ಕೇರಳದಲ್ಲಿ ಈಗಾಗಲೇ 12 ಮಂದಿಯನ್ನು ಬಲಿ ಪಡೆದಿರುವ ಹಾಗೂ ದೇಶಾದ್ಯಂತ ಆತಂಕಕ್ಕೆ ಕಾರಣವಾಗಿರವ ನಿಪಾಹ್ ವೈರಸ್ ಬಾವಲಿಗಳ ಮೂಲಕ ಹರಡುತ್ತಿದೆ ಎಂದು ವ್ಯಾಪಕವಾಗಿ ನಂಬಲಾಗಿತ್ತಾದರೂ ಭೋಪಾಲದ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ ಇಲ್ಲಿ ಪರೀಕ್ಷಿಸಲ್ಪಟ್ಟ 21 ಬಾವಲಿಗಳ ರಕ್ತ ಹಾಗೂ ಸೀರಂ ಮಾದರಿಗಳಲ್ಲಿ ನಿಪಾಹ್ ವೈರಸ್ ಇಲ್ಲ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ನಿಪಾಹ್ ಹೇಗೆ ಹರಡುತ್ತದೆ ಎಂಬ ವಿಚಾರ ಇನ್ನಷ್ಟು ನಿಗೂಢವಾಗಿ ಬಿಟ್ಟಿದೆ.
ಪ್ರಯೋಗಾಲಯ ವರದಿಗಳ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳು ನಿಪಾಹ್ ವೈರಸ್ ಸೋಂಕಿಗೆ ಮೊದಲು ಬಲಿಯಾದ ಕೇರಳದ ಮೊಹಮ್ಮದ್ ಸಾಬಿತ್ (26) ಎಂಬ ಯುವಕ ಎಲ್ಲೆಲ್ಲಿಗೆ ಪಯಣಿಸಿದ್ದ ಎಂಬ ಬಗ್ಗೆ ಮಾಹಿತಿ ಪಡೆಯಲು ನಿರ್ಧರಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ಹೆಲ್ಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಾಬಿತ್ ಕೆಲ ಸಮಯದ ಹಿಂದೆ ಮನೆಗೆ ಹಿಂದಿರುಗಿದ್ದಾಗ `ಹೊಟ್ಟೆಯ ಸಮಸ್ಯೆ’ ಎದುರಿಸುತ್ತಿದ್ದ ಎಂದು ಆತನ ತಾಯಿ ಹೇಳಿದ್ದರು. ಆತನ ಕುಟುಂಬದ ನಾಲ್ಕು ಮಂದಿಯೂ ಈ ವೈರಸ್ ಸೋಂಕಿಗೆ ಬಲಿಯಾಗಿದ್ದರಿಂದ ಆರೋಗ್ಯಾಧಿಕಾರಿಗಳು ಈ ವೈರಾಣುವಿನ ಮೂಲ ಹುಡುಕಲಾರಂಭಿಸಿದ್ದು ಚಂಗರೊತ್ ಗ್ರಾಮದಲ್ಲಿರುವ ಕುಟುಂಬದ ಮನೆಯ ಬಾವಿಯಲ್ಲಿ ಬಾವಲಿಗಳು ಸತ್ತು ಬಿದ್ದಿರುವುದನ್ನು ಪತ್ತೆ ಹಚ್ಚಿದ್ದರು. ಸಾಮಾನ್ಯವಾಗಿ ಪಾರಾಮೈಕ್ಸೊವಿರಿಡಾಯಿ ಕುಟುಂಬದ ಹೆನಿಪವೈರಸ್ ಜಾತಿಗೆ ಸೇರಿರುವ ಬಾವಲಿಗಳಲ್ಲಿ ಈ ಎನ್‍ಐವಿ ವೈರಸ್ ಕಂಡು ಬರುವುದರಿಂದ ಈ ಬಾವಲಿಗಳ ರಕ್ತ ಹಾಗೂ ಸೀರಂ ಮಾದರಿಗಳ ಜತೆಗೆ ಸಾಕು ಪ್ರಾಣಿಗಳಾದ ದನ, ಆಡು, ಮೊಲ, ನಾಯಿ ಹಾಗೂ ಬೆಕ್ಕುಗಳ ರಕ್ತ ಮಾದರಿಗಳನ್ನೂ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಈಗ ಯಾವುದರಲ್ಲೂ ನಿಪಾಹ್ ವೈರಸ್ ಪತ್ತೆಯಾಗಿಲ್ಲ ಎಂಬುದು ಗೊಂದಲಕ್ಕೆ ಕಾರಣವಾಗಿದೆ.
“ಇವು ಆರಂಭಿಕ ಫಲಿತಾಂಶವಷ್ಟೇ ಆಗಿರಬಹುದು, ಈ ನಿಟ್ಟಿನಲ್ಲಿ ಇನ್ನಷ್ಟು ಪರೀಕ್ಷೆಗಳು ನಡೆಯಬೇಕಿದೆ. ಹಿಂದೆ ಕೂಡ ಈ ರೋಗ ಕಾಣಿಸಿಕೊಂಡಾಗ ಅವುಗಳ ಮೂಲ ಬಾವಲಿಗಳೇ ಆಗಿದ್ದವು. ಪ್ರಾಯಶಃ ಪರೀಕ್ಷಿಸಲ್ಪಟ್ಟ ಮಾದರಿಗಳಲ್ಲಿ ಈ ವೈರಸ್ ಇಲ್ಲದೇ ಇದ್ದಿರಬಹುದು” ಎಂದು ಕೆಲ ಅಧಿಕಾರಿಗಳು ಹೇಳಿದ್ದಾರೆ.
ಅತ್ತ ಕೇರಳದ ಕೊಝಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ನಿಪಾಹ್ ಬಗ್ಗೆ ಭೀತರಾಗಿ ಹಲವು ಕುಟುಂಬಗಳು ತಮ್ಮ ಮನೆಗಳು ಹಾಗೂ ಸಾಕು ಪ್ರಾಣಿಗಳನ್ನು ತೊರೆದು ಇತರೆಡೆ ವಲಸೆ ಹೋಗುತ್ತಿವೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಎಲ್ಲಾ ಪಕ್ಷಗಳ ನಾಯಕರೂ ಕೊಝಿಕ್ಕೋಡಿನಲ್ಲಿ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದು ರಾಜ್ಯ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಹಾಗೂ ಅಬಕಾರಿ ಸಚಿವ ಟಿ ಪಿ ರಾಮಕೃಷ್ಣನ್ ಕೂಡ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ನಿಪಾಹ್ ವೈರಸ್ ಸೋಂಕಿನಿಂದ ಮೃತಪಟ್ಟವರ ಕಳೇಬರಗಳನ್ನು ವಿದ್ಯುತ್ ಚಿತಾಗಾರದಲ್ಲಿ ಸುಡಲು ನಿರಾಕರಿಸಿದ ಉದ್ಯೋಗಿಗಳನ್ನೂ ಸೇವೆಯಿಂದ ವಜಾಗೊಳಿಸಲು ಕೇರಳ ಸರಕಾರ ನಿರ್ಧರಿಸಿದೆ.
“ಪರಿಸ್ಥಿತಿ ನಿಯಂತ್ರಣದಲ್ಲಿದೆ, ಯಾವುದೇ ಭಯದ ಅಗತ್ಯವಿಲ್ಲ, ಸರಕಾರ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ” ಎಂದು ಸಚಿವೆ ಶೈಲಜಾ ಹೇಳಿದ್ದಾರೆ.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…