Featured

ನೈಜ ಕಲಾಕಾರರಿಗೆ ಬೆಂಬಲಿಸುವ ಉದ್ದೇಶ- ಮಣಿಪಾಲದಲ್ಲಿ ಘರ್ ಬೈ ಮಾಲ್ಶಿ ಸಂಸ್ಥೆಯಿಂದ ನವೆಂಬರ್‌ 1 ಕ್ಕೆ ಹಸ್ತಕಲಾ ಕಾರ್ಯಕ್ರಮ:- vishwanews24

ನೈಜ ಕಲಾಕಾರರಿಗೆ ಬೆಂಬಲಿಸುವ ಉದ್ದೇಶ- ಮಣಿಪಾಲದಲ್ಲಿ ಘರ್ ಬೈ ಮಾಲ್ಶಿ ಸಂಸ್ಥೆಯಿಂದ ನವೆಂಬರ್‌ 1 ಕ್ಕೆ ಹಸ್ತಕಲಾ ಕಾರ್ಯಕ್ರಮ:- vishwanews24

ಉಡುಪಿ: ಆಧುನಿಕತೆಯಲ್ಲಿ ಕಳೆದು ಹೋಗುತ್ತಿರುವ ನಮ್ಮ ನೆಲದ ಕಲೆಯನ್ನು ಉಳಿಸುವ ಉದ್ದೇಶದಿಂದ ಒಂದು ಪ್ರಯತ್ನ “ಹಸ್ತಕಲೆ” ,ಭಾರತದ ಪುರಾತನವಾದ ಮತ್ತು ಹೆಚ್ಚು ಕರಕುಶಲಕಾರರನ್ನು ಉಳಿಸಿ ಬೆಳೆಸಬೇಕು,ಮುಂದಿನ ಪೀಳಿಗೆಗೆ ಸಮೃದ್ಧ ಕಲೆ ಹಸ್ತಾಂತರವಾಗಬೇಕು ಎಂಬ ಉದ್ದೇಶದಿಂದ ಒಂದು ಪ್ರಯತ್ನ ನಿರಂತರ ನಡೆಯುತ್ತಿದ್ದು ನಮ್ಮ ನೆಲದ ನೈಜ ಕಲಾಕಾರರಿಗೆ ಬೆಂಬಲ ಕೊಡುವ ಉದ್ದೇಶದ “ಹಸ್ತಕಲಾ”: ಕಾರ್ಯಕ್ರಮವನ್ನು ನವೆಂಬರ್ 1 -2021 ರಂದು ಮಣಿಪಾಲದ ರೋಟರಿ ಸಭಾಭವನದಲ್ಲಿ ಒಂದು ದಿನದ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘರ್ ಬೈ ಮಾಲ್ಶಿ ಸಂಸ್ಥೆಯ ಸ್ಥಾಪಕಿ ಮಹಾಲಸ ಕಿಣಿ ತಿಳಿಸಿದರು.

ಮಗ್ಗದ ಸೀರೆ ನೇಯುವ, ಮಣ್ಣಿನ ವಿವಿಧ ಕಲಾಕೃತಿ ಆಟಿಕೆ ಉಪಯೋಗಿ ವಸ್ತುಗಳನ್ನು ತಯಾರಿಸುವ ಕುಂಬಾರರನ್ನು ಕರೆಸಿ ಆಸಕ್ತರಿಗೆ ತರಬೇತಿಯ ಆರಂಭದ ಕ್ಲಾಸುಗಳನ್ನು ಮಾಡಿಸಲಾಗುವುದು, ನೇಕಾರರು, ಅಚ್ಚುಕಲಾವಿದರ ಅನುಭವಗಳನ್ನು ವಿನಿಮಯ ಮಾಡುವ ಅವಕಾಶವಿದೆ. ಉಡುಪಿಯ ನೆಲದ ಸಂಸ್ಕೃತಿಯಾಗಿರುವ ನೇಕಾರಿಕೆ ಅಳಿವಿನಂಚಿಗೆ ಹೋಗುತ್ತಿದ್ದು ಅದನ್ನು ಉಳಿಸಬೇಕು ಬೆಳೆಸಬೇಕು ಎಂಬ ಉದ್ದೇಶದಿಂದ ಅವರು ತಯಾರಿಸಿದ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಸಲಾಗುವುದು, ಈ ಮೂಲಕ ಯುವ ಪೀಳಿಗೆಗೆ ಆಕರ್ಷಿತ ಆಗುವಂತಹ ಆಧುನಿಕ ಡಿಸೈನ್ ಗಳನ್ನು ಸೀರೆಗಳಲ್ಲಿ ತರುವ ಪ್ರಯತ್ನ ಮಾಡಲಾಗಿದೆ. ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಕನಿಷ್ಠ ಕಲಿಕಾ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದರು.

ಕಾರ್ಯಾಗಾರದ ಉದ್ಘಾಟನೆ ಮತ್ತು ಹಿರಿಯ ನೇಕಾರರಿಗೆ ಸನ್ಮಾನವನ್ನು ಮಣಿಪಾಲದ ಟಿ. ಅಶೋಕ್ ಪೈ ಬೆಳಗ್ಗೆ 10 ಕ್ಕೆ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ 7 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ನೇಕಾರರ ಸಂಘದ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಕಾಂಚನ್ ,ಮಾಲ್ಕಿ ಸಂಸ್ಥೆಯ ಸದಸ್ಯರಾದ ಅನಿರುದ್ಧ, ವೈಷ್ಣವಿ, ಪವನ್ ಶೆಟ್ಟಿ, ಶ್ರೀದೇವಿ ಕುಲಾಲ್ ಉಪಸ್ಥಿತಿತರಿದ್ದರು.

ಕಾರ್ಯಕ್ರಮದ ವಿವರ

Block printing workshop
ಅಚ್ಚು ಕಲೆ ಕಾರ್ಯಾಗಾರ- ಬೆಳಗ್ಗೆ 11 ರಿಂದ 12

Pottery Workshop ಆವೆ ಮಣ್ಣಿನ ರಚನೆಗಳ ತರಬೇತಿ ಬೆಳಗ್ಗೆ 11 ರಿಂದ 4 ಗಂಟೆಯವರೆಗೆ, Tie and dye.

ಹೆಣೆಯುವ ಮತ್ತು ಅದಕ್ಕೆ ರಂಗು ತುಂಬುವ ಕಾರ್ಯಾಗಾರ 12 pm to 1 pm ನಡೆಯಲಿದೆ

ಮಗ್ಗದ ಮನೆಯ ಬಗ್ಗೆ ಮಾಹಿತಿ ಪ್ರಾಥಮಿಕ ತರಗತಿ.
Introductory workshop on handloom weaving to 5 pm to 6pm odd.

 

 

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

5 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

6 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

6 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

6 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

6 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

6 days ago