Featured

ನೂತನ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದ ಯೋಗಿ ಆದಿತ್ಯನಾಥರ ಅಯೋಧ್ಯೆ ದೀಪೋತ್ಸವ..

ಇಲ್ಲಿನ ಸರಯೂ ನದಿ ದಂಡೆ ಮೇಲಿರುವ ‘ರಾಮ್‌ ಕೀ ಪೈದಿ’ಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ದೀಪೋತ್ಸವದಲ್ಲಿ 1,87,213 ಮಣ್ಣಿನ ಹಣತೆ ಬೆಳಗುವ ಮೂಲಕ ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಲಾಗಿದೆ..

ಅಯೋಧ್ಯೆ: ಮಂಗಳವಾರ ದೀಪಾವಳಿಯ ಪ್ರಯುಕ್ತ ಉತ್ತರ ಪ್ರದೇಶದ ಪುಣ್ಯಕ್ಷೇತ್ರ ಅಯೋಧ್ಯೆಯಲ್ಲಿ ಮೂರು ಲಕ್ಷ ಹಣತೆಗಳನ್ನು ಬೆಳಗುವ ಮೂಲಕ ನೂತನ ವಿಶ್ವ ದಾಖಲೆ ನಿರ್ಮಿಸಲಾಯಿತು.

ಸರಯೂ ನದಿತಟದಲ್ಲಿ ಮೂರು ಲಕ್ಷ ಮಣ್ಣಿನ ಹಣತೆಗಳನ್ನು ಏಕ ಕಾಲದಲ್ಲಿ ಬೆಳಗಿಸುವ ಮೂಲಕ ದಾಖಲೆ ನಿರ್ಮಾಣವಾಯಿತು. ಗಿನ್ನಿಸ್‌ ವಿಶ್ವ ದಾಖಲೆಗಳ ಪರವಾಗಿ ಹಾಜರಿದ್ದ ಅಧಿಕಾರಿ ರಿಶಿ ನಾಥ್‌, ’ದೀಪೋತ್ಸವ’ ಸಂದರ್ಭದಲ್ಲಿ ನೂತನ ದಾಖಲೆ ನಿರ್ಮಾಣವಾಗಿರುವುದನ್ನು ಘೋಷಿಸಿದರು..

ಗಿನ್ನೆಸ್‌ ಟೀಮ್‌ನವರು ಆಮೂಲಾಗ್ರ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಿದ ಬಳಿಕ ದಾಖಲೆ ಅಧಿಕೃತಗೊಳ್ಳಲಿದೆ. ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಗುಜರಾತ್‌ ಮೂಲದ ‘ಇಮ್ಯಾಜಿನೇಷನ್‌’ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಈ ಕಾರ್ಯಕ್ರಮ ಆಯೋಜಿಸಿತ್ತು.

ಐದು ನಿಮಿಷಗಳಲ್ಲಿ ಒಟ್ಟು 3,01,152 ದೀಪಗಳನ್ನು ಬೆಳಗಲಾಗಿದೆ. ನದಿ ನಟದಲ್ಲಿನ ’ರಾಮ್‌ ಕಿ ಪೈಡಿ’ಯ ಎರಡೂ ಬದಿಗಳಲ್ಲಿ 3.35 ಲಕ್ಷ ದೀಪಗಳನ್ನು ಹಚ್ಚುವ ಗುರಿ ಹೊಂದಲಾಗಿತ್ತು. 2016ರಲ್ಲಿ ಹರಿಯಾಣದಲ್ಲಿ ನಿಗದಿತ ಸಮಯದಲ್ಲಿ 1,50,009 ದೀಪಗಳನ್ನು ಬೆಳಗಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಈ ದಾಖಲೆ ಇದಕ್ಕೂ ಮೊದಲು ಹರಿಯಾಣ ರಾಜ್ಯದ ಪಂಚಕುಲದ ಡೇರಾ ಸಚ್ಚಾ ಸೌಧಾ ಸಂಸ್ಥೆಯ ಹೆಸರಲ್ಲಿತ್ತು.ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಾಬಾ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ನ ಡೇರಾ ಸಂಸ್ಥೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 1,50,009 ಹಣತೆ ಹಚ್ಚಿ ದಾಖಲೆಗೆ ಭಾಜನವಾಗಿತ್ತು.

ಫೈಸಲಾಬಾದ್ ಇನ್ನು ಮುಂದೆ ಅಯೋಧ್ಯೆ
ಈ ದೀಪೋತ್ಸವ ಸಂದರ್ಭದಲ್ಲಿ ಕೆಲವು ಬಹು ಮುಖ್ಯ ಘೋಷಣೆಗಳನ್ನೂ ಸಹ ಹೊರಡಿಸಲಾಗಿದೆ. ಫೈಸಲಾಬಾದ್ ಜಿಲ್ಲೆಯು ಇನ್ನು ಮುಂದೆ ಅಯೋಧ್ಯೆ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಅಯೋಧ್ಯೆ ನಮ್ಮ ಸ್ವಾಭಿಮಾನ ಮತ್ತು ಹೆಮ್ಮೆಯ ಸಂಕೇತ. ಅಯೋಧ್ಯೆ ಶ್ರೀರಾಮ ಅವತರಿಸಿದ ಪುಣ್ಯಭೂಮಿ. ಇನ್ನು ಮುಂದೆ ಫೈಸಲಾಬಾದ್ ಅಯೋಧ್ಯೆ ಎಂದು ಕರೆಯಲ್ಪಡುತ್ತದೆ ಎಂದು ಅವರು ತಿಳಿಸಿದರು.

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

1 day ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

2 days ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

2 days ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

2 days ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

2 days ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

2 days ago