ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನುಷ್ಯನ ಕೈ ಆತನ ಸ್ವಭಾವದಿಂದ ಹಿಡಿದು ಸಾಕಷ್ಟು ವಿಷಯಗಳನ್ನು ಬಿಚ್ಚಿಡುತ್ತೆ.ಒಬ್ಬ ವ್ಯಕ್ತಿಯ ಕೈಯಲ್ಲಿ ಸಾಕಷ್ಟು ರೇಖೆಗಳು ಇರುತ್ತೆ ನಮ್ಮ ಕೈಯಲ್ಲಿರುವ ಕೊನೆಯ ಬೆರಳು ನಮ್ಮ ಜೀವನದ ರಹಸ್ಯ ಹೇಳುತ್ತೆ ಅಂತ ತುಂಬಾ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ್ದಾರೆ.ಅಂತಹ ರಹಸ್ಯದ ಬಗ್ಗೆ ನಾವು ಹೇಳ್ತೀವಿ ಬನ್ನಿ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ಪೂರ್ತಿಯಾಗಿ ಓದಿ.
ಕಿರುಬೆರಳ ಬುಡ ಇತರ ಬೆರಳುಗಳಿಗಿಂತ ಕೆಳಗಿದ್ದರೆ
ಕೊನೆಯ ಬೆರಳು ಚಿಕ್ಕದಾಗಿದ್ದರೆ,ನಮ್ಮ ಉಂಗುರ ಬೆರಳಿಗಿಂತ ಸುಪೀರಿಯರ್ ಗಂಟಿಗಿಂತ ಚಿಕ್ಕದಾದ ಎತ್ತರವಾದ ಕಿರುಬೆರಳು ಹೊಂದಿದ್ದರೆ -ನೀವು ಜನರ ಮಧ್ಯೆ ತುಂಬಾ ನಾಚಿಕೆ ಸ್ವಭಾವದ ವ್ಯಕ್ತಿ ಅಂತ ಹೇಳಲಾಗುತ್ತೆ,ಜೊತೆಗೆ ನಿಮಗೆ ದೊಡ್ಡ ದೊಡ್ಡ ಕನಸುಗಳಿವೆ,ಆಸೆಗಳು ಇರುತ್ತೆ ಅಂತ ಹೇಳಲಾಗುತ್ತೆ,ತುಂಬಾ ಅಂಜಿಕೆಯ ಸ್ವಭಾವದಿಂದ ಕೆಲವು ಅವಕಾಶಗಳಿಂದ ದೂರ ಉಳಿಯುವ ಸಾಧ್ಯತೆ ಜಾಸ್ತಿ ಇರುತ್ತಂತೆ ಆದರೆ ನೀವು ಅಂದುಕೊಂಡಿದ್ದನ್ನು ಸಾಧಿಸುವ ಛಲ ಇರುತ್ತೆ.
ಒಂದು ವೇಳೆ ಕಿರುಬೆರಳು ಉಂಗುರಬೆರಳಿನ ಮೊದಲ ಗಂಟಿಗೆ ಸಮನಾಗಿದ್ದರೆ
ಒಂದು ವೇಳೆ ಕಿರುಬೆರಳಿನ ತುದಿ ಉಂಗುರಬೆರಳಿನ ಮೊದಲ ಗಂಟಿಗೆ ಸಮನಾಗಿದ್ದರೆ ಈ ವ್ಯಕ್ತಿಗಳು ಸಮಾಧಾನಚಿತ್ತದ ಹಾಗೂ ಸೌಮ್ಯಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಸುತ್ತಮುತ್ತಲ ಜನರ ಬಗ್ಗೆ ಕಾಳಜಿ ಹಾಗೂ ಕಳವಳ ವಹಿಸಿದ್ದರೂ ತಕ್ಷಣವೇ ಪ್ರಕಟಿಸಲಾರದು. ಆದ್ದರಿಂದ ಸುತ್ತಮುತ್ತಲ ಜನರು ಇವರ ಅದ್ಭುತ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಕೊಂಚ ಸಮಯವೇ ಬೇಕಾಗುತ್ತದೆ.
ಕಿರುಬೆರಳು ಉಂಗುರಬೆರಳಿನ ಮೊದಲ ಗಂಟಿಗಿಂತಲೂ ಉದ್ದವಾಗಿದ್ದರೆ
ಉದ್ದವಾದ ಕಿರುಬೆರಳು,ಕಿರುಬೆರಳು ಉದ್ದ ಬೆರಳಿನ ಸುಪಿರೀಯರ್ ಗಂಟಿಗಿಂತ ಎತ್ತರದಲ್ಲಿ ಇದ್ರೆ -ನೀವು ತುಂಬಾ ಉತ್ಸಾಹದಿಂದ ಇರ್ತೀರಾ.ನಿಮಗೆ ಸಾಮಾಜಿಕವಾಗಿ ಹೆಚ್ಚಿನ ಗೌರವ ಸಿಗುತ್ತೆ.ಎಲ್ಲರ ಜೊತೆಗೆ ಬೆರೆತುಕೊಂಡು ಇರುವುದಕ್ಕೆ ಇಷ್ಟಪಡ್ತೀರಾ ಆದರೆ ಜನರು ನಿಮ್ಮನ್ನು ನಂಬಬೇಕು ಅಂದ್ರೆ ನೀವು ಸ್ವಲ್ಪ ಕಷ್ಟ ಪಡಬೇಕಾಗುತ್ತದೆ.
ನಿಮ್ಮ ಕಿರುಬೆರಳು ಒಂದೇ ಎತ್ತರವನ್ನು ಹೊಂದಿದ್ದರೆ ,ಸಾಮಾನ್ಯವಾಗಿ ಕಿರುಬೆರಳು ಉಂಗುರದ ಬೆರಳಿಗಿಂತ ಚಿಕ್ಕದಾಗಿದ್ದರೆ-ಜನರು ನಿಮ್ಮನ್ನು ನಂಬುವಂತೆ ಮಾಡಲು ನೀವು ತುಂಬಾ ಕಷ್ಟಪಡಬೇಕಾಗುತ್ತದೆ.
ಒಂದು ವೇಳೆ ಕಿರುಬೆರಳು ಉಂಗುರಬೆರಳಿನಷ್ಟೇ ಉದ್ದವಿದ್ದರೆ
ನಿಮ್ಮ ಕಿರು ಬೆರಳು ಉಂಗುರದ ಬೆರಳಿನಷ್ಟೇ ಉದ್ದವಿದ್ದರೆ -ನೀವು ತುಂಬಾ ಅಪರೂಪದ ವ್ಯಕ್ತಿತ್ವವನ್ನು ಹೊಂದಿರುತ್ತೀರಿ.ಇಂತಹ ವ್ಯಕ್ತಿಗಳು ಸ್ವಲ್ಪ ಶ್ರಮದ ಮೂಲಕ ಅತ್ಯುನ್ನತ ಹುದ್ದೆಯನ್ನು ಪಡೀತಾರೆ,ಅಷ್ಟೇ ಅಲ್ಲದೆ ಅದರಲ್ಲಿ ಯಶಸ್ಸು ಸಹ ಸಿಗುತ್ತೆ.
ಯಾರ ಕೈನ ಕೊನೆ ಬೆರಳು ಉಂಗುರದ ಬೆರಳಿನ ಉಗುರಿನ ವರೆಗೆ ಇರುತ್ತೋ ಅಂಥವರು ಭಾಗ್ಯಶಾಲಿ ಆಗ್ತಾರೆ ಅಂತ ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತೆ.ಎಲ್ಲಾ ಬೆರಳುಗಳು ಸಾಮಾನ್ಯ ಉದ್ದಕ್ಕಿಂತ ಚಿಕ್ಕದಾಗಿದ್ದರೆ – ಅಂಥವರು ಆತುರದಲ್ಲಿ ಕೆಲಸ ಮಾಡ್ತಾರೆ ಅಂತ ಹೇಳಲಾಗುತ್ತೆ ಅಷ್ಟೇ ಅಲ್ಲದೆ ವ್ಯವಹಾರವೂ ಸಹ ತಾಳ್ಮೆ ಇಲ್ಲದೆ ಆತುರದಿಂದ ಮಾಡ್ತಾರಂತೆ.ನಿಮ್ಮ ಬೆರಳಿನ ಉದ್ದ ಸಾಮಾನ್ಯವಾಗಿ ಇದ್ದರೆ ಅವರು ಮನೆಯಲ್ಲಿ ಗೌರವಕ್ಕೆ ಪಾತ್ರರಾಗಿರ್ತಾರೆ ಅಷ್ಟೇ ಅಲ್ಲದೆ ಸಮಾಜದಲ್ಲಿ ಅಂತಹ ಅರ್ಹತೆಯ ಕೆಲಸಗಳನ್ನು ಮಾಡ್ತಾರೆ .
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…