ಹೈದರಾಬಾದ್, : ”ಬಿಜೆಪಿ ಮಸೀದಿಗಳನ್ನು ನಾಶಪಡಿಸುತ್ತದೆ, ಆದರೆ ನಾವು ಮಂದಿರಕ್ಕಾಗಿ 10 ಕೋಟಿ ಸಂಗ್ರಹಿಸುತ್ತಿದ್ದೇವೆ” ಎಂದು ಎಐಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಮುಂಬರುವ ಜಿಎಚ್‌ಎಂಸಿ ಚುನಾವಣೆಗೆ ಎಐಐಐಎಂ ಪರ ಪ್ರಚಾರ ನಡೆಸಿ ಅಜಂಪುರಾದ ಫರ್ಹತ್ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಓವೈಸಿ, ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ್ದು ”ಬಿಜೆಪಿ ಪಕ್ಷವು ದೇಶದಲ್ಲಿ ದ್ವೇಷವನ್ನು ಉತ್ತೇಜಿಸುತ್ತದೆ. ಆದರೆ ನಾವು ಎಲ್ಲರನ್ನು ಒಗ್ಗೂಡಿಸುವ ಬಗ್ಗೆ ಮಾತನಾಡುತ್ತೇವೆ” ಎಂದರು.
“ಇದು ನಿಮ್ಮ ಮತ್ತು ನಮ್ಮ ನಡುವಿನ ವ್ಯತ್ಯಾಸ. ನೀವು ಧ್ವಂಸ ಮಾಡುವ ಬಗ್ಗೆ ಮಾತನಾಡುತ್ತೀರಿ ಮತ್ತು ನಾವು ಒಗ್ಗೂಡಿಸುವ ಬಗ್ಗೆ ಮಾತನಾಡುತ್ತೇವೆ” ಎಂದು ಬಿಜೆಪಿಯನ್ನು ಟೀಕಿಸಿದರು.
ರಾಮ ಜನ್ಮಭೂಮಿ ಚಳುವಳಿ ಹಾಗೂ ಬಾಬ್ರಿ ಮಸೀದಿ ಧ್ವಂಸದ ವಿಚಾರವಾಗಿ ಸೂಕ್ಷ್ಮ ಉಲ್ಲೇಖ ಮಾಡಿದ ಅವರು, ”ತೆಲಂಗಾಣ ವಿಧಾನಸಭೆಯಲ್ಲಿ ಎಐಎಂಐಎಂ ನಾಯಕ ಅಕ್ಬರುದ್ದೀನ್ ಒವೈಸಿ ದೇವಸ್ಥಾನವೊಂದಕ್ಕೆ 10 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದಾರೆ. ಆ ಸಂದರ್ಭ ಮುಖ್ಯಮಂತ್ರಿ ಆಘಾತಕ್ಕೊಳಗಾಗಿದ್ದಾರೆ. ಎಲ್ಲಾ ಧರ್ಮದ ಜನರು ಇಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ತಮ್ಮ ಧರ್ಮವನ್ನು ಅನುಸರಿಸಬೇಕೆಂದು ನಾವು ಬಯಸುತ್ತೇವೆ. 1980 ಮತ್ತು 1990 ರ ಪರಿಸ್ಥಿತಿಯನ್ನು ಇಲ್ಲಿ ಪುನರಾವರ್ತಿಸಲು ನಾನು ಆಸ್ಪದ ನೀಡಲಾರೆವು” ಎಂದು ಹೇಳಿದರು.
“ನಾನು ಮಕ್ಕಳ ಮನಸ್ಸನ್ನು ಹಾಳುಮಾಡಲು ಬಯಸುವುದಿಲ್ಲ ಆದರೆ ಬಿಜೆಪಿ ದ್ವೇಷವನ್ನು ಉತ್ತೇಜಿಸಲು ಬಯಸಿದೆ” ಎಂದು ಓವೈಸಿ ಬಿಜೆಪಿಯನ್ನು ದೂರಿದರು.
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…
ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…
ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…
ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…
ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…