಉದ್ಭವ ಇಲ್ಲವೆಂದು ಪುನಃ ಒತ್ತಿ ಹೇಳಿದ್ದಾರೆ.
ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಸಂದರ್ಭದಲ್ಲಿ ಡಿಕೆಶಿ ಹನುಮಂತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾವೆಲ್ಲಾ ಬ್ರದರ್ಸ್ ಥರ ಕೆಲಸ ಮಾಡ್ತೀವಿ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ನಾವೆಲ್ಲ ಹುಟ್ಟುವಾಗ ಒಬ್ಬರೇ, ಸಾಯುವಾಗಲೂ ಒಬ್ಬರೇ. ಸಿದ್ದರಾಮಯ್ಯನೊಬ್ಬ ಗುಂಪಾಗಿರೋರು, ಡಿಕೆಶಿ ಗುಂಪು ಅಂತ ತೋರಿಸಬೇಡಿ,” ಎಂದು ಹೇಳಿದರು.
ಮುಂದುವರಿದು, ಅವರು ಕಳೆದ ನಾಯಕರು ಮಾಡಿರುವ ನಗರಾಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ, “ಹನುನಂತಯ್ಯ ವಿಧಾನಸೌಧ ಕಟ್ಟಿದ್ರು, ಎಸ್.ಎಂ ಕೃಷ್ಣ ವಿಕಾಸಸೌಧ ಕಟ್ಟಿದ್ರು, ಕೆಂಪೇಗೌಡ ಬೆಂಗಳೂರನ್ನು ನಿರ್ಮಿಸಿದ್ದಾರೆ. ಅಧಿಕಾರ ಸಿಕ್ಕಿದಾಗ ಇವರೆಲ್ಲ ಸಾಕ್ಷಿಗುಡ್ಡೆ ಬಿಟ್ ಹೋಗಿದ್ದಾರೆ. ನಾವೂ ಅದೇ ರೀತಿಯಲ್ಲಿ ಕೆಲಸ ಮಾಡಬೇಕು,” ಎಂದರು.
ಡಿಕೆಶಿ, ತಮ್ಮ ಪಕ್ಷದ 140 ಮಂದಿ ಶಾಸಕರೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. “ನಾವು ಬ್ರೇಕ್‌ಫಾಸ್ಟ್ ಮೀಟಿಂಗ್ ಆಯೋಜಿಸುತ್ತೇವೆ, ನಮ್ಮಲ್ಲಿ ಯಾವುದಕ್ಕೂ ಒತ್ತಡವಿಲ್ಲ. ಯಾವುದೇ ಗುಂಪು ಇಲ್ಲ,” ಎಂದು ಸ್ಪಷ್ಟಪಡಿಸಿದರು.
ಉಡುಪಿ : ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ…
ಚಾ.ನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ – ನಾಲ್ಕು ವರ್ಷದ ಬಾಲಕಿ ದುರ್ಮರಣ ಚಾಮರಾಜನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ಕು…
ಉಡುಪಿ : ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ: ಜೂ. 23ರಿಂದ ಜಿಲ್ಲೆಯ ಮನೆಮನೆಗೆ ತೆರಳಿ ಜನಜಾಗೃತಿ: ಕೆ.ಜಯಪ್ರಕಾಶ್ ಹೆಗ್ಡೆ ಉಡುಪಿ:…
ಆರ್ಎಸ್ಎಸ್ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…
ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…