Featured

ಪಡುಬಿದ್ರಿ : ಆನ್‌ಲೈನ್ ಇನ್ವೆಸ್ಟ್ ಹೆಸರಿನಲ್ಲಿ ವಂಚನೆ ; ₹1.50 ಲಕ್ಷ ಕಳೆದುಕೊಂಡ ಮಹಿಳೆ – vishwanews24

ಪಡುಬಿದ್ರಿ : ಆನ್‌ಲೈನ್ ಇನ್ವೆಸ್ಟ್ ಹೆಸರಿನಲ್ಲಿ ವಂಚನೆ ; ₹1.50 ಲಕ್ಷ ಕಳೆದುಕೊಂಡ ಮಹಿಳೆ

ಪಡುಬಿದ್ರಿ: ಆನ್‌ಲೈನ್ ಇನ್ವೆಸ್ಟ್ ಹೆಸರಿನಲ್ಲಿ ವಂಚನೆ ಮಾಡಿದ ಘಟನೆ ಪಡುಬಿದ್ರಿಯಲ್ಲಿ ಬೆಳಕಿಗೆ ಬಂದಿದೆ. ಚೈತ್ರಾ ಎನ್ನುವ ಮಹಿಳೆಗೆ ಆರೋಪಿಗಳಾದ ನಿಶಾ ವರ್ಮಾ ಹಾಗೂ ರಾಕೇಶ್ ಪರದಸಾನಿ ಎಂಬವರು ವಾಟ್ಸಪ್ ಮೂಲಕ ಸಂಪರ್ಕಿಸಿ, ಟೆಲಿಗ್ರಾಂ ಲಿಂಕ್ ಮೂಲಕ “mint” ಶೇರಿಂಗ್ ಅಕೌಂಟ್ ತೆರೆಯುವಂತೆ ತಿಳಿಸಿದ್ದರು.

ಅವರ ಮಾತು ನಂಬಿದ ಚೈತ್ರಾ ಅವರು ಖಾತೆ ತೆರೆದು, 19/03/2026 ರಂದು ಹಂತ ಹಂತವಾಗಿ ₹1,50,500 ಹಣವನ್ನು ಇನ್ವೆಸ್ಟ್ ಮಾಡಿದ್ದಾರೆ. ನಂತರ ಶೇರ್ ಟ್ರೇಡಿಂಗ್ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಹೂಡಿಕೆ ಮಾಡಿದ ಹಣವನ್ನು ವಾಪಸ್ ಕೇಳಿದಾಗ ಆರೋಪಿಗಳು ಹಣವಾಗಲಿ, ಲಾಭಾಂಶವಾಗಲಿ ನೀಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ

Vishwa News 24

Recent Posts

ಉಡುಪಿ: ಎ.10ರಂದು ನೇರ ಸಂದರ್ಶನ – vishwanews24

ಉಡುಪಿ: ಎ.10ರಂದು ನೇರ ಸಂದರ್ಶನ ಉಡುಪಿ: ನಗರದ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ ಟವರ್ಸ್‌ನ ಹರ್ಷ ರೀಟೇಲ್…

6 minutes ago

ಮಂಗಳೂರು : ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿ – vishwanews24

ಮಂಗಳೂರು : ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿ ಮಂಗಳೂರು: ತಿಂಗಳ ರಜೆ ಹಾಗೂ ಹಬ್ಬಗಳ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಉಂಟಾಗುವ ಪ್ರಯಾಣಿಕರ…

9 minutes ago

ಉಡುಪಿ: ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯದಿಂದಾಗಿ ಜನ ಸಾಮಾನ್ಯರ ಗೋಳು ಕೇಳುವವರಿಲ್ಲ : ಕುತ್ಯಾರು ನವೀನ್ ಶೆಟ್ಟಿ- vishwanews24

ಉಡುಪಿ: ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ: ಬಿಜೆಪಿಯಿಂದ ತೀವ್ರ ಹೋರಾಟದ ಎಚ್ಚರಿಕೆ ಉಡುಪಿ: ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯದಿಂದಾಗಿ ಜನ…

18 minutes ago

ಬೈಂದೂರು: ಮೀನುಗಾರರ ಸಹಕಾರ ಸಂಘಕ್ಕೆ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು – vishwanews24

ಬೈಂದೂರು: ಮೀನುಗಾರರ ಸಹಕಾರ ಸಂಘಕ್ಕೆ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು ಬೈಂದೂರು: ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ…

26 minutes ago

ಚಿಕ್ಕಮಗಳೂರು : ಮುಳ್ಳಯ್ಯನಗಿರಿ ಪ್ರವಾಸ ಬಂದಿದ್ದ ಕೇರಳದ 10ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ – vishwanews24

ಚಿಕ್ಕಮಗಳೂರು : ಮುಳ್ಳಯ್ಯನಗಿರಿ ಪ್ರವಾಸ ಬಂದಿದ್ದ ಕೇರಳದ 10ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ ಚಿಕ್ಕಮಗಳೂರು : ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಪ್ರವಾಸ…

40 minutes ago

ಕನ್ನಡ ವಿರೋಧಿ ರಾಜ್ಯಪಾಲ ಗೆಹ್ಲೋಟ್ ವಜಾಗೊಳಿಸಿ : ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ ಆಗ್ರಹ – vishwanews24

ಕನ್ನಡ ವಿರೋಧಿ ರಾಜ್ಯಪಾಲ ಗೆಹ್ಲೋಟ್ ವಜಾಗೊಳಿಸಿ : ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ ಆಗ್ರಹ ಹಿಂದಿ ಭಾಷೆ ಹೇರಿಕೆ ಹುನ್ನಾರ…

46 minutes ago