ನಿಯಂತ್ರಣ ತಪ್ಪಿದ ಸ್ಯಾಂಟ್ರೋಕಾರ್ ಬೈಕ್ ಗೆ ಡಿಕ್ಕಿ ,ಯಕ್ಷಗಾನ ಕಲಾವಿದ ಸಾವು.
ಉಡುಪಿ: ನಿಯಂತ್ರಣ ತಪ್ಪಿದ ಸ್ಯಾಂಟ್ರೋ ಕಾರೊಂದು ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸಾವಾರ ಮೃತಪಟ್ಟ ಘಟನೆ ನಡೆದಿದೆ.
ಉಡುಪಿಯ ಆಶೀರ್ವಾದ್ ಬಳಿ ರಾಷ್ಟೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಮೃತ ಬೈಕ್ ಸಾವಾರ ಬನ್ನಾಡಿ ಉದಯ್ ಅಚಾರ್(೪೦) ಎನ್ನುವವರಾಗಿದ್ದಾರೆ.
ಸಂತಕಟ್ಟೆ ಭಾಗದಿಂದ ಉಡುಪಿ ಕಡೆ ಅತೀವೇಗದಿಂದ ಬಂದ ಸ್ಯಾಂಟ್ರೋ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಏರಿ ಬೈಕಿಗೆ ಡಿಕ್ಕಿ ಹೊಡೆದಿದೆ.ಅ ಬಳಿಕ ಮುಂದೆ ಚಲಿಸಿ ಬೊಲೆರೋ ಜೀಪೊಂದಕ್ಕೆ ಡಿಕ್ಕಿ ಹೊಡೆದು ನಿಂತಿತು.ಅಫಘಾತ ರಭಸಕ್ಕೆ ಬೈಕ್ ಸಾವಾರ ಉದಯ್ ಅಚಾರ್ ರಸ್ತೆಗೆ ಎಸೆಯಲ್ಪಟ್ಟಿದ್ದು ,ತೀವ್ರವಾಗಿ ರಕ್ತಸ್ರಾವ ಉಂಟಾಗಿದೆ.ಕೂಡಲೇ ಅವರನ್ನ ಅದರ್ಶ ಅಸ್ಪತ್ರೆಗೆ ದಾಖಲಿಸಿಲಾಗಿದೆ.ಅದ್ರೆ ಅಷ್ಟರಲ್ಲಿ ಪ್ರಾಣ ಪಕ್ಷಿಹಾರಿ ಹೋಗಿತ್ತು.
ಬನ್ನಾಡಿಯ ಉದಯ್ ಅಚಾರ್ ವೃತ್ತಿಯಲ್ಲಿ ಮೆಡಿಕಲ್ ರೆಪ್ ಅಗಿದ್ದು .ಯಕ್ಷಗಾನ ಕಲಾವಿದರೂ ಕೂಡ ಅಗಿದ್ದರು.
ವಡ್ಡರ್ಸೆಯ ಮಹಾಲಿಂಗೇಶ್ವರ ಯಕ್ಷಗಾನ ಕಲಾಮಂಡಳಿಯ ಕಲಾವಿದರಾಗಿದ್ದರು.
ನಾಳೆ ಕಾಂಜರಹಳ್ಳಿ ವನದುರ್ಗಾ ದೇವಸ್ಥಾನದಲ್ಲಿ ಜೋಡಿ ಸ್ಪರ್ಧೆಗೆ ಬಣ್ಣ ಹಾಕುವವರಿದ್ದರು.
ಯಕ್ಷಗಾನ ರಂಗದಲ್ಲಿ ತನ್ನದೇ ಅದ ಅಭಿಮಾನಬಳಗವನ್ನು ಹೊಂದಿರುವ ಉದಯ್ ಅಚಾರ್ ಅಭಿಮಾನ್ಯು ವೇಷದ ಮೂಲಕ ಹೆಸರು ವಾಸಿಯಾಗಿದ್ದರು.
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…