ಕಟಪಾಡಿ: ನಿರಂತರ ಅಪಘಾತದ ತಾಣವಾಗುತ್ತಿರುವ ಕಟಪಾಡಿ ಜಂಕ್ಷನ್ನಲ್ಲಿ ಗಾಯಾಳುಗಳ ಜೀವ ರಕ್ಷಣೆಗೆ ಉಡುಪಿ ಅಥವಾ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ತುರ್ತು ಸೇವೆಯ ಆ್ಯಂಬುಲೆನ್ಸ್ ಆವಶ್ಯಕವಾಗಿ ಬೇಕಿದೆ ಎಂಬ ಸಾರ್ವಜನಿಕರ ಒತ್ತಾಯ ಕೇಳಿ ಬರುತ್ತಿದೆ.
ಕಟಪಾಡಿ, ಉದ್ಯಾವರ, ಕುರ್ಕಾಲು, ಶಂಕರಪುರ, ಬಂಟಕಲ್ಲು ಸಹಿತ ಪರಿಸರದ ಈ ಪ್ರದೇಶದಲ್ಲಿ ರಸ್ತೆ ಅವಘಡವು ಸಂಭವಿಸಿದಾಗ ಗಾಯಾಳುವಿನ ತುರ್ತು ರಕ್ಷಣೆಗೆ ರಿಕ್ಷಾ ಚಾಲಕರೇ ಮುಂದಾಗುತ್ತಿದ್ದು, ರಿಕ್ಷ ತುರ್ತು ಸೇವೆಯನ್ನು ನೀಡುವ ವಾಹನವಾಗಿ ಪರಿಣಮಿಸುತ್ತಿದೆ. ಆ ನಿಟ್ಟಿನಲ್ಲಿ ರಿಕ್ಷದವರ ಸೇವೆಯು ಅನನ್ಯವಾಗಿದೆ.
ಈ ಭಾಗದಲ್ಲಿ ಅಪಘಾತದಿಂದ ಗಾಯಗೊಂಡ ಗಾಯಾಳುಗಳ ಜೀವ ರಕ್ಷಣೆಗೆ ತುರ್ತು ಸೇವೆಯ ಆ್ಯಂಬುಲೆನ್ಸ್ ಅವಶ್ಯಕವಾಗಿ ಬೇಕಿದ್ದು, ಗಾಯಾಳುವಿಗೆ ತುರ್ತಾಗಿ ಬೇಕಾಗುವ ಪ್ರಥಮ ಚಿಕಿತ್ಸೆ, ಆಕ್ಸಿಜನ್ ವ್ಯವಸ್ಥೆ ಸಹಿತ ಮತ್ತಿತರ ಸೌಲಭ್ಯಗಳು ಲಭಿಸಿದಲ್ಲಿ ಗಾಯಾಳುಗಳ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಡಿಸೆಂಬರ್ ತಿಂಗಳಲ್ಲಿಯೇ ಟಿಪ್ಪರ್ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಉದ್ಯಾವರ ಬೊಳೆjಯ ಯುವಕ, ಬೈಕ್, ಕಾರು ಢಿಕ್ಕಿ ಹೊಡೆದು ಪಾದಚಾರಿಗಳು ಸಾವನ್ನಪ್ಪಿದ ಘಟನೆಯು ಕಟಪಾಡಿ ಜಂಕ್ಷನ್ ಪ್ರದೇಶದಲ್ಲಿ ಸಂಭವಿಸಿದೆ. ಉದ್ಯಾವರ ಪ್ರದೇಶದಲ್ಲಿಯೂ ಅಪಘಾತದಿಂದ ಸಾವು ನೋವುಗಳು ಸಂಭವಿಸಿದೆ. ಕುರ್ಕಾಲು, ಶಂಕರಪುರ, ಬಂಟಕಲ್ಲು ಪರಿಸರದಲ್ಲೂ ರಸ್ತೆ ಆವಘಡದಲ್ಲಿ ಸಾವು ನೋವುಗಳು ಸಂಭವಿಸಿವೆೆ.
ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಮತ್ತು ಉಡುಪಿ ಪ್ರದೇಶದಿಂದ ಬರುವ ವಾಹನಗಳು ಹಾಗೂ ಬೆಳ್ಮಣ್, ಶಿರ್ವ, ಬಂಟಕಲ್ಲು, ಶಂಕರಪುರ ಹಾಗೂ ಮಣಿಪುರ ಭಾಗದಿಂದ ಬರುವ ವಾಹನಗಳು ಮತ್ತು ಮಟ್ಟು ಕಟಪಾಡಿ ಪೇಟೆಯೊಳಗಿಂದ ಬರುವ ವಾಹನಗಳು ಕಟಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್ ಮೂಲಕ ಸಾಗಬೇಕಿದೆ. ಹಾಗಾಗಿ ಸಹಜವಾಗಿಯೇ ಬೆಳೆಯುತ್ತಿರುವ ಕಟಪಾಡಿಯಲ್ಲಿ ಸದಾ ವಾಹನ ದಟ್ಟಣೆ, ಜನದಟ್ಟಣೆಯು ಸಾಮಾನ್ಯವಾಗಿದ್ದು, ನಿಯಂತ್ರಣಕ್ಕೆ ಪೊಲೀಸರು ಶ್ರಮ ವಹಿಸುತ್ತಿದ್ದಾರೆ.
ಕಟಪಾಡಿಯಲ್ಲಿ ಅಂಡರ್ ಅಥವಾ ಓವರ್ ಪಾಸ್ ನಿರ್ಮಿಸಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು. ಜನ ಸಾಮಾನ್ಯರ ಜೀವದ ಮೌಲ್ಯವನ್ನು ಅರಿತು, ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಕಟಪಾಡಿ ಜಂಕ್ಷನ್ ಪ್ರದೇಶದಲ್ಲಿ ತುರ್ತು ಸೇವೆಯ ಆ್ಯಂಬುಲೆನ್ಸ್ ವಾಹನದ ಸೌಕರ್ಯವನ್ನು ಒದಗಿಸಿ ಅಪಘಾತದಿಂದ ಗಾಯಗೊಂಡ ಗಾಯಾಳುಗಳ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ-ಸುರಕ್ಷತೆಯನ್ನು ಕಲ್ಪಿಸಿಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…