Featured

ಪಕ್ಷಿಕೆರೆ : ಪತ್ನಿ ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣ: ಸೂಕ್ತ ತನಿಖೆಗೆ ಪತ್ನಿ ಪ್ರಿಯಾಂಕ ಕುಟುಂಬಿಕರ ಆಗ್ರಹ – vishwanews24

ಪಕ್ಷಿಕೆರೆ : ಪತ್ನಿ ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣ: ಸೂಕ್ತ ತನಿಖೆಗೆ ಪತ್ನಿ ಪ್ರಿಯಾಂಕ ಕುಟುಂಬಿಕರ ಆಗ್ರಹ

ಮಂಗಳೂರಿನಲ್ಲಿ ಪತ್ನಿ ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಪತ್ನಿ ಪ್ರಿಯಾಂಕ ಕುಟುಂಬಿಕರು ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಪ್ರಿಯಾಂಕಾ ತಾಯಿ ಸಾವಿತ್ರಿ ಮಾಧ್ಯಮಗಳೊಂದಿಗೆ ಮಾತನಾಡಿ ಅಳಿಯ ಕಾರ್ತಿಕ್ ಗೆ ವಿದೇಶಕ್ಕೆ ಹೋಗುವಂತೆ ಅವರ ತಾಯಿ ತುಂಬಾ ಒತ್ತಾಯ ಮಾಡುತ್ತಿದ್ದು ಬೇರೆ ಮನೆ ಮಾಡಿ ಎಂದು ಮೂರು ನಾಲ್ಕು ಸಲ ಹೇಳಿದ್ದಾರೆ.

ಗಂಡನ ಜೊತೆ ಅತ್ತೆ ಮಾವ ಮಾತು ಬಿಟ್ಟ ಮೇಲೆ ಇವಳು ಮಾತನಾಡ್ತ ಇರಲಿಲ್ಲ ನನ್ನ ಮಗಳು ಕೆಲಸಕ್ಕೆ ಹೋಗಲಿ ಎಂದು ಅವಳ ಅತ್ತೆ ಒತ್ತಾಯ ಮಾಡ್ತಿದ್ರು ಕಾರ್ತಿಕ್ ಅಕ್ಕ ಮತ್ತು ತಾಯಿ ನಮ್ಮ ಮುಖ ನೋಡಬಾರದು ಎಂದು ಕಾರ್ತಿಕ್ ಡೆತ್ ನೋಟ್ ಬರೆದಿದ್ದಾರೆ.

ಮನೆಯಲ್ಲಿ ಅವರು ಜಗಳ ಮಾಡೋದಕ್ಕೆ ಸಾಧ್ಯವಿಲ್ಲ. ಮಗಳು ಗುರುವಾರ ಫೋನ್ ಮಾಡಿ ಮತನಾಡಿದ್ದಳು. ಡಿಸೆಂಬರ್ ನಲ್ಲಿ ಶಿವಮೊಗ್ಗಕ್ಕೆ ಬರೋದಾಗಿ ಹೇಳಿದ್ರು ಮಗು ನಾನು ಪಕ್ಷಿಕೆರೆಗೆ ಹೋಗಲ್ಲ ಎಂದು ಅಳುತ್ತಿತ್ತು ಎಂದು ಅವರು ಹೇಳಿದರು.

ಇದೇ ವೇಳೆ ಪ್ರಿಯಾಂಕ ಅವರ ದೊಡ್ಡಪ್ಪ ಉಮಾಶಂಕರ್ ಉಪಾಧ್ಯಯ ಮಾತನಾಡಿ ಕಾರ್ತಿಕ್ ಈ ರೀತಿಯ ಕೃತ್ಯ ಮಾಡುವಂತ ಕಟುಕ ಅಲ್ಲ ಯಾಕೆಂದರೆ ಮಗು ಮತ್ತು ಹೆಂಡತಿಯ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದ. ಆರ್ಥಿಕ ಸಂಕಷ್ಟ ಇದೆ ಎಂದು ಯಾರ ಬಳಿಯು ಹೇಳಿರಲಿಲ್ಲ ಅವರಿಗೆಆರ್ಥಿಕ ಸಂಕಷ್ಟ ಇತ್ತು ಎಂದು ಅನಿಸುತ್ತಿಲ್ಲ. ತಂದೆ ತಾಯಿ ಜೊತೆ ಕಾರ್ತಿಕ್ ತುಂಬಾ ವರ್ಷದಿಂದ ಮಾತನಾಡ್ತ ಇರಲಿಲ್ಲ. ಕಾರ್ತಿಕ್ ತುಂಬಾ ಒಳ್ಳೆ ಹುಡುಗನಾಗಿದ್ದು ಮನೆಯಲ್ಲಿ ಏನಾಗಿದೆ ಎಂದು ಗೊತ್ತಿಲ್ಲ. ಇವನೇ ಆತ್ಮಹತ್ಯೆ ಮಾಡಿಕೊಂಡ್ನಾ ಅಥವಾ ಬೇರೆಯವರು ರೈಲು ಹಳಿಗೆ ಹೊತ್ತು ಹಾಕಿದ್ರಾ ಎಂದು ಗೊತ್ತಿಲ್ಲ ಎಂದರು.

100% ಹೆಂಡ್ತಿ ಮಗುನಾ ಕಾರ್ತಿಕ್ ಕೊಲ್ಲೋದಕ್ಕೆ ಸಾಧ್ಯವಿಲ್ಲ ಇದರ ಹಿಂದೆ ಇನ್ನು ಯಾರೋ ಇದ್ದಾರೆ ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ಮಾಡಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಈ ಬಗ್ಗೆ ಕುಟುಂಬ ಹೋರಾಟ ಮಾಡಲಿದೆ ಎಂದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

20 hours ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

2 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

2 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

2 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

2 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

2 days ago