Featured

ನೂಪುರ್ ಶರ್ಮಾ ರ ಅಪಮಾನಕಾರಿ‌ ಹೇಳಿಕೆ ; ಬಿಜೆಪಿಯ ಎಲ್ಲಾ ನಾಯಕರಲ್ಲೂ ಧರ್ಮದ ಡ್ರಗ್ಸ್ ನಶೆ ಮಿತಿಮೀರಿ‌ ಹೋಗಿದೆ : ದಿನೇಶ್ ಗುಂಡುರಾವ್

ಬಿಜೆಪಿ ನಾಯಕರ ಧರ್ಮ ದ್ವೇಷದ ಹೇಳಿಕೆಗಳು ವಿಶ್ವ ಮಟ್ಟದಲ್ಲಿ‌ ಭಾರತಕ್ಕೆ ಕಪ್ಪುಚುಕ್ಕೆ..

ಬಿಜೆಪಿ ನಾಯಕರ‌ ಮಾತುಗಳು ದೇಶದ ಗೌರವ ಹಾಳು ಮಾಡುತ್ತಿರುವುದಲ್ಲದೆ,ದೇಶವನ್ನು ಸರ್ವನಾಶಕ್ಕೆ ಕೊಂಡೊಯ್ಯುತ್ತಿದೆ..

ಬೆಂಗಳೂರು: ಎಲ್ಲಾ ಬಿಜೆಪಿ ನಾಯಕರಲ್ಲೂ ಧರ್ಮದ ಡ್ರಗ್ಸ್ ನಶೆ ಮಿತಿಮೀರಿ‌ ಹೋಗಿದ್ದು ನೂಪುರ್ ಶರ್ಮಾ ರ ಅಪಮಾನಕಾರಿ‌ ಹೇಳಿಕೆ ಒಂದು ಸಣ್ಣ ನಿದರ್ಶನವಷ್ಟೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಆಕ್ರೋಶವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ” ಬಿಜೆಪಿ ನಾಯಕರ ಧರ್ಮ ದ್ವೇಷದ ಹೇಳಿಕೆಗಳು ವಿಶ್ವ ಮಟ್ಟದಲ್ಲಿ‌ ಭಾರತಕ್ಕೆ ಕಪ್ಪುಚುಕ್ಕೆ. ನೂಪರ್ ಶರ್ಮಾರ ಅಪಮಾನಕಾರಿ‌ ಹೇಳಿಕೆ ಒಂದು ಸಣ್ಣ ನಿದರ್ಶನವಷ್ಟೆ. ಈಗ ಎಲ್ಲಾ ಬಿಜೆಪಿ ನಾಯಕರಲ್ಲೂ ಧರ್ಮದ ಡ್ರಗ್ಸ್ ನಶೆ ಮಿತಿಮೀರಿ‌ ಹೋಗಿದೆ. ಬಿಜೆಪಿ ನಾಯಕರ‌ ಮಾತುಗಳು ದೇಶದ ಗೌರವ ಹಾಳು ಮಾಡುತ್ತಿರುವುದಲ್ಲದೆ,ದೇಶವನ್ನು ಸರ್ವನಾಶಕ್ಕೆ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದ್ದಾರೆ.

ಧರ್ಮ ಶ್ರೇಷ್ಟತೆಯ ವ್ಯಸನ ಅತ್ಯಂತ ಅಪಾಯಕಾರಿ. ಬಿಜೆಪಿ ನಾಯಕರು ಈ ವ್ಯಸನಕ್ಕೆ ತುತ್ತಾಗಿರುವುದಲ್ಲದೆ, ಈ ವ್ಯಸನವನ್ನು ಇಡೀ ದೇಶಾದ್ಯಾಂತ ಸಾಂಕ್ರಾಮಿಕದಂತೆ ಹರಡುತ್ತಿದ್ದಾರೆ.ದೇಶದಲ್ಲಿ ಈಗ ದ್ವೇಷದ ವಾತಾವರಣವಿದೆ. ಇದರಿಂದ ದೇಶದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ. ಬಿಜೆಪಿಯವರು ಭಾರತವನ್ನು ಏನು ಮಾಡಲು ಹೊರಟಿದ್ದಾರೆ‌ ಎಂದು ಪ್ರಶ್ನಿಸಿದ್ದಾರೆ.

ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ‌ ಉಚ್ಛ ಸ್ಥಾನದಲ್ಲಿರು ಬಿಜೆಪಿಯ ಎಲ್ಲಾ ನಾಯಕರ ತಲೆಯಲ್ಲೂ ಧರ್ಮಾಂಧತೆಯ ಅಮಲು ತುಂಬಿದೆ. ನೂಪುರ್ ತಮ್ಮ ನಾಯಕರ ಅಂತರ್ಗತ ಭಾವನೆಯನ್ನೇ ಮಾತುಗಳ ಮೂಲಕ ಹೊರಹಾಕಿ ಹಿರಿಯಕ್ಕನ ಚಾಳಿ ಅನುಸರಿಸಿದ್ದಾರಷ್ಟೆ. ಏನೇ ಆದರೂ ಬಿಜೆಪಿಯವರ ಈ ಧೋರಣೆ ದೇಶದ ಸ್ವಾಸ್ಥ್ಯಕ್ಕೆ‌ ಪೂರಕವಲ್ಲ. ಇನ್ನಾದರೂ ಬದಲಾಗಿ ಬಿಜೆಪಿಯವರೇ ಎಂದು ಹೇಳಿದ್ದಾರೆ.

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

1 day ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

1 day ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

1 day ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

1 day ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

1 day ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

2 days ago