Featured

ಪಡುಬಿದ್ರಿ : ಕಂಪೆನಿಯ ವ್ಯವಹಾರದಲ್ಲಿ ತೊಡಗಿಸುವುದಾಗಿ ನಂಬಿಸಿ ರೂ.3.84 ಹಣ ಪಡೆದು ಲಕ್ಷ ವಂಚನೆ – Vishwanews24

ಪಡುಬಿದ್ರಿ : ಕಂಪೆನಿಯ ವ್ಯವಹಾರದಲ್ಲಿ ತೊಡಗಿಸುವುದಾಗಿ ನಂಬಿಸಿ ರೂ.3.84 ಹಣ ಪಡೆದು ಲಕ್ಷ ವಂಚನೆ

ಪಡುಬಿದ್ರಿ : ಕಂಪೆನಿಯ ವ್ಯವಹಾರದಲ್ಲಿ ತೊಡಗಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಣ ಪಡೆದು 3.84 ಲಕ್ಷ ರೂ. ವಂಚಿಸಿರುವುದಾಗಿ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ವಂಚನೆಗೆ ಒಳಗಾದ ಪಶ್ಚಿಮ ಬಂಗಾಳ ಮೂಲದ ಪ್ರಸ್ತುತ ಪಡುಬಿದ್ರೆಯ ನಡ್ಸಾಲು ಗ್ರಾಮದ ಕಂಚಿನಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿರುವ ನಾರಾಯಣಚಂದ್ರ ರಾಯ್ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರು ಯುಪಿಸಿಎಲ್ ಅದಾನಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಕಂಪೆನಿಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಪರಿಚಯದ ಜಾರ್ಖಂಡ್ ಮೂಲದ ಶಿವೇಶ್ ಕುಮಾರ್ ಎಂಬಾತ ಜಾರ್ಖಾಂಡ್‌ನಲ್ಲಿದ್ದು ಕೊಂಡು ನಾರಾಯಣ ಅವರಿಗೆ QNET ಕಂಪೆನಿಯ ವ್ಯವಹಾರದಲ್ಲಿ ತೊಡಗಿಸುವುದಾಗಿ ಹಾಗೂ ಒಳ್ಳೆಯ ಲಾಭಾಂಶ ನೀಡುವುದಾಗಿ ನಂಬಿಸಿದ್ದ. ಹಾಗೂ 2020 ರ ನ.18 ರಿಂದ ಡಿ.12 ರ ವರೆಗೆ ಹಂತ ಹಂತವಾಗಿ 5,60,000 ರೂ. ಹಣವನ್ನು ಗೂಗಲ್ ಪೇ ಮತ್ತು ನೆಪ್ಟ್ ಮುಖಾಂತರ ಆಪಾದಿತನ ಖಾತೆಗೆ ವರ್ಗಾಯಿಸಿ ಕೊಂಡಿದ್ದನು. ಈ ವ್ಯವಹಾರದಲ್ಲಿ ಆಪಾದಿತನು ನಾರಾಯಣ ಅವರಿಗೆ ಅನುಪಯುಕ್ತ ವಸ್ತುಗಳನ್ನು ಕಳುಹಿಸಿ ಅದರ ಮೊತ್ತವನ್ನು ರೂಪಾಯಿ 5,94,256/- ಎಂಬುದಾಗಿ ಬಿಲ್‌ನಲ್ಲಿ ನಮೂದಿಸಿ ನಾರಾಯಣ ಅವರ ವಿಳಾಸಕ್ಕೆ ಕಳುಹಿಸಿದ್ದನು. ಈ ವಸ್ತುಗಳನ್ನು ನಾರಾಯಣ ಅವರು ಸ್ವೀಕರಿಸಿ ವಸ್ತುಗಳು ಅನುಪಯುಕ್ತ ವಸ್ತುವಾಗಿರುವುದರಿಂದಆಪಾದಿತನಿಗೆ ವಾಪಾಸು ಕಳುಹಿಸಿರುತ್ತಾರೆ. ಹಾಗೂ ಈ ಬಗ್ಗೆ ವಿಚಾರಿಸಿದಾಗ ಅಪಾದಿತನು 2022 ರ ಮಾ.4 ರಂದು ರೂ. 1,75,199 ಹಣವನ್ನು ನಾರಾಯಣ ಅವರ ಖಾತೆಗೆ ನೆಪ್ಟ್ ಮುಖಾಂತರ ಹಿಂದಿರುಗಿಸಿದ್ದಾನೆ. ಆದರೆ ಉಳಿದ 3,84,801 ರೂ.ನ್ನು ಕೇಳಿದಾಗ ಹಣವನ್ನು ವಾಪಾಸ್ಸು ನೀಡದೇ, ವ್ಯವಹಾರದಲ್ಲೂ ತೊಡಗಿಸದೇ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

1 hour ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

2 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

3 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

3 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

3 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

3 hours ago