Featured

ಪಂಚಾಯತ್ ಚುನಾವಣೆ ಹತ್ತಿರ ಬಂದಾಗ  ಎಲ್ಲಾ ಅಪವಾದಗಳನ್ನು ಹಿಂದಿನ ಸರಕಾರದ ಮೇಲೆ ಹಾಕ್ತ ಇದ್ದಾರೆ ಯಾಕೆ?: ವಿನಯ್ ಕುಮಾರ್ ಸೊರಕೆ -Vishwanews24

ಬಿಜೆಪಿಗರಿಗೆ ಆಪರೇಷನ್ ಕಮಲ ನಡೆಸುವುದೇ ಆಸಕ್ತಿ ಇರುವಂತಿದೆ : ವಿನಯ್ ಕುಮಾರ್ ಸೊರಕೆ

ಪಂಚಾಯತ್ ಚುನಾವಣೆ ಹತ್ತಿರ ಬಂದಾಗ  ಎಲ್ಲಾ ಅಪವಾದಗಳನ್ನು ಹಿಂದಿನ ಸರಕಾರದ ಮೇಲೆ ಹಾಕ್ತ ಇದ್ದಾರೆ ಯಾಕೆ?

ಉಡುಪಿ, : ಕಾಂಗ್ರೆಸ್ ಸಾಧ್ಯವಿದ್ದರೆ ಗೆಲ್ಲುವ ಅಭ್ಯರ್ಥಿಯನ್ನು ನಿಲ್ಲಿಸಲಿ ಎನ್ನುವ ಶೋಭಾ ಕರಂದ್ಲಾಜೆ ಸವಾಲಿಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ತಿರುಗೇಟು ನೀಡಿದ್ದು, “ಇದರಿಂದಲೇ ಬಿಜೆಪಿಯ ಮನೋವೃತ್ತಿ ಏನೆಂದು ಗೊತ್ತಾಗುತ್ತೆ. ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಖರೀದಿಸಿ ಸರಕಾರ ಮಾಡಿದ್ದಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.

ಶನಿವಾರ ಉಡುಪಿ ಪ್ರೆಸ್ ಕ್ಲಬ್‌‌ನಲ್ಲಿ ಮಾತನಾಡಿದ ಅವರು, “ಕೊರೊನಾ ಮಹಾಮಾರಿ ತಡೆಗಟ್ಟುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕೊರೊನಾ ಸೋಂಕಿತರ ಬಗ್ಗೆ ಭಾರತ ವಿಶ್ವದಲ್ಲಿ ಎರಡನೇ ಸ್ಥಾನ ಮತ್ತು ಕರ್ನಾಟಕವು ಎರಡನೇ ಸ್ಥಾನ. ‌ಈ ಸಂದರ್ಭದಲ್ಲಿ ತೊಂದರೆಗೆ ಒಳಪಟ್ಟವರ ಸಮಸ್ಯೆಯನ್ನು ಪರಿಹಾರ ಕ್ರಮ ತೆಗೆದುಕೊಂಡಿಲ್ಲ. ಪಕ್ಷದ ನಾಯಕರನ್ನು ಒಲಿಸಿಕೊಳ್ಳಲು ನಿಗಮದ ಸ್ಥಾಪನೆ ಸಂಪುಟ ವಿಸ್ತರಣೆ. ಮುಖ್ಯಮಂತ್ರಿಯವರ ಬದಲಾವಣೆ ಇದೇ ಜಂಜಾಟದಲ್ಲಿ ಬಿಜೆಪಿ ತೊಡಗಿದೆ. ಜನ ಸಾಮಾನ್ಯರ ಸಮಸ್ಯೆಗೆ ಕಿವುಡಾಗಿದ್ದಾರೆ. ಕಾಂಗ್ರೆಸ್ ಕೂಡ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದೆ. ಕಾರ್ಮಿಕ ಕಾಯ್ದೆ, ಭೂ ಮಸೂದೆ ಕಾಯ್ದೆ, ಬೆಲೆ ಏರಿಕೆಯಾಗಿದೆ. ಗ್ಯಾಸ್ ಸಬ್ಸಿಡಿ ತೆಗೆಯಲಾಗಿದೆ. ನಗರಸಭೆ ಪುರಸಭೆ ಸಿಮೆಂಟ್ ದಂಧೆ, ಮರದ ಧಂದೆ, ಮರಳು ದಂಧೆ ನಿರೀಕ್ಷಿತ ಅಭಿವೃದ್ದಿ ಕಾರ್ಯಕ್ರಮ ಆಗುತ್ತಿಲ್ಲ. ಸಿದ್ದರಾಮಯ್ಯನವರು ಕೊಡುತ್ತಿದ್ದ ಐದು ಲಕ್ಷ ಅನುದಾನವನ್ನು ಈಗ ಐದೈದು ಲಕ್ಷದಂತೆ ಹಂಚುತ್ತಿದ್ದಾರೆ. ಹಿಂದಿನ ಸರಕಾರದ ಕಾಲದಲ್ಲಿ ಮಾಡಿದ 94 ಸಿ ಹಕ್ಕು ಪತ್ರ ಹಂಚಿಕೆ ಇನ್ನು ಕೊಟ್ಟಿಲ್ಲ. ಹಲವಾರು ಕಡೆ ಜನ ರೊಚ್ಚಿಗೆದ್ದಿದ್ದಾರೆ” ಎಂದರು.

“ಕಾಪು ಪುರಸಭೆ ಆಗುವ ಮೊದಲೂ ಒಂದು ಬಾರಿಯೂ ಕಾಪುವಿನತ್ತ ಸುಳಿದಿಲ್ಲ. ಆದರೆ, ಕಾಪು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗುವಾಗ ಬಿಜೆಪಿ ಬಹಮತಕ್ಕಾಗಿಯೇ ಓಟು ಹಾಕಲು ಓಡೋಡಿ ಬಂದಿದ್ದಾರೆ. ಒಂದೂ ಅವರ ಹಂತದ ಅಭಿವೃದ್ದಿ ಕಾರ್ಯಕ್ರಮ ಕಾಪುವಿನಲ್ಲಿ ಆದದ್ದಿಲ್ಲ. ಬಿಜೆಪಿಗರಿಗೆ ಖರೀದಿಯ ಮೇಲೆನೆ ಹೆಚ್ಚು ವಿಶ್ವಾಸ ಇದೆ ಕುದುರೆ ವ್ಯಾಪಾರ ಮಾಡುವುದು, ಆಪರೇಷನ್ ಕಮಲ ನಡೆಸುವುದೇ ಆಸಕ್ತಿ ಇರುವಂತಿದೆ” ಎಂದು ತಿಳಿಸಿದರು.

ನಿನ್ನೆ ಬಿಜೆಪಿ ಸಮಾವೇಶದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ ಹೇಳಿದ ಹೇಳಿಯಂತೆ, ಕಾಂಗ್ರೆಸ್ ಅಧಿಕಾರ ಮಾಡಿದ್ದೇ ಡ್ರಗ್ ಮಾಫಿಯಾದಿಂದ ಎಂಬುದಕ್ಕೆ ತಿರುಗೇಟು ನೀಡಿದ ಸೊರಕೆ, “ಬಿಜೆಪಿ ಸರಕಾರಕ್ಕೆ ಬಂದು ಒಂದೂವರೆ ವರ್ಷವಾಯ್ತು . ಏನು ಅಭಿವೃದ್ದಿ ಮಾಡಿದ್ದರು? ಕತ್ತೆ ಕಾಯ್ತಾ ಇದ್ರಾ?. ಸಿದ್ದರಾಮಯ್ಯನವರ ಸರಕಾರದ ಕಾಲದಲ್ಲಿ ಡ್ರಗ್ ಇದ್ದಿದ್ರೆ, ಮೈತ್ರಿ ಸರಕಾರ ಬಂದಾಗ ಎಸೆಂಬ್ಲಿಯಲ್ಲಿ ಏಕೆ ಒಂದು ಶಬ್ದ ಮಾತನಾಡಿಲ್ಲ. ಪಂಚಾಯತ್ ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸ್ತಾ ಇದ್ದಾರೆ. ಎಲ್ಲಾ ಅಪವಾದಗಳನ್ನು ಹಿಂದಿನ ಸರಕಾರದ ಮೇಲೆ ಹಾಕ್ತ ಇದ್ದಾರೆ ಯಾಕೆ? ಎಂದು ಪ್ರಶ್ನಿಸಿದರು.

Vishwa News 24

Recent Posts

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ -vishwanews24

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…

8 minutes ago

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ -vishwanews24

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…

23 minutes ago

ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ : ಭರತ್‌ ಶೆಟ್ಟಿ ಆಗ್ರಹ -vishwanews24

ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ : ಭರತ್‌ ಶೆಟ್ಟಿ ಆಗ್ರಹ ಮಂಗಳೂರು: ಸ್ಫೋಟದ ನಿಖರ ಕಾರಣ…

30 minutes ago

ಮಡ್‌ಗಾಂವ್‌ – ಮಂಗಳೂರು ‘ವಂದೇ ಭಾರತ್‌’ ರೈಲು ಬೆಂಗಳೂರಿಗೆ ವಿಸ್ತರಣೆ -vishwanews24

ಮಡ್‌ಗಾಂವ್‌ - ಮಂಗಳೂರು 'ವಂದೇ ಭಾರತ್‌' ರೈಲು ಬೆಂಗಳೂರಿಗೆ ವಿಸ್ತರಣೆ ಮಂಗಳೂರು/ಉಡುಪಿ: ಈ ಹಿಂದೆ ಮಂಗಳೂರು ಸೆಂಟ್ರಲ್‌-ಮಡ್‌ಗಾಂವ್‌ ನಡುವೆ ಓಡುತ್ತಿದ್ದ…

2 hours ago

ಅಕ್ಟೋಬರ್ 11ರಿಂದ 20ರ ವರೆಗೆ KSRTC ಯಿಂದ ವಿಶೇಷ ಪ್ಯಾಕೇಜ್ ಪ್ರವಾಸ -vishwanews24

ಅಕ್ಟೋಬರ್ 11ರಿಂದ 20ರ ವರೆಗೆ KSRTC ಯಿಂದ ವಿಶೇಷ ಪ್ಯಾಕೇಜ್ ಪ್ರವಾಸ ಉಡುಪಿ: ಕ.ರಾ.ರ.ಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ…

2 hours ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 62 ರೂ. ಏರಿಕೆ -vishwanews24

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 62 ರೂ. ಏರಿಕೆ ನವದೆಹಲಿ: ಹಬ್ಬದ ಹೊಸ್ತಿಲಲ್ಲೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಣನೀಯ…

2 hours ago