ವೆಂಗರ (ಮಲಪ್ಪುರಂ): ರಕ್ಷಣಾ ಕಾರ್ಯದ ವೇಳೆ ರಬ್ಬರ್ ಬೋಟ್ ನಲ್ಲಿ ಹತ್ತಲು ಕಷ್ಟ ಎಂದು ಹಿಂಜರಿದ ಮಹಿಳೆಯರಿಗೆ ಧೈರ್ಯ ನೀಡಿ, ಬೆನ್ನು ಬಾಗಿಸಿ ನೀರಿನಲ್ಲಿ ಕುಳಿತು ಇನ್ನು ನನ್ನ ಬೆನ್ನ ಮೇಲೆ ಕಾಲಿಟ್ಟು ಬೋಟ್ ಹತ್ತಿ ಎಂದ ಯುವಕನಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಯ ಸುರಿಮಳೆಯಾಗಿದೆ.
ಬೆನ್ನ ಮೇಲೆ ಕಾಲಿಟ್ಟು ಹತ್ತುವಂತೆ ಹೇಳಿದ ಆ ಯುವಕ ಹೆಸರು ಜೈಸಲ್ ಕೆ.ಪಿ. ಇಲ್ಲಿನ ತಾನೂರ್ ಎಂಬಲ್ಲಿ ಮೀನುಗಾರನಾಗಿದ್ದಾರೆ ಜೈಸಲ್.
ನೀರಿನಲ್ಲಿ ಬಾಗಿ ಕುಳಿತು ಬೆನ್ನು ನೀಡಿ ಹತ್ತಿಕೊಳ್ಳಿ ಎಂದು ವಯಸ್ಸಾದ ಮಹಿಳೆಯೊಬ್ಬರಿಗೆ ಹೇಳಿದಾಗ, ಚಪ್ಪಲಿ ಹಾಕಿಕೊಂಡೇ ಆಕೆ ಆತನ ಬೆನ್ನ ಮೇಲೆ ಕಾಲಿಟ್ಟು ಬೋಟ್ ಹತ್ತಿದ್ದಾರೆ. ಆ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬರು, ಅವರೂ ಮನುಷ್ಯರೇ, ಕಲ್ಲು ಅಲ್ಲ. ನೀವು ಹುಷಾರು ಎಂದು ಹೇಳಿದಾಗ ಸರದಿ ಸಾಲಿನಲ್ಲಿದ್ದ ಇನ್ನೊಬ್ಬ ಮಹಿಳೆ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಬೋಟ್ ಹತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವ ಈ ವಿಡಿಯೊ ಭಾನುವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…