ಮುಂಬೈ: ಬಾಲಿವುಡ್ ಪ್ರಖ್ಯಾತ ಕಿರುತೆರೆ ನಟ ಕುಶಾಲ್ ಪಂಜಾಬಿ(37) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮುಂಬೈ ನಿವಾಸದಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಸುದ್ದಿಯನ್ನು ಕಿರುತೆರೆ ನಟ ಕರಣ್ವೀರ್ ಬೊಹ್ರಾ ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡು, ನಿನ್ನ ನಿಧನ ನನ್ನನ್ನು ಶಾಕ್ಗೆ ದೂಡಿದೆ. ಈ ಕ್ಷಣದವರೆಗೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇದರೊಂದಿಗೆ ಅನೇಕ ಬಾಲಿವುಡ್ ಕಲಾವಿದರು ಸಹ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಇನ್ನು ಪೊಲೀಸರಿಗೆ ಘಟನಾ ಸ್ಥಳದಲ್ಲಿ ಡೆತ್ನೋಟ್ ಲಭ್ಯವಾಗಿದ್ದು, ಸಾವಿಗೆ ಯಾರೂ ಹೊಣೆಯಲ್ಲ ಎಂದು ಬರೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ. ಅಲ್ಲದೆ, ಖಿನ್ನತೆಯಿಂದ ಬಳಲುತ್ತಿದ್ದರು. ಆದರೆ, ಇಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಊಹೆ ಮಾಡಿರಲಿಲ್ಲ ಎಂದು ಸಹ ಕಲಾವಿದ ಚೇತನ್ ಹನ್ಸರಾಜ್ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇಶ್ಕ್ ಮೆಂ ಮರ್ಜಾವಾಂ, ಮೌಥ್ ಫುಲ್ ಆಫ್ ಸ್ಕೈ, ಲವ್ ಮ್ಯಾರೇಜ್, ದೇಖೋ ಮಗರ್ ಪ್ಯಾರ್ ಸೆ, ಕಭೀ ಹಾಂ ಕಭೀ ನಾಂ,.ಯೆ ದಿಲ್ ಚಾಹೇ ಮೋರ್, ಫಿಯರ್ ಫ್ಯಾಕ್ಟರ್, ಕಸಂ ಸೆ, ಅಂತರಿಕ್ಷ್, ಹಮ್ ತುಮ್, ಜೋರ್ ಕಾ ಜಟ್ಕಾ, ಆಸ್ ಮಾನ್ ಸೆ ಆಗೆ, ತೇರಿ ಮೇರಿ ಲವ್ ಸ್ಟೋರಿ ಹಾಗೂ ರಾಜಾ ಕೀ ಆಯೇಗಿ ಬಾರಾತ್ ಮೊದಲಾದ ಧಾರವಾಹಿ ಹಾಗೂ ಕಿರುತೆರೆ… ಕಾರ್ಯಕ್ರಮಗಳಲ್ಲಿ ನಟಿಸಿದ್ದರು. ಇನ್ನು ಸಲಾಂ ಎ ಇಶ್ಕ್, ಧನ್ ಧನಾ ಧನ್ ಗೋಲ್, ಕ್ರೀಜಿ ಕುಕ್ಕಡ್ ಫ್ಯಾಮಿಲಿ, ಹಮ್ ಕೋ ಇಶ್ಕ್ ನೆ ಮಾರಾ ಮೊದಲಾದ ಸಿನಿಮಾಗಲ್ಲೂ ನಟಿಸಿದ್ದರು….
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…