ಕೊರೊನಾ ಹಿನ್ನಲೆಯಲ್ಲಿ ಮನೆಯಲ್ಲೇ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಾವಾಹಿಸುತ್ತಿದ್ದ ಬ್ರಹ್ಮಸ್ಥಾನ ಬಳಿಯ ನಿವಾಸಿ ಯುವತಿಯೋರ್ವಳು ತಾನು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಕೋಣೆಯಲ್ಲೇ ತಾಯಿಯ ಸೀರೆಯನ್ನು ಉರುಳಾಗಿ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೃತ ಯುವತಿ ಬ್ರಹ್ಮಸ್ಥಾನ ಬಳಿ ನಿವಾಸಿ ಎಲೆಕ್ಟ್ರಿಕಲ್ ಉದ್ಯೋಗಿ ರಾಮಕೃಷ್ಣ ಎಂಬವರ ಎರಡನೇ ಪುತ್ರಿ ಸೌಜನ್ಯ(22) ಬಿಎಸ್ಸಿ ಪದವಿ ಪಡೆದಿರುವ ಈಕೆ ಕಳೆದ ಹತ್ತು ತಿಂಗಳಿಂದ ಹೈದರಾಬಾದ್ ನ ಖಾಸಗಿ ವಿಪೆÇ್ರ ಕಂಪನಿಯಲ್ಲಿ ಕೆಲಸಕ್ಕಿದ್ದು, ಕೊರೊನಾ ಹಿನ್ನಲೆಯಲ್ಲಿ ಕೆಲಸಕ್ಕೆ ಸೇರಿದ ದಿನದಿಂದ ಮನೆಯಲ್ಲೇ ಕಂಪನಿಯ ಕೆಲಸ ನಿರ್ವಾಹಿಸುತ್ತಿದ್ದಳು. ತಂದೆ, ತಾಯಿ ಹಾಗೂ ಅಜ್ಜಿಯೊಂದಿಗೆ ವಾಸವಾಗಿದ್ದ ಇವಳು ಎಂದಿನಂತೆ ತನ್ನ ಕೋಣೆಯ ಬಾಗಿಲ ಚಿಲಕ ಹಾಕಿ ಕೆಲಸ ಮಾಡಿಕೊಂಡಿದ್ದಳು. ಮುಂಜಾನೆ ತಾನೇ ಮ್ಯಾಗಿ ಮಾಡಿ ತಿಂದಿದ್ದಳು. ತಂದೆಯ ಅನಾರೋಗ್ಯದ ಕಾರಣ ಸುರತ್ಕಲ್ ಗೆ ವೈದ್ಯರ ಕಾರಣ ಬೆಳಗ್ಗೆ 10ರ ಸುಮಾರಿಗೆ ತಂದೆ ತಾಯಿ ಹೊರಟಿದ್ದರು. ತಾಯಿ ಮೊಬೈಲ್ ಗೆ ರೀಚಾರ್ಜ್ ಮಾಡುತ್ತೆನೆಂದ ಆಕೆ ಇವರು ಆಸ್ಪತ್ರೆಯಲ್ಲಿ ಇದ್ದ ವೇಳೆ ಕರೆ ಮಾಡಿ ರೀಚಾರ್ಜ್ ಆಗುತ್ತಿಲ್ಲ ಎಂದಾಕೆ ಮತ್ತೆ ಕೆಲವೇ ಹೊತ್ತಲ್ಲಿ ರೀಚಾರ್ಜ್ ಆಗಿದೆ ಎಂಬುದಾಗಿ ತಾಯಿಗೆ ಕರೆಮಾಡಿ ತಿಳಿಸಿರುವುದೇ ತಾಯಿಯೊಂದಿಗಿನ ಕೊನೆಯ ಮಾತು.
ಮಧ್ಯಾಹ್ನ ಹನ್ನೆರಡರ ಸುಮಾರಿಗೆ ಸ್ಥಳೀಯರೆಲ್ಲಾ ಇದ್ದ ವಾಟ್ಸಾಪ್ ಗ್ರೂಪ್ ನಿಂದ ಈಕೆ ಹೊರ ಬಂದಿದ್ದಳು. ಮಿತವಾಗಿ ಮಾತನಾಡುತ್ತಿದ್ದ ಈಕೆ ಸ್ಥಳೀಯ ಬ್ರಹ್ಮಸ್ಥಾನವನ್ನು ದಿನನಿತ್ಯ ಮುಂಜಾನೆ ಶುಚಿಗೊಳಿಸುತ್ತಿದ್ದಳು. ಮದ್ದಿಗೆ ಹೋದ ತಂದೆತಾಯಿ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮರಳಿ ಮನೆಗೆ ಬಂದಾಗ ಕೋಣೆಯ ಬಾಗಿಲು ಹಾಕಿದ ಸ್ಥಿತಿಯಲ್ಲಿದ್ದು ಬಾಗಿಲು ಬಡಿದರೂ ತೆರೆಯದಿದ್ದಾಗ, ಹಿಂದಿನಿಂದ ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಗಳನ್ನು ನೋಡಿ ಆಕಾಶವೇ ತಲೆ ಮೇಲೆ ಬಿದ್ದ ಅನುಭವ ಅನುಭವಿಸಿದರು. ಶವ ನೇತಾಡುತ್ತಿದ್ದ ಪಕ್ಕದಲ್ಲಿ ಕೃತ್ಯಕ್ಕೆ ಬಳಸಿದ ಎತ್ತರ ಮರದ ಸ್ಟೂಲ್ ಇತ್ತು.
ಮಗಳಾಡಿದ ಒಂದೊಂದು ವಾಕ್ಯವನ್ನೂ ಮೆಲುಕು ಹಾಕಿ ರೋದಿಸುತ್ತಿದ್ದ ತಾಯಿಯ ಮಾತು ಎಲ್ಲರ ಕಣ್ಣಿನಲ್ಲಿ ನೀರಾಡುವಂತೆ ಮಾಡಿದೆ. ಮನೆ ಸಮೀಪ ನಡೆಯಲಿದ್ದ ಮದುವೆಯೊಂದಕ್ಕೆ ತಾಯಿ ಎರಡು ಸಾವಿರ ಮುಖ ಬೆಲೆಯ ಸಾರಿ ತರುವುದಾಗಿ ಹೇಳಿದಾಗ ಬೇಡ ಐದು ಸಾವಿರದ್ದು ತರೋಣ ಎಂದಿದ್ದಾಳೆ ಎಂದಾಗಿದಾಗಿ ತಾಯಿಯ ಕಣ್ಣೀರಿನ ಮಾತು. ಸೌಮ್ಯ ಸ್ವಾಭಾವದ ಸೌಜನ್ಯ ಸಾವಿಗೆ ಮುನ್ನ ಡೆತ್ ನೋಟ್ ಒಂದನ್ನು ಇಂಗ್ಲೀಷ್ ನಲ್ಲಿ ಬರೆದು ಎದುರಿಗೆ ಕಾಣುವಂತೆ ಪಕ್ಕದ ಗಾದ್ರೇಜ್ ಗೆ ಅಯಸ್ಕಾಂತದ ಸಹಾಯದಿಂದ ಅಂಟಿಸಿ ಇಟ್ಟಿದ್ದಳು. ಮನೆಮಂದಿಯೊಂದಿಗೆ ಅನ್ಯೋನ್ಯತೆಯಲ್ಲಿ ಇದ್ದ ಈ ಯುವತಿ ಡೆತ್ ನೋಟ್ ನಲ್ಲಿ ಬಾಲ್ಯದ ದಿನಗಳ ಬಗ್ಗೆ ಹಾಗೂ ನಾನು ನಿಮ್ಮನ್ನು ಬಿಟ್ಟು ಹೋಗುವುದಾಗಿಯೂ ಅಪ್ಪ ಅಮ್ಮ ನನ್ನನ್ನು ಕ್ಷಮಿಸಿ ಎಂಬುದಾಗಿ ಬರೆದಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮಣಿಪಾಲಕ್ಕೆ ಸಾಗಿಸಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…