ಬಳ್ಳಾರಿ: ರಾಜಕಾರಣದಲ್ಲಿ ವಿಶ್ವಾಸಾರ್ಹತೆ ಬಹಳ ಮುಖ್ಯ. ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ ಎಂದು ಹೈಕಮಾಂಡ್ ನಾಯಕರ ಮುಂದೆ ಕೇಳಿಕೊಳ್ಳುತ್ತೇನೆ. ಹೈಕಮಾಂಡ್ ಇಟ್ಟ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಅಸಮಾಧಾನದ ಕುರಿತು ಬಳ್ಳಾರಿಯ ಮನೆಯಲ್ಲಿ ಶುಕ್ರವಾರ ಮಾತನಾಡಿದ ಶ್ರೀರಾಮುಲು, ಗುರುವಾರ ಜೆಪಿ ನಡ್ಡಾ ಅವರು ದೂರವಾಣಿ ಮೂಲಕ ಮಾತಾಡಿದರು. ಏನಾಗಿದೆ ಎನ್ನುವ ಮಾಹಿತಿ ಎಲ್ಲವನ್ನೂ ವಿವರಿಸಿದ್ದೇನೆ. ಕೋರ್ ಕಮಿಟಿಯಲ್ಲಿ ರಾಧಾಮೋಹನ್ ಅಗರವಾಲ್ ನಡೆದುಕೊಂಡ ಬಗ್ಗೆಯೂ ಹೇಳಿದ್ದೇನೆ. ರಾಮುಲು ನಿನ್ನ ಪರವಾಗಿ ನಾನಿದ್ದೇನೆ, ಯಾವುದೇ ಯೋಚನೆ ಮಾಡಬೇಡಿ. ಮುಂದೆ ದೆಹಲಿಗೆ ಬರುವುದಾಗಿದ್ದರೆ ಬನ್ನಿ ಎಂದು ನಡ್ಡಾ ಹೇಳಿದ್ದಾರೆ. ನಾನು ಸಹಾಯಕರಿಂದ ಅಪಾಯಿಟ್ಮೆಂಟ್ ತಗೊಂಡು ಬರುತ್ತೇನೆ ಎಂದು ಹೇಳಿದ್ದೇನೆ ಎಂದರು.
ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಸುದ್ದಿ ಮುಟ್ಟಿಸಿದ್ದೇವೆ, ನಿಮ್ಮ ಪರವಾಗಿ ನಾವಿದ್ದೇವೆ ಎಂದು ನಡ್ಡಾ ಹೇಳಿದ್ದಾರೆ. ಜೋಶಿಯವರೂ ಕರೆ ಮಾಡಿ, ನಡ್ಡಾ ಜೊತೆ ಮಾತನಾಡುವಂತೆ ಹೇಳಿದ್ದರು. ನಿಮಗೆ ನೋವಾಗಿದೆ ಎನ್ನುವುದು ಗೊತ್ತಾಗಿದೆ. ಅಗರವಾಲ್ ಸಹಿತ ತಮ್ಮ ಮಾತು ಹಿಂದಕ್ಕೆ ತಗೊಳ್ಳುವುದಾಗಿ ಹೇಳಿದ್ದಾರೆ. ನೀವು ಪಾರ್ಟಿ ಬಿಡುವ ಬಗ್ಗೆ ಯೋಚನೆ ಮಾಡಬೇಡಿ ಎಂದು ಜೋಶಿ ಹೇಳಿದ್ದರು. ವಿಜಯೇಂದ್ರ ನನ್ನ ಜೊತೆ ಮಾತಾಡಿದ್ದಾರೆ. ನಿಮಗೆ ಈ ರೀತಿ ಆಗಿರುವುದು ನೋವಾಗಿದೆ ಎಂದು ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕ ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಬೊಮ್ಮಾಯಿ, ಸದಾನಂದ ಗೌಡ ಸಹ ಮಾತಾಡಿದ್ದಾರೆ. ಎಲ್ಲರಿಗೂ ನನ್ನ ಮೇಲೆ ವಿಶ್ವಾಸವಿದೆ. ನನ್ನ ಸುಧೀರ್ಘ ರಾಜಕೀಯ ಇತಿಹಾಸದಲ್ಲಿ ಬಿಜೆಪಿಗೆ ಸಾಧ್ಯವಾದಷ್ಟು ಅಳಿಲು ಸೇವೆ ಸಲ್ಲಿಸಿದ್ದೀನೆ. ಹೀಗಾಗಿ ಅದನ್ನ ಗುರುತಿಸಿ ಮಾತನಾಡ್ತಿದ್ದಾರೆ. ನನ್ನ ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ. ಎಲ್ಲವನ್ನೂ ಪಾರ್ಟಿಯವರಿಗೆ ತಿಳಿಸಿದ್ದೇನೆ. ಇನ್ಮೇಲೆ ಏನೇ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಮಾತಾಡೋಣ ಎಂದಿದ್ದಾರೆ ಎಂದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…