Featured

ಪಡಿತರದಾರರಿಗೆ ಏಪ್ರಿಲ್‌ನಿಂದ ಗೋಧಿ ವಿತರಣೆಗೆ ಬ್ರೇಕ್‌ ; ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ ವಿತರಣೆ – Vishwanews24

ಏಪ್ರಿಲ್‌ನಿಂದ ಪಡಿತರದಾರರಿಗೆ ಗೋಧಿ ಬದಲು ಅಕ್ಕಿ ಮಾತ್ರ ಲಭ್ಯ

2 ಕೆ.ಜಿ. ಗೋಧಿ ವಿತರಣೆಗೆ ಬ್ರೇಕ್‌

ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ ವಿತರಣೆ

ನ್ಯಾಯಬೆಲೆ ಅಂಗಡಿಗಳಲ್ಲಿ ಇದುವರೆಗೂ ವಿತರಿಸಲಾಗುತ್ತಿದ್ದ ಗೋಧಿ ಇನ್ನು ಪಡಿತರ ಚೀಟಿದಾರರಿಗೆ ಸದ್ಯಕ್ಕೆ ಸಿಗುವುದಿಲ್ಲ. ಮಾರ್ಚ್ ತಿಂಗಳೇ ಗೋಧಿ ವಿತರಣೆ ಕೊನೆಯಾಗಲಿದೆ. ಇದರ ಬದಲು ಏಪ್ರಿಲ್‌ನಿಂದ ಹೆಚ್ಚುವರಿಯಾಗಿ ಪ್ರತಿ ಸದಸ್ಯನಿಗೆ 1 ಕೆ.ಜಿ.ಅಕ್ಕಿ ವಿತಣೆಯಾಗಲಿದೆ.

ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಕೋಟಾದಲ್ಲಿಪ್ರತಿ ಸದಸ್ಯನಿಗೆ 10 ಕೆ.ಜಿ. ಹಾಗೂ ಒಂದು ಪಡಿತರ ಕಾರ್ಡ್‌ಗೆ 2 ಕೆ.ಜಿ. ಗೋಧಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಏಪ್ರಿಲ್‌ ತಿಂಗಳಿಂದ ಕೊರೊನಾ ಕಾರಣ ಕೇಂದ್ರ ಸರಕಾರ ವಿತರಣೆ ಮಾಡುತ್ತಿದ್ದ ತಲಾ 5 ಕೆ.ಜಿ. ಅಕ್ಕಿ ವಿತರಣೆಯ ಬಾಬತ್ತು ಮುಗಿಯಲಿದೆ.

ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ!
ಪಡಿತರದಾರರಿಗೆ ಏಪ್ರಿಲ್‌ನಿಂದ ಪ್ರತಿ ಸದಸ್ಯನಿಗೆ ತಲಾ 5 ಕೆ.ಜಿ. ಅಕ್ಕಿ ಹಾಗೂ ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ. ಸೇರಿ 6 ಕೆ.ಜಿ. ಲಭ್ಯವಾಗಲಿದೆ. ಆದರೆ ಇನ್ಮುಂದೆ ಗೋಧಿ ವಿತರಣೆ ಇರುವುದಿಲ್ಲಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಈಗ ಬೆಂಬಲ ಬೆಲೆ ದರದಲ್ಲಿ ಖರೀದಿಸಿರುವ ರಾಗಿಯನ್ನು ಪ್ರತಿ ಸದಸ್ಯನಿಗೆ 1 ಕೆ.ಜಿ.ಯಂತೆ ವಿತರಿಸುವ ಸಾಧ್ಯತೆಯೂ ಇದೆ. ಹೀಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಅಕ್ಕಿಯಷ್ಟೇ ಪಡಿತರದಾರರಿಗೆ ಸಿಗಲಿದೆ.

ಸರಕಾರದ ನಿರ್ಧಾರ!
ರಾಜ್ಯ ಸರಕಾರದಿಂದ ಆದೇಶ ಬಂದಿದ್ದರೂ ಇನ್ನೂ ನ್ಯಾಯಬೆಲೆ ಅಂಗಡಿಗಳಿಗೆ ಈ ವಿಷಯ ತಲುಪಿಲ್ಲ. ಆದರೆ ಮೌಖಿಕವಾಗಿ ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಮುಂದಿನ ತಿಂಗಳಿಂದ ಗೋಧಿ ಸಿಗಲ್ಲ. ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ. ಹೆಚ್ಚುವರಿಯಾಗಿ ವಿತರಿಸಲಿದ್ದಾರೆ ಎಂದು ತಿಳಿಸಲಾಗಿದೆ. ಆದರೆ ಸರಕಾರದ ನಿರ್ಧಾರಕ್ಕೆ ಆಗಲೇ ಪಡಿತರದಾರರಿಗೆ ಆಕ್ಷೇಪ ವ್ಯಕ್ತವಾಗಿದೆ.

\

 

Vishwa News 24

Recent Posts

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ – vishwanews24

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…

14 hours ago

ಮಹಾರಾಷ್ಟ್ರ : ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ- vishwanews24

ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…

14 hours ago

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  – vishwanews24

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…

14 hours ago

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ – vishwanews24

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…

15 hours ago

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ – vishwanews24

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…

15 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

3 days ago