ಕಾಪು : ಪಡುಬಿದ್ರಿ ಶ್ರೀ ಬಾಲ ಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಇವರ ಜಂಟಿ ಸಹಯೋಗದೊಂದಿಗೆ ಪಡುಬಿದ್ರಿಯಲ್ಲಿ ಪ್ರಪ್ರಥಮ ಬಾರಿಗೆ ಕೃಷಿ ಮೇಳ ಕಾರ್ಯಕ್ರಮ ಶನಿವಾರ ಉದ್ಘಾಟನೆಗೊಂಡಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ” ಒಂದು ಕಾಲದಲ್ಲಿ ಮನೆಗೊಂದು ಕಲ್ಪವೃಕ್ಷ ಕಾಮಧೇನು ಇರಬೇಕೆಂದು ಹಿರಿಯರು ಮಾಡಿರುವವ ಸಂಪ್ರದಾಯ ಕೃಷಿಯೇ ಆ ಕಾಲದಲ್ಲಿ ಜೀವನವಾಗಿತ್ತು ಆದರೇ ಇಂದಿನ ಕಾಲಘಟ್ಟದಲ್ಲಿ ಎಲ್ಲಾವೂ ಬದಲಾಗಿದೆ ಆಧುನಿಕ ಜೀವನಕ್ಕೆ ಬೇಕಾಗುವ ಸವಲತ್ತುಗಳು ಮನೆಯಂಗಳದಲ್ಲಿದೆ ಅದರ ನಡುವೆ ನೂರಾರು ವಿದ್ಯಾರ್ಥಿಗಳ ಕೂಡುವಿಕೆಯೊಂದಿಗೆ ನಡೆಯುತ್ತಿರುವ ಈ ಕೃಷಿ ಮೇಳ ಮುಂದಿನ ಜನಾಂಗಕ್ಕೆ ಕೃಷಿಯ ಮಹತ್ವದ ಸಂದೇಶ ಸಾರುವಂತಿದೆ ಎಂದರು.
ಜೈನ ಮಠ ಮೂಡಬಿದಿರೆ ಭಾರತಭೂಷಣ ಡಾ.ಸ್ವಸ್ತಿಶ್ರೀ ಚಾರುಕೀರ್ತಿವ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಾಲಾಜಿ ಆರ್ ಮೆಂಡನ್,ಕೀಶೋರ್ ಆಳ್ವಾ,ವೈ ಸುಧೀರ್ ಕುಮಾರ್,ಮೋಹನ್ ರಾಜ್,ಎಲ್ ಹೇಮಂತ ಕುಮಾರ್,ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಶ್ರೀಮತಿ ಶಶಿಕಲ,ಪ್ರಸನ್ನ,ಸೌಮ್ಯಲತ ಶೆಟ್ಟಿ, ರೇಶ್ಮ ಮೆಂಡನ್,ರಾಯೇಶ್ ಪೈ,ಮೋಹನ್ ಸುವರ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಶಿಕಾಂತ್ ಪಡುಬಿದ್ರಿ ಸ್ವಾಗತಿಸಿ, ದೇವಾನಂದ್ ಭಟ್ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಶರಾವತಿ ಆರ್ ರಾವ್ ವಂದಿಸಿದರು.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…