ಮಂಗಳೂರು,: ಜನರು ಕೇಳದ, ಬಯಸದ ಸಿಎಎ ಜಾರಿಗೆ ತಂದು ಮೋದಿ ಸರ್ಕಾರ ಕ್ಕೆ ಇಲ್ಲಿನ ಜನರನ್ನು ಓಡಿಸಲು ಸಾಧ್ಯ ವಿಲ್ಲ. ಬಾಬರಿ ಮಸೀದಿ ತೀರ್ಪು ಬಂದಾಗ ನ್ಯಾಯಾಲಯ ತೀರ್ಪು ಗೆ ಗೌರವ ನೀಡಿದ್ದೇವೆ.ಆದರೆ ಮೋದಿ ಜನ ವಿರೋಧಿ ಕಾಯಿದೆ ತಂದರೆ ಅದನ್ನು ಒಪ್ಪಿಕೊಳ್ಳಲು ಯಾರು ತಯಾರಿಲ್ಲ. ಇದು ನಮ್ಮ ದೇಶಕ್ಕೆ ಮಾರಕ ಎಂದು ನ್ಯಾಯವಾದಿ ಸಾಮಾಜಿಕ ಹೋರಾಟ ಗಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.
ಅವರು ಪೌರತ್ವ ಸಂರಕ್ಷಣಾ ವೇದಿಕೆ ಮಲ್ಲೂರು ಇದರ ಆಶ್ರಯದಲ್ಲಿ ಸಿಎಎ,ಎನ್. ಆರ್. ಸಿ,ಎನ್ ಪಿಆರ್ ವಿರುದ್ಧ ಮಲ್ಲೂರು ಬದ್ರೀಯಾ ನಗರ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಡಿ.19ರಿಂದ ನಿರಂತರ ಪ್ರತಿಭಟನೆ ಕರಾಳ ಕಾಯಿದೆ ವಿರುದ್ಧ ನಡೆಯುತ್ತಿದೆ. ಹೋರಾಟ ವನ್ನು ಮುಸ್ಲಿಮರ ಹೋರಾಟ ಎಂದು ಚಿತ್ರೀಕರಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಈ ಕರಾಳ ಕಾಯಿದೆ ವಿರುದ್ಧ ಹಿಂದೂ ಗಳು ಕೂಡಾ ಎದ್ದು ನಿಂತಿದ್ದಾರೆ. ನರೇಂದ್ರ ಮೋದಿ ಅವರ ಕಾನೂನಿಗೆ ಎದೆಗುಂದಬೇಕಾಗಿಲ್ಲ.ನಾವೇ ನಿಜ ವಾದ ದೇಶಪ್ರೇಮಿಗಳು.ದೇಶ ಕಟ್ಟುವುದರಲ್ಲಿ ಮುಸ್ಲಿಮರ ಪಾತ್ರ ಬಹಳಷ್ಟಿದೆ. ಮಂಗಳೂರುನಲ್ಲಿ ನಡೆದ ಅಮಾಯಕರ ಕೊಲೆಗೆ ಸಮರ್ಪಕ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು.
ವೇದಿಕೆಯಲ್ಲಿ ಬಪ್ಪಳಿಗೆ ಮಸೀದಿ ಖತೀಬ್ ಅಹ್ಮದ್ ನಯೀಮ್ ಫೈಝಿ, ಎಸ್ಸೆಸ್ಸೆಫ್ ನ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ,ನ್ಯಾಯವಾದಿ ಬಿ.ಎ.ಮಹಮ್ಮದ್ ಹನೀಫ್, ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಡಿವೈಎಫ್ ಐ ಜಿಲ್ಲಾ ಧ್ಯಕ್ಷ ಬಿ.ಕೆ.ಇಂತಿಯಾಝ್ ,ನಿಝಾಮುದ್ದೀನ್, ಕಾಂಗ್ರೆಸ್ ಮುಖಂಡ ಪಿವಿ ಮೋಹನ್ ಉಪಸ್ಥಿತರಿದ್ದರು. ಎನ್.ಇ.ಮಹಮ್ಮದ್ ಸ್ವಾಗತಿಸಿದರು.
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…
ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…
ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…
ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…