Featured

ನಿರಂತರ ಅಪಘಾತದ ತಾಣವಾಗುತ್ತಿರುವ ಕಟಪಾಡಿ ಜಂಕ್ಷನ್‌ : ಗಾಯಾಳುಗಳ ಜೀವ ರಕ್ಷಣೆಗೆ ಬೇಕಿದೆ ತುರ್ತು ಸೇವೆಯ ಆ್ಯಂಬುಲೆನ್ಸ್‌ – Vishwanews24

ನಿರಂತರ ಅಪಘಾತದ ತಾಣವಾಗುತ್ತಿರುವ ಕಟಪಾಡಿ ಜಂಕ್ಷನ್‌ : ಗಾಯಾಳುಗಳ ಜೀವ ರಕ್ಷಣೆಗೆ ಬೇಕಿದೆ ತುರ್ತು ಸೇವೆಯ ಆ್ಯಂಬುಲೆನ್ಸ್‌

ಕಟಪಾಡಿ: ನಿರಂತರ ಅಪಘಾತದ ತಾಣವಾಗುತ್ತಿರುವ ಕಟಪಾಡಿ ಜಂಕ್ಷನ್‌ನಲ್ಲಿ ಗಾಯಾಳುಗಳ ಜೀವ ರಕ್ಷಣೆಗೆ ಉಡುಪಿ ಅಥವಾ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ತುರ್ತು ಸೇವೆಯ ಆ್ಯಂಬುಲೆನ್ಸ್‌ ಆವಶ್ಯಕವಾಗಿ ಬೇಕಿದೆ ಎಂಬ ಸಾರ್ವಜನಿಕರ ಒತ್ತಾಯ ಕೇಳಿ ಬರುತ್ತಿದೆ.

ಕಟಪಾಡಿ, ಉದ್ಯಾವರ, ಕುರ್ಕಾಲು, ಶಂಕರಪುರ, ಬಂಟಕಲ್ಲು ಸಹಿತ ಪರಿಸರದ ಈ ಪ್ರದೇಶದಲ್ಲಿ ರಸ್ತೆ ಅವಘಡವು ಸಂಭವಿಸಿದಾಗ ಗಾಯಾಳುವಿನ ತುರ್ತು ರಕ್ಷಣೆಗೆ ರಿಕ್ಷಾ ಚಾಲಕರೇ ಮುಂದಾಗುತ್ತಿದ್ದು, ರಿಕ್ಷ ತುರ್ತು ಸೇವೆಯನ್ನು ನೀಡುವ ವಾಹನವಾಗಿ ಪರಿಣಮಿಸುತ್ತಿದೆ. ಆ ನಿಟ್ಟಿನಲ್ಲಿ ರಿಕ್ಷದವರ ಸೇವೆಯು ಅನನ್ಯವಾಗಿದೆ.

ಈ ಭಾಗದಲ್ಲಿ ಅಪಘಾತದಿಂದ ಗಾಯಗೊಂಡ ಗಾಯಾಳುಗಳ ಜೀವ ರಕ್ಷಣೆಗೆ ತುರ್ತು ಸೇವೆಯ ಆ್ಯಂಬುಲೆನ್ಸ್‌ ಅವಶ್ಯಕವಾಗಿ ಬೇಕಿದ್ದು, ಗಾಯಾಳುವಿಗೆ ತುರ್ತಾಗಿ ಬೇಕಾಗುವ ಪ್ರಥಮ ಚಿಕಿತ್ಸೆ, ಆಕ್ಸಿಜನ್‌ ವ್ಯವಸ್ಥೆ ಸಹಿತ ಮತ್ತಿತರ ಸೌಲಭ್ಯಗಳು ಲಭಿಸಿದಲ್ಲಿ ಗಾಯಾಳುಗಳ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಡಿಸೆಂಬರ್‌ ತಿಂಗಳಲ್ಲಿಯೇ ಟಿಪ್ಪರ್‌ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಉದ್ಯಾವರ ಬೊಳೆjಯ ಯುವಕ, ಬೈಕ್‌, ಕಾರು ಢಿಕ್ಕಿ ಹೊಡೆದು ಪಾದಚಾರಿಗಳು ಸಾವನ್ನಪ್ಪಿದ ಘಟನೆಯು ಕಟಪಾಡಿ ಜಂಕ್ಷನ್‌ ಪ್ರದೇಶದಲ್ಲಿ ಸಂಭವಿಸಿದೆ. ಉದ್ಯಾವರ ಪ್ರದೇಶದಲ್ಲಿಯೂ ಅಪಘಾತದಿಂದ ಸಾವು ನೋವುಗಳು ಸಂಭವಿಸಿದೆ. ಕುರ್ಕಾಲು, ಶಂಕರಪುರ, ಬಂಟಕಲ್ಲು ಪರಿಸರದಲ್ಲೂ ರಸ್ತೆ ಆವಘಡದಲ್ಲಿ ಸಾವು ನೋವುಗಳು ಸಂಭವಿಸಿವೆೆ.

ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಮತ್ತು ಉಡುಪಿ ಪ್ರದೇಶದಿಂದ ಬರುವ ವಾಹನಗಳು ಹಾಗೂ ಬೆಳ್ಮಣ್‌, ಶಿರ್ವ, ಬಂಟಕಲ್ಲು, ಶಂಕರಪುರ ಹಾಗೂ ಮಣಿಪುರ ಭಾಗದಿಂದ ಬರುವ ವಾಹನಗಳು ಮತ್ತು ಮಟ್ಟು ಕಟಪಾಡಿ ಪೇಟೆಯೊಳಗಿಂದ ಬರುವ ವಾಹನಗಳು ಕಟಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್‌ ಮೂಲಕ ಸಾಗಬೇಕಿದೆ. ಹಾಗಾಗಿ ಸಹಜವಾಗಿಯೇ ಬೆಳೆಯುತ್ತಿರುವ ಕಟಪಾಡಿಯಲ್ಲಿ ಸದಾ ವಾಹನ ದಟ್ಟಣೆ, ಜನದಟ್ಟಣೆಯು ಸಾಮಾನ್ಯವಾಗಿದ್ದು, ನಿಯಂತ್ರಣಕ್ಕೆ ಪೊಲೀಸರು ಶ್ರಮ ವಹಿಸುತ್ತಿದ್ದಾರೆ.

ಕಟಪಾಡಿಯಲ್ಲಿ ಅಂಡರ್‌ ಅಥವಾ ಓವರ್‌ ಪಾಸ್‌ ನಿರ್ಮಿಸಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು. ಜನ ಸಾಮಾನ್ಯರ ಜೀವದ ಮೌಲ್ಯವನ್ನು ಅರಿತು, ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಕಟಪಾಡಿ ಜಂಕ್ಷನ್‌ ಪ್ರದೇಶದಲ್ಲಿ ತುರ್ತು ಸೇವೆಯ ಆ್ಯಂಬುಲೆನ್ಸ್‌ ವಾಹನದ ಸೌಕರ್ಯವನ್ನು ಒದಗಿಸಿ ಅಪಘಾತದಿಂದ ಗಾಯಗೊಂಡ ಗಾಯಾಳುಗಳ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ-ಸುರಕ್ಷತೆಯನ್ನು ಕಲ್ಪಿಸಿಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

 

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

2 hours ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

2 hours ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

2 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

3 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

3 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

3 hours ago